ಕೋಪ ಯಾರಿಗೆ ತಾನೇ ಬರುವುದಿಲ್ಲ? ಆದರೆ, ಈ ನಾಲ್ಕು ರಾಶಿಗಳಿಗೆ ಕೋಪ ಬಂದಾಗ ಮಾತ್ರ ಸುತ್ತಲಿದ್ದವರು ತತ್ತರಿಸಿ ಹೋಗುತ್ತಾರೆ. ಯಾವುವು ಆ ರಾಶಿಗಳು?
ಕೋಪ ಕೆಟ್ಟದ್ದು ನಿಜ, ಆದರೂ ಕೋಪ(angry) ಎಲ್ಲರಿಗೂ ಬರುತ್ತದೆ. ಕೆಲವರಿಗೆ ಜಾಸ್ತಿ ಬರುತ್ತದೆ, ಮತ್ತೆ ಕೆಲವರಿಗೆ ಕೊಂಚ ಕಡಿಮೆ ಇರುತ್ತದೆ. ಕೆಲವರು ಪ್ರತಿ ಬಾರಿಯೂ ತಮ್ಮ ಕೋಪವನ್ನು ತೋರಿಸಿಕೊಂಡರೆ, ಮತ್ತೆ ಕೆಲವರು ಕೋಪ ನಿಯಂತ್ರಿಸಿಕೊಳ್ಳುವುದನ್ನು ಕಲಿತಿರುತ್ತಾರೆ. ಕೋಪ ಬಂದಾಗ ಮೌನಕ್ಕೆ ಮೊರೆ ಹೋಗುವುದು ಕೆಲವರ ಜಾಯಮಾನ. ಕೂಗಾಡಿ ಕಿರುಚಾಡಿ ರಂಪ ಮಾಡುವವರು ಮತ್ತೆ ಕೆಲವರು. ಅಷ್ಟಾದರೇ ಅವರಿಗೆ ಸಮಾಧಾನ. ಕೆಲವರು ಕೋಪ ಬಂದಾಗ ಜಮದಗ್ನಿ ಮುನಿಯ ಅಪರಾವತರಾಗಳು. ಅವರ ಜೊತೆಯಿರುವವರ ಕೈ ಕಾಲ ಚಳಿ ಬಿಡಿಸಿ ಬಿಡುತ್ತಾರೆ. ಮತ್ತೆ ಕೆಲವೊಬ್ಬರು ಕೋಪದಲ್ಲಿ ಮೂಗು ಕೊಯ್ದುಕೊಂಡು ನಂತರ ಪೇಚಾಡುವವರೂ ಇದ್ದಾರೆ. ಮೂಗಿನ ಮೇಲೇ ಕೋಪ ಎನ್ನುವುದು ಇಂಥವರನ್ನು ನೋಡಿಯೇ. ಸಿಟ್ಟು ನಕಾರಾತ್ಮಕ ಭಾವನೆಯಾದರೂ ಅದನ್ನು ವ್ಯಕ್ತಪಡಿಸದೆ ಬಿಟ್ಟರೆ ಸಾಕಷ್ಟು ಸಮಸ್ಯೆಗಳಾಗುತ್ತವೆ. ಹಾಗಂಥ ವ್ಯಕ್ತಪಡಿಸುವ ರೀತಿಯೂ ಸಾಧುವಾಗಿರಬೇಕು. ಇಲ್ಲದಿದ್ದಲ್ಲಿ ಸಾಕಷ್ಟು ಕಷ್ಟ ನಷ್ಟ ಅನುಭವಿಸಬೇಕಾಗುತ್ತದೆ.
ಜ್ಯೋತಿಷ್ಯದ ಪ್ರಕಾರ, ನಾಲ್ಕು ರಾಶಿಗಳಿಗೆ ಕೋಪ ಬಂದಾಗ ಸುತ್ತಲಿದ್ದವರು ಭಯ ಬಿದ್ದು ಹೋಗುತ್ತಾರೆ. ಯಾವುದಾ ರಾಶಿಗಳು(zodiac signs) ನೋಡೋಣ.
ಕುಂಭ ರಾಶಿ(Aquarius)
ಕುಂಭ ರಾಶಿ ಸಾಮಾನ್ಯವಾಗಿ ಆಕ್ರಮಣಕಾರಿ(aggressive) ಸ್ವಭಾವವನ್ನು ಹೊಂದಿರುವುದಿಲ್ಲ, ಆದರೆ ಅವರಿಗೇನಾದರೂ ತಡೆಯಲಾಗದಷ್ಟು ಕೋಪ ಬಂದರೆ ಮಾತ್ರ ಸುತ್ತಲಿರುವವರು ಹೆದರಿ ಹೋಗುತ್ತಾರೆ. ಅವರು ಕಿರುಚುವುದಿಲ್ಲ ಅಥವಾ ಆಕ್ರಮಣಕಾರಿಯಾಗುವುದಿಲ್ಲ. ಆದರೂ, ಅವರ ಕೋಪವು ವ್ಯಕ್ತವಾಗಿಯೇ ತೀರುತ್ತದೆ. ಅವರು ಕೋಪಗೊಂಡಾಗ, ಅವರು ಅತ್ಯಂತ ಭಯಾನಕ ಎನಿಸುತ್ತಾರೆ. ಅಂಥ ಸಂದರ್ಭದಲ್ಲಿ ಅವರು 100 ಜನರ ಗುಂಪಿನಲ್ಲಿಯೂ ಸಹ ತಮ್ಮ ಉಪಸ್ಥಿತಿಯನ್ನು ತೋರಿಸುತ್ತಾರೆ.
Vastu Tips: ಈ ಆರು ಗಿಡಗಳು ಮನೆಯಲ್ಲಿದ್ರೆ ಜೇಬಿಗೆ ಹಣ ಸೇರೋದು ಗ್ಯಾರಂಟಿ!
ಮೀನ ರಾಶಿ(Pisces)
ಮೀನವು ಸಾಮಾನ್ಯವಾಗಿ ಶಾಂತ ಮತ್ತು ಗಂಭೀರವಾಗಿರುತ್ತದೆ. ಆದರೂ ಅವರ ಕೋಪವು ಎಲ್ಲರನ್ನು ಹೆದರಿಸುತ್ತದೆ. ಕೋಪ ಬಂದಾಗ ಮಾತು ನಿಲ್ಲಿಸಿ ಬಿಡುತ್ತಾರೆ, ಯಾರ ಮೇಲೆ ಕೋಪ ಬಂದಿದೆಯೋ ಅವರನ್ನು ಸಂಪೂರ್ಣ ಕಡೆಗಣಿಸಿ ಬಿಡುತ್ತಾರೆ. ಅದನ್ನು ತಡೆದುಕೊಳ್ಳುವುದು ಕಷ್ಟ. ನೀವು ಮೀನ ರಾಶಿಯವರನ್ನು ಕೆರಳಿಸಿದರೆ, ಅವನು ಅಥವಾ ಅವಳೊಂದಿಗೆ ಎಂದಿಗೂ ಮಾತನಾಡದಿರುವ ಸಾಧ್ಯತೆಯಿದೆ. ಮೀನ ರಾಶಿಯವರು ತಮ್ಮ ತಣ್ಣನೆ ಪ್ರತಿಕ್ರಿಯೆಯಲ್ಲಿಯೇ ಕೋಪದ ಶಾಖ ತೋರುವವರು.
ಕರ್ಕಾಟಕ ರಾಶಿCancer)
ಕರ್ಕಾಟಕವು ಕೋಪಗೊಂಡಾಗ, ಅವನು ಅಥವಾ ಅವಳು ಆಕ್ರಮಣಕಾರಿಯಾಗಬಹುದು. ಸಮಸ್ಯೆ ಉಲ್ಬಣಗೊಳ್ಳದಂತೆ ತಡೆಯಲು ಅವರಿಂದ ದೂರವಿರುವುದು ಉತ್ತಮ. ಕರ್ಕ ರಾಶಿಯವರಿಗೆ ತಮ್ಮ ಕ್ರೋಧವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಆ ಸಮಯದಲ್ಲಿ ಅವರನ್ನು ಕೆರಳಿಸುವವರಿಗೆ ಹೊಡೆದು, ತಳ್ಳಿ ಏನಾದರೂ ಮಾಡಬಲ್ಲರು. ಕೋಪ ಬಂದಾಗ ಎಲ್ಲದರ ಮೇಲೆ ಆಗಾಗ್ಗೆ ಉದ್ಧಟತನ ತೋರುತ್ತಾರೆ.
Vat Savitri Vrat: ವ್ರತದ ದಿನ ಈ ರೀತಿ ಮಾಡಿದರೆ ಶುಭಫಲ ಗ್ಯಾರಂಟಿ
ಸಿಂಹ ರಾಶಿ(Leo)
ಸಿಂಹ ರಾಶಿಯವರು ಸಣ್ಣ ವಿಷಯಗಳಿಂದ ಸುಲಭವಾಗಿ ಮನ ನೋಯುತ್ತಾರೆ. ಅವನ ಅಥವಾ ಅವಳ ಕೋಪವು ಇತರರನ್ನು ಹೆದರಿಸುತ್ತದೆ, ಆದರೆ ಅಲ್ಪಾವಧಿಗೆ ಮಾತ್ರ. ಅವರ ಕೋಪವು ಕೆಲವೇ ನಿಮಿಷಗಳಲ್ಲಿ ಕರಗುತ್ತದೆ, ಆದರೆ ಅವರು ಅಸಮಾಧಾನಗೊಂಡಾಗ, ಅವರು ತುಂಬಾ ಅಹಿತಕರ ಮತ್ತು ಅಸಭ್ಯರಾಗಬಹುದು. ಅವರ ಕಠೋರವಾದ ಮಾತುಗಳಿಂದ ಅವರು ನಿಮ್ಮನ್ನು ಇರಿದು ಹಾಕಬಹುದು. ಪರಿಣಾಮವಾಗಿ, ಅವನು ಅಥವಾ ಅವಳು ಕೋಪಗೊಂಡಾಗ ಸಿಂಹಕ್ಕೆ ಎದುರು ಹೇಳದೆ ಸುಮ್ಮನಿರುವುದು ಉತ್ತಮ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.