ಉಡುಪಿ ಅಷ್ಟಮಿ ಗೊಂದಲ; ಈ ಬಾರಿ ಎರಡು ಅಷ್ಟಮಿ!

By Suvarna News  |  First Published Aug 3, 2022, 2:39 PM IST

ಉಡುಪಿಯಲ್ಲಿ ಈ ಬಾರಿ ಕೃಷ್ಣಾಷ್ಟಮಿ ಆಚರಣೆ ಬಗ್ಗೆ ಗೊಂದಲ ಉಂಟಾಗಿದ್ದು, ಅಷ್ಟಮಠಗಳಲ್ಲಿಯೇ ದಿನಾಂಕದ ವಿಷಯದಲ್ಲಿ ಏಕನಿರ್ಧಾರ ಸಾಧ್ಯವಾಗಿಲ್ಲ. ಇದರಿಂದ ಈ ಬಾರಿ ಎರಡು ಪ್ರತ್ಯೇಕ ದಿನಗಳಲ್ಲಿ ಅಷ್ಟಮಿ ಆಚರಣೆ ಇದೆ. 


ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿಯ ಅಷ್ಟಮಿ ಲೋಕಪ್ರಸಿದ್ಧಿ ಪಡೆದಿದೆ. ಕರ್ನಾಟಕ ಕರಾವಳಿಯಲ್ಲಿ ಆಚರಿಸುವ ಅತಿ ದೊಡ್ಡ ಹಬ್ಬಗಳಲ್ಲಿ ಅಷ್ಟಮಿಯೂ ಒಂದು. ಉಡುಪಿ ಅಷ್ಟಮಿ ಎಂದರೆ ಲಕ್ಷಾಂತರ ಜನ ಸೇರುತ್ತಾರೆ, ಆದರೆ ಈ ಬಾರಿ ಕೃಷ್ಣಮಠದ ಅಷ್ಟಮಿ ಆಚರಣೆಯಲ್ಲಿ ಗೊಂದಲ ಉಂಟಾಗಿದೆ.

Latest Videos

undefined

ತ ಮತ ಸ್ಥಾಪಕ ಶ್ರೀಮಧ್ವಾಚಾರ್ಯರು ಉಡುಪಿಗೆ ದ್ವಾರಕೆಯಿಂದ ಬಂದ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ್ದು ಇತಿಹಾಸ. ಇದೇ ಕಾರಣಕ್ಕೆ ಉಡುಪಿಯ ಕೃಷ್ಣ ಜನ್ಮಾಷ್ಟಮಿಗೆ ವಿಶೇಷ ಮಹತ್ವವಿದೆ. ಹಲವು ಗೊಂದಲಗಳ ನಡುವೆ ಈ ಬಾರಿ ಅಷ್ಟಮಿಯ ಆಚರಣೆ ಮೂರು ದಿನ ನಡೆಯಲಿದೆ.

ಈ ಹಿಂದೆಯೂ ಹಲವು ಬಾರಿ ಎರಡು ಅಷ್ಟಮಿ ಆಚರಣೆಗಳಿಂದ ಗೊಂದಲ ಉಂಟಾಗಿತ್ತು. ಈ ಬಾರಿಯೂ ಅದೇ ಸಮಸ್ಯೆ ತಲೆದೋರಿದೆ. ಉಡುಪಿಯ ಭಕ್ತರಿಗೆ ಶ್ರೀಕೃಷ್ಣಮಠದಲ್ಲಿ ನಡೆಯುವ ಅಷ್ಟಮಿ, ವಿಟ್ಲ ಪಿಂಡಿಯೇ ನಿರ್ಣಾಯಕವಾಗಿದ್ದು ಈ ಬಾರಿ ಚಾಂದ್ರಮಾನ,  ಸೌರಮಾನ ಅಷ್ಟಮಿಯ ಗೊಂದಲವಿಲ್ಲದಿದ್ದರೂ ಎರಡು ಅಷ್ಟಮಿ ಆಚರಿಸಲಾಗುತ್ತಿದೆ. 

ದಸರಾ ಬಹಿಷ್ಕರಿಸಲು ಆನೆ ಮಾವುತ, ಕಾವಡಿಗರ ಸಂಘ ನಿರ್ಧಾರ

ಪರ್ಯಾಯ ಶ್ರೀಕೃಷ್ಣಾಪುರ ಮಠ, ಸೋದೆ, ಕಾಣಿಯೂರು, ಶೀರೂರು, ಭೀಮನಕಟ್ಟೆ ಮಠವು ತಿಥಿ ನಿರ್ಣಯ ಶ್ರೀಕೃಷ್ಣ ಪಂಚಾಂಗವನ್ನು (ಆರ್ಯಭಟೀಯ) ಅನುಸರಿಸುತ್ತಿದ್ದು, ಈ ಬಾರಿ ಆ. 19, ರಾತ್ರಿ 11.54ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ, ಆ. 20ರಂದು ವಿಟ್ಲ ಪಿಂಡಿ (ಶ್ರೀಕೃಷ್ಣ ಲೀಲೋತ್ಸವ) ಸಂಭ್ರಮದಿಂದ ನಡೆಯಲಿದೆ.

ಆದರೆ ಪೇಜಾವರ, ಪಲಿಮಾರು, ಅದಮಾರು ಹಾಗೂ ಪುತ್ತಿಗೆ ಮಠವು ದೃಗ್ಗಣಿತ ಪಂಚಾಂಗವನ್ನು ಅನುಸರಿಸುತ್ತಿದ್ದು ಆ. 18,ರಾತ್ರಿ 11.39ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನವಾದರೆ, ಆ. 19, 20ಕ್ಕೆ ವಿಟ್ಲ ಪಿಂಡಿ ಶ್ರೀಕೃಷ್ಣ ಲೀಲೋತ್ಸವ) ಆಚರಿಸಲಾಗುತ್ತಿದೆ. ಈ ನಡುವೆ ಪುತ್ತಿಗೆ ಮಠದಲ್ಲಿ ಮಾತ್ರ ಅಷ್ಟಮಿ ಏಕಾಚರಣೆ ನೆಲೆಯಲ್ಲಿ ಆ. 19, 20ಕ್ಕೆ ಅಷ್ಟಮಿ/ವಿಟ್ಲ ಪಿಂಡಿ ಜರುಗಲಿದೆ. 

ಸಿಂಹ ಮಾಸದಲ್ಲಿ ಅಷ್ಟಮಿ ತಿಥಿ ಜತೆಗೆ ರೋಹಿಣಿ ನಕ್ಷತ್ರ ಬಂದರೆ ಅದು ಶ್ರೀಕೃಷ್ಣಜಯಂತಿ. ಅಷ್ಟಮಿ ತಿಥಿಯಿದ್ದು ರೋಹಿಣಿ ನಕ್ಷತ್ರವಿಲ್ಲದಿದ್ದರೆ ಶ್ರೀಕೃಷ್ಣ ಜನ್ಮಾಷ್ಟಮಿ, ಈ ಬಾರಿ ಅಷ್ಟಮಿ ತಿಥಿ, ಜತೆಗೆ ಕೃತ್ತಿಕಾ ನಕ್ಷತ್ರವಿದೆ. ಚಾಂದ್ರಮಾನ ಅಷ್ಡಮಿ ಆಚರಣೆಯು (ಧಾರ್ಮಿಕ ಪಂಚಾಂಗ )ಆ. 19, ರಾತ್ರಿ 11.36ಕ್ಕೆ ನಡೆಯಲಿದೆ.

ಮಹಿಳೆಯರು ತೆಂಗಿನಕಾಯಿ ಒಡೆದ್ರೆ ಮಕ್ಕಳಿಗೆ ಸಮಸ್ಯೆ!

ಉಡುಪಿಯ ಅಷ್ಟಮಠಗಳಿಗಾದರೂ ಏಕರೂಪ ಪಂಚಾಂಗ, ಏಕರೂಪದ ಏಕಾದಶಿ ಆಚರಣೆಯ ಬೇಡಿಕೆ ಬಹುಕಾಲದಿಂದ ಇದೆ. ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಕೀರ್ತಿಶೇಷರಾದ ಬಳಿಕ ಈ ಬೇಡಿಕೆ ಮತ್ತಷ್ಟು ಮಹತ್ವ ಕಳೆದುಕೊಂಡಿದೆ. ಆದರೆ ಉಡುಪಿಯ ಜನ ಪರ್ಯಾಯ ಮಠದವರು ಆಚರಿಸುವ ದಿನದಂದೇ ಅಷ್ಟಮಿಯನ್ನು ಆಚರಿಸಲು ರೂಡಿ ಮಾಡಿಕೊಂಡಿದ್ದಾರೆ.

click me!