ಥೋ, ಕೂದಲು ಅಂತಾ ಊಟದ ವೇಳೆ ಅನೇಕರು ಮುಖ ಹಿಂಡಿರ್ತಾರೆ. ಮತ್ತೆ ಕೆಲವರು ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಬೈತಾರೆ. ನಾವೂ ಊಟ ಮಾಡ್ತಿದ್ದೇವೆ, ನಮಗೆ ಸಿಗದ ಕೂದಲು ನಿಮಗೆ ಹೇಗೆ ಸಿಕ್ತು ಅಂತಾ ಕೇಳೋದೂ ಇದೆ. ಊಟದಲ್ಲಿ ಕೂದಲು ಸಿಗಲು ಕಾರಣವೇನು ಗೊತ್ತಾ?
ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿ ದಿನ ನಡೆಯುವ ಪ್ರತಿಯೊಂದು ವಿಷ್ಯದ ಬಗ್ಗೆಯೂ ಹೇಳಲಾಗಿದೆ. ಊಟ ಮಾಡುವಾಗ ಕೈಕಾಲು ಏಕೆ ತೊಳೆಯಬೇಕು ಎನ್ನುವುದ್ರಿಂದ ಹಿಡಿದು ಸ್ನಾನ ಹೇಗೆ ಮಾಡಬೇಕು ಎನ್ನುವವರೆಗೂ ಅನೇಕ ವಿಷ್ಯಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಮನೆ ಇರಲಿ ಇಲ್ಲ ಹೊಟೇಲ್ ಇರಲಿ, ಊಟಕ್ಕೆ ಕುಳಿತಾಗ ಅಥವಾ ತಿಂಡಿಗೆ ಕುಳಿತಾಗ ಆಹಾರದಲ್ಲಿ ಕೂದಲು ಬರುತ್ತದೆ. ಕೆಲವರು ಕೂದಲನ್ನು ಬದಿಗಿಟ್ಟು ಆಹಾರ ಸೇವನೆ ಮಾಡ್ತಾರೆ. ಮತ್ತೆ ಕೆಲವರಿಗೆ ಇದು ಹೇಸಿಗೆ ಎನ್ನಿಸುತ್ತದೆ. ಹಾಗಾಗಿ ಆ ಆಹಾರವನ್ನು ಸೇವನೆ ಮಾಡೋದಿಲ್ಲ. ಮತ್ತೆ ಕೆಲವರಿಗೆ ಜ್ಯೋತಿಷ್ಯದ ಜ್ಞಾನವಿರುತ್ತದೆ. ಆಹಾರದಲ್ಲಿ ಕೂದಲು ಸಿಕ್ಕಿದರೆ ಏನಾಗುತ್ತದೆ ಎಂಬುದು ತಿಳಿದಿರುವ ಕಾರಣ ಅವರು ಆತಂಕಕ್ಕೆ ಒಳಗಾಗ್ತಾರೆ. ಬಹುತೇಕ ಜನರಿಗೆ ಆಹಾರದಲ್ಲಿ ಕೂದಲು ಸಿಗೋದು ಯಾವುದರ ಸಂಕೇತ ಎಂಬುದು ತಿಳಿದಿಲ್ಲ. ಜ್ಯೋತಿಷ್ಯ ಈ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ನಾವಿಂದು ಹೇಳ್ತೇವೆ.
ಆಹಾರ (Food) ದಲ್ಲಿ ಕೂದಲು ಸಿಗುವ ಬಗ್ಗೆ ಜ್ಯೋತಿಷ್ಯ (Astrology) ಏನು ಹೇಳುತ್ತದೆ? : ಜೀವನದಲ್ಲಿ ಒಮ್ಮೆಯಾದ್ರೂ ನಮಗೆ ನಿಮಗೆಲ್ಲ ಆಹಾರದಲ್ಲಿ ಕೂದಲು ಸಿಗುತ್ತದೆ. ಮನೆಯಲ್ಲಿರುವ ಹೆಣ್ಣು ಮಕ್ಕಳು (Children ) ತಲೆ ಸ್ನಾನ ಮಾಡಿದ ದಿನ ಅಥವಾ ಅಡುಗೆ ಮನೆ ಪಕ್ಕದಲ್ಲಿ ತಲೆ ಬಾಚಿಕೊಂಡಾಗ ಕೂದಲು (Hair) ಆಹಾರ ಸೇರುತ್ತದೆ ಎಂದು ನಾವು ಭಾವಿಸ್ತೇವೆ. ಒಂದೆರಡು ಬಾರಿ ಕೂದಲು ಸಿಕ್ಕಿದ್ರೆ ಅದನ್ನು ಸಾಮಾನ್ಯ ಎನ್ನಬಹುದೇನೋ, ಆದ್ರೆ ಪದೇ ಪದೇ ಕೂದಲು ಸಿಕ್ಕಿದೆ ಇದು ಕೆಲವು ಅಹಿತಕರ (Unpleasant) ಘಟನೆಯ ಸಂಕೇತವಾಗಿದೆ.
undefined
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೂದಲು ಸಿಕ್ಕ ಆಹಾರವನ್ನು ಸೇವನೆ ಮಾಡಬಾರದು. ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಕೂದಲು ಹೊಟ್ಟೆ (Stomach) ಸೇರಿದ್ರೆ ಆರೋಗ್ಯಕ್ಕೆ ಹಾನಿಕರ : ಕೂದಲಿರುವ ಆಹಾರ ಸೇವನೆ ಮಾಡಿದ್ರೆ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಕೂದಲು ಹೊಟ್ಟೆ ಸೇರಿದ್ರೆ ಅನೇಕ ರೋಗಗಳು ಜನ್ಮ ತಾಳುತ್ತವೆ. ಗಂಟಲಿನ ಸೋಂಕಿನಂತಹ ಸಮಸ್ಯೆ ನಿಮ್ಮನ್ನು ಕಾಡುವ ಸಾಧ್ಯತೆಯಿದೆ. ಕೂದಲಿನಲ್ಲಿ ಒಂದು ರೀತಿಯ ಬ್ಯಾಕ್ಟೀರಿಯಾವಿದೆ ಮತ್ತು ಈ ಬ್ಯಾಕ್ಟೀರಿಯಾ (Bacteria) ವು ಆಹಾರದ ಮೂಲಕ ದೇಹಕ್ಕೆ ಸೇರಿ ಹಾನಿಯುಂಟು ಮಾಡುತ್ತದೆ.
ಮಹಿಳೆಯರು ತೆಂಗಿನಕಾಯಿ ಒಡೆದ್ರೆ ಮಕ್ಕಳಿಗೆ ಸಮಸ್ಯೆ!
ಪಿತೃ ದೋಷದ ಸಂಕೇತ :
1. ಕೆಲವೊಮ್ಮೆ ಆಹಾರದಲ್ಲಿ ಕೂದಲು ಸಿಗುವುದು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಆದರೆ ಒಂದೇ ವ್ಯಕ್ತಿಗೆ ಪದೇ ಪದೇ ಕೂದಲು ಸಿಕ್ಕಿದ್ರೆ ಅದು ಪಿತೃ ದೋಷದ ಸಂಕೇತವೂ ಆಗಿರಬಹುದು.
2. ಇದು ಪಿತೃ ಪಕ್ಷದ ಸಮಯದಲ್ಲಿ ಸಂಭವಿಸಿದರೆ, ನಿಮ್ಮ ಪೂರ್ವಜರು ನಿಮ್ಮ ಮೇಲೆ ಕೋಪಗೊಂಡಿದ್ದಾರೆ ಎಂದು ಸೂಚಿಸುತ್ತದೆ. ಈ ಸಂದರ್ಭದಲ್ಲಿ ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
3. ಪಿತೃ ದೋಷದಿಂದ ಹೀಗಾಗ್ತಿದ್ದರೆ ಪಿತೃ ದೋಷ ನಿವಾರಣೆಗೆ ಶ್ರಮಿಸಬೇಕು ಹಾಗೂ ಪೂರ್ವಜರ ಶಾಂತಿ ಮಾಡಬೇಕು.
ಪಿತೃದೋಷದಿಂದ ಅನೇಕ ಸಮಸ್ಯೆ ಮನುಷ್ಯರನ್ನು ಕಾಡುತ್ತದೆ. ಅನಾರೋಗ್ಯ, ಮಕ್ಕಳ ಸಮಸ್ಯೆ, ಉದ್ಯೋಗದಲ್ಲಿ ಸಮಸ್ಯೆ ಸೇರಿದಂತೆ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಈ ರೀತಿ ಅಂಗಾಲಿದ್ದರೆ ಅದೃಷ್ಟವೋ ಅದೃಷ್ಟ
ಪಿತೃದೋಷ ಕಾಡ್ತಿದ್ದರೆ ಏನು ಮಾಡ್ಬೇಕು :
1. ಜಾತಕದಲ್ಲಿ ಪಿತೃದೋಷವಿದ್ದರೆ, ದಕ್ಷಿಣ ದಿಕ್ಕಿಗೆ ಪೂರ್ವಜರ ಫೋಟೋವನ್ನು ಇಟ್ಟು ಪ್ರತಿದಿನ ಮಾಲೆ ಹಾಕುವ ಮೂಲಕ ಅವರನ್ನು ನೆನಪಿಸಿಕೊಳ್ಳಬೇಕು.
2. ಪೂರ್ವಜರ ಮರಣದ ದಿನಾಂಕದಂದು ಬ್ರಾಹ್ಮಣರಿಗೆ ಗೌರವಪೂರ್ವಕವಾಗಿ ಅನ್ನವನ್ನು ನೀಡಬೇಕು ಮತ್ತು ಸಾಧ್ಯವಾದಷ್ಟು ದಾನಗಳನ್ನು ಮಾಡಬೇಕು.
3. ಪಿತೃ ದೋಷ ಪರಿಹಾರಕ್ಕಾಗಿ ವ್ಯಕ್ತಿಯು ಮಧ್ಯಾಹ್ನದ ಸಮಯದಲ್ಲಿ ಮನೆಯ ಸಮೀಪವಿರುವ ಅಶ್ವತ್ಥ ಮರಕ್ಕೆ ನೀರನ್ನು ಅರ್ಪಿಸಬೇಕು.