ಈ ನಾಲ್ಕು ರಾಶಿಯವ್ರು ಸಿಕ್ಕಾಪಟ್ಟೆ ಶಾರ್ಪ್, ಬುಧ ಶನಿ ಕರುಣೆ ಇವರಿಗೆ ಜನ್ಮಜಾತಸ್ಯ ವರ!

By Suvarna News  |  First Published Aug 3, 2022, 3:41 PM IST

ಈ ನಾಲ್ಕು ರಾಶಿಯವರು ಬುದ್ಧಿವಂತಿಕೆಯ ದೇವರು, ಬುಧ ಮತ್ತು ನ್ಯಾಯದ ದೇವರು ಶನಿಯಿಂದ ಆಶೀರ್ವದಿಸಲ್ಪಟ್ಟೋರು. ಹಾಗಾಗಿ ಅವರ ಮೈಂಡ್ ತುಂಬಾ ಶಾರ್ಪ್..


ಜ್ಯೋತಿಷ್ಯದ ಪ್ರಕಾರ, ರಾಶಿಚಕ್ರದಿಂದ ಯಾವುದೇ ವ್ಯಕ್ತಿಯ ಜೀವನದ ಬಗ್ಗೆ ಬಹಳಷ್ಟು ತಿಳಿದುಕೊಳ್ಳಬಹುದು. ಪ್ರತಿಯೊಂದು ರಾಶಿಚಕ್ರದ ಜನರು ಕೆಲವು ಅಥವಾ ಇತರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಹೊಂದಿರುತ್ತಾರೆ. ಇಂದು ನಾವ ಸಖತ್ ಶಾರ್ಪ್ ಮೈಂಡ್ ಹೊಂದಿರುವ 4 ರಾಶಿಚಕ್ರ ಚಿಹ್ನೆಗಳ ಬಗ್ಗೆ ಮಾತನಾಡೋಣ. ಇದರಲ್ಲಿ ಜನಿಸಿದ ಜನರು ಅದೃಷ್ಟದಲ್ಲಿ ಶ್ರೀಮಂತರು. ಇವರು ತುಂಬಾ ತೀಕ್ಷ್ಣವಾದ ಮನಸ್ಸು ಹೊಂದಿದ್ದಾರೆ. ಏಕೆಂದರೆ ಅವರು ಬುದ್ಧಿವಂತಿಕೆಯ ದೇವರು ಬುಧ, ಮತ್ತು ನ್ಯಾಯದ ದೇವರು ಶನಿಯಿಂದ ಆಶೀರ್ವದಿಸಲ್ಪಟ್ಟವರು. ಇವರು ಯಾವ ರಾಶಿಯವರು ನೋಡೋಣ.

ಮಿಥುನ ರಾಶಿ(Gemini) 
ಈ ರಾಶಿಯ ಆಡಳಿತ ಗ್ರಹ ಬುಧ. ಬುಧದ ಕೃಪೆಯಿಂದ ಈ ರಾಶಿಯ ಜನರು ಬುದ್ಧಿವಂತರು ಮತ್ತು ಶ್ರಮಜೀವಿಗಳು. ಅವರು ತಮ್ಮ ಬುದ್ಧಿವಂತಿಕೆಯ ಬಲದ ಮೇಲೆ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸಬಹುದು. ಅವರು ಮಾತನಾಡುವುದರಲ್ಲಿ ಬಹಳ ಪ್ರವೀಣರು. ಮಾತು ಕೂಡಾ ಇವರಿಗೆ ಬುಧ ಗ್ರಹದ ಕೃಪೆಯೇ. ಇದರಿಂದಾಗಿ ಒಜನರು ತಕ್ಷಣವೇ ಅವರಿಂದ ಪ್ರಭಾವಿತರಾಗುತ್ತಾರೆ. ಅವರು ಉತ್ತಮ ನಾಯಕತ್ವದ ಸಾಮರ್ಥ್ಯವನ್ನು ಕೂಡಾ ಹೊಂದಿದ್ದಾರೆ. ಈ ಕಾರಣದಿಂದ ವೃತ್ತಿ ಕ್ಷೇತ್ರದಲ್ಲಿ ಅವರು ನಾಯಕತ್ವ ಗಳಿಸುತ್ತಾರೆ. ಎಲ್ಲರನ್ನೂ ಸೆಳೆಯುತ್ತಾರೆ. ಬಹಳಷ್ಟು ಜನರ ಪ್ರೀತಿ ಗಳಿಸುತ್ತಾರೆ. 

Tap to resize

Latest Videos

ಕನ್ಯಾ ರಾಶಿ(Virgo)
ಈ ರಾಶಿಯವರಿಗೂ ಬುಧನ ಆಶೀರ್ವಾದವಿದೆ. ಈ ಜನರು, ಒಮ್ಮೆ ಏನಾದರೂ ಮಾಡಲು ನಿರ್ಧರಿಸಿದರೆ, ಅದರಲ್ಲಿ ಯಶಸ್ಸನ್ನು ಪಡೆದ ನಂತರವೇ ಅವರು ಸುಮ್ಮನಾಗುವುದು. ಅವರು ಹಠಮಾರಿ ಮತ್ತು ಗೀಳು ಸ್ವಭಾವದವರು. ಅವರಿಗೆ ಎಂದಿಗೂ ಯಾವುದಕ್ಕೂ ಕೊರತೆಯಿರುವುದಿಲ್ಲ. ಅವರು ತಮ್ಮ ವೃತ್ತಿಜೀವನದಲ್ಲಿ ಉನ್ನತ ಸ್ಥಾನವನ್ನು ಸಾಧಿಸುತ್ತಾರೆ. ಬುಧನ ಅನುಗ್ರಹದಿಂದ ಅವರು ವ್ಯಾಪಾರ ವೃತಿಯಲ್ಲಿ ಹೆಚ್ಚು ಹಣ ಸಂಪಾದಿಸುತ್ತಾರೆ. ಮಾತೇ ಮುಖ್ಯವಾಗಿರುವ ವೃತ್ತಿಗಳೂ ಇವರಿಗೆ ಯಶಸ್ಸನ್ನು ತಂದುಕೊಡುತ್ತವೆ. ಇವರು ತೀಕ್ಷ್ಮಮತಿಯವರಾದ ಕಾರಣ ಜೀವನದಲ್ಲಿ ಬೆಳೆಯುವುದು ಹೇಗೆಂದು ಬೇಗ ತಿಳಿದುಕೊಂಡು ಬಿಡುತ್ತಾರೆ. ಅದಕ್ಕೇ ಚಿಕ್ಕ ವಯಸ್ಸಲ್ಲೇ ಯಶಸ್ಸು ಇವರ ಪಾಲಾಗುತ್ತದೆ. 

ಉಡುಪಿ ಅಷ್ಟಮಿ ಗೊಂದಲ; ಈ ಬಾರಿ ಎರಡು ಅಷ್ಟಮಿ!

ಮಕರ ರಾಶಿ(Capricorn)
ಈ ರಾಶಿಯ ಜನರು ಶನಿದೇವನಿಂದ ಆಶೀರ್ವಾದ ಪಡೆದವರು. ಅವರು ಬುದ್ಧಿವಂತರು ಮತ್ತು ಶ್ರಮಜೀವಿಗಳು. ಯಾವಾಗಲೂ ವಿಭಿನ್ನ ಗುರುತನ್ನು ಮಾಡಲು ಬಯಸುತ್ತಾರೆ. ಅವರು ತಮ್ಮ ಕೆಲಸವನ್ನು ಮಾಡುತ್ತಾರೆ. ಜಗತ್ತು ಅವರ ಬಗ್ಗೆ ಏನು ಯೋಚಿಸುತ್ತದೆ ಎಂಬುದನ್ನು ಅವರು ಲೆಕ್ಕಿಸುವುದಿಲ್ಲ. ಅವರು ತಮ್ಮದೇ ಆದ ರೀತಿಯಲ್ಲಿ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ತಮ್ಮ ಕಾರ್ಯಗಳ ಮೇಲೆ ಮಾತ್ರ ಗಮನ ಹರಿಸುತ್ತಾರೆ ಮತ್ತು ತಮ್ಮ ಇಂದಿನ ದಿನವನ್ನು ಉತ್ತಮಗೊಳಿಸುವ ಬಗ್ಗೆ ಯೋಚಿಸುತ್ತಾರೆ. ಮೊದಲೇ ಈ ರಾಶಿಗೆ ಶನಿ ಕೃಪೆ ಇದೆ. ಅಂಥದರಲ್ಲಿ ಇವರು ಶ್ರಮಜೀವಿಗಳೂ ಹೌದಾದ ಕಾರಣ ಕರ್ಮಕ್ಕೆ ತಕ್ಕ ಫಲ ನೀಡುವ ಶನಿಯು ಇವರನ್ನು ಸೋಲಲು ಬಿಡುವುದಿಲ್ಲ. ಅವನು ಇವರಿಗೆ ಗೆಲುವಿನ ಗುಟ್ಟನ್ನು ಹೇಳಿಕೊಡುತ್ತಾನೆ. ಸದಾ ಸತ್ಯ, ನ್ಯಾಯ, ಪರಿಶ್ರಮವನ್ನು ನಂಬುವವರು ಇವರು. 

ಮಹಿಳೆಯರು ನೋಡೋಂಗಿಲ್ಲ ಮಹಾಕಾಳನ ಭಸ್ಮಾರತಿ!

ಕುಂಭ ರಾಶಿ(Aquarius)
ಈ ರಾಶಿಯ ಅಧಿಪತಿ ಕೂಡಾ ಶನಿ ದೇವ. ಈ ಜನರು ತಮ್ಮ ಕಾರ್ಯಗಳಲ್ಲಿ ಸಂಪೂರ್ಣ ನಂಬಿಕೆಯನ್ನು ಹೊಂದಿರುತ್ತಾರೆ. ಅಂದುಕೊಂಡ ಕೆಲಸವನ್ನು ಮುಗಿಸಿಯೇ ಉಸಿರು ತೆಗೆದುಕೊಳ್ಳುತ್ತಾರೆ. ಅವರು ಯಾವುದೇ ವಿಷಯದ ಬಗ್ಗೆ ಆಳವಾಗಿ ಯೋಚಿಸುತ್ತಾರೆ. ಅವರ ಆರ್ಥಿಕ ಸ್ಥಿತಿ ಸಾಮಾನ್ಯವಾಗಿ ಉತ್ತಮವಾಗಿರುತ್ತದೆ. ಬಹಳ ಸೂಕ್ಷ್ಮಮತಿಗಳಾದ ಇವರಲ್ಲಿ ಹೊಂದಿಕೊಂಡು ಹೋಗುವ ಸ್ವಭಾವವೂ ಚೆನ್ನಾಗಿರುತ್ತದೆ. ಸೃಜನಶೀಲತೆ ಹೆಚ್ಚಿರುವ ಇವರು ಅದನ್ನು ಸರಿಯಾಗಿ ಬಳಸಿಕೊಂಡರೇ ಅದೇ ಇವರಿಗೆ ಬದುಕು ಕಟ್ಟಿಕೊಡುತ್ತದೆ. ಪ್ರಾಮಾಣಿಕತೆ, ನ್ಯಾಯಪರತೆ ಇವರನ್ನು ಕಾಯುತ್ತವೆ.

click me!