
ಹನುಮಂತ- ಭೂಮಿಯ ಮೇಲೆ ಶಾಶ್ವತ ಜೀವನದ ವರವನ್ನು ಪಡೆದ ಅಮರ ಜೀವಿ. ರಾಮನ ಮೇಲಿನ ಅವನ ಭಕ್ತಿ ಎಷ್ಟು ಶುದ್ಧವಾಗಿತ್ತೆಂದರೆ, ರಾಮನ ಕೊಟ್ಟಕೊನೆಯ ಭಕ್ತರೆಲ್ಲರನ್ನೂ ನೋಡಿಕೊಳ್ಳುವವರೆಗೂ ಈ ಲೋಕವನ್ನು ಬಿಡುವುದಿಲ್ಲ ಎಂದು ಅವನು ಪ್ರತಿಜ್ಞೆ ಮಾಡಿದ. ಇದರರ್ಥ, ಇಂದಿಗೂ ಸಹ, ಹನುಮಂತನು ತನ್ನ ಭಕ್ತರನ್ನು ನಿಗೂಢ ರೀತಿಯಲ್ಲಿ ರಕ್ಷಿಸುತ್ತಾನೆ ಮತ್ತು ಮಾರ್ಗದರ್ಶನ ಮಾಡುತ್ತಾನೆ ಎಂದು ನಂಬಲಾಗಿದೆ. ಆದರೆ ಅವನು ಎಲ್ಲಿ ವಾಸಿಸುತ್ತಾನೆ? ಶತಮಾನಗಳಿಂದ ಸಂತರು, ಯೋಗಿಗಳು ಮತ್ತು ಭಕ್ತರು ಹನುಮನ ಉಪಸ್ಥಿತಿ ಇರುವ ಸ್ಥಳಗಳ ಬಗ್ಗೆ ಹೇಳಿದ್ದಾರೆ. ಇವು ದೈವಿಕ ಶಕ್ತಿಯ ಸ್ಥಳಗಳು. ಅಲ್ಲಿ ಪವಾಡಗಳು ಸಂಭವಿಸುತ್ತವೆ. ಅಲ್ಲಿಗೆ ಭೇಟಿ ನೀಡುವವರಲ್ಲಿ ಆಳವಾದ ಶಾಂತಿಯ ಭಾವನೆ ಮೂಡುತ್ತದೆ. ಹನುಮನು ಇಂದಿಗೂ ವಾಸಿಸುತ್ತಿದ್ದಾನೆ ಎಂದು ನಂಬಲಾದ ಏಳು ಪವಿತ್ರ ಸ್ಥಳಗಳು ಇಲ್ಲಿವೆ.
1) ಅಂಜನಾದ್ರಿ ಬೆಟ್ಟ, ಕರ್ನಾಟಕ
ಕರ್ನಾಟಕದ ಹಂಪಿಯ ಬಳಿಯ ಅಂಜನಾದ್ರಿ ಬೆಟ್ಟವು ಹನುಮನ ಜನ್ಮಸ್ಥಳ. ಹನುಮನ ತಾಯಿ ಅಂಜನಾ ದೈವಿಕ ಮಗುವನ್ನು ಪಡೆಯಲು ಇಲ್ಲಿ ಧ್ಯಾನ ಮಾಡಿದ್ದಳು. ಇಂದು, ಈ ಬೆಟ್ಟವು ಹನುಮನಿಗೆ ಸಮರ್ಪಿತವಾದ ಪ್ರಸಿದ್ಧ ದೇವಾಲಯವನ್ನು ಹೊಂದಿದೆ. ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಭಕ್ತರು 600 ಮೆಟ್ಟಿಲುಗಳನ್ನು ಹತ್ತಿ ಹನುಮನ ಆಶೀರ್ವಾದವನ್ನು ಪಡೆಯುತ್ತಾರೆ. ಹನುಮನು ಇನ್ನೂ ಈ ಭೂಮಿಯಲ್ಲಿ ನಡೆಯುತ್ತಿದ್ದಾನೆ, ಯಾವಾಗಲೂ ಇರುತ್ತಾನೆ ಎಂಬಂತೆ ದೇವಾಲಯದಲ್ಲಿ ವರ್ಣನಾತೀತ ಶಕ್ತಿಯನ್ನು ಅನುಭವಿಸಿರುವುದಾಗಿ ಹಲವರು ಹೇಳಿಕೊಳ್ಳುತ್ತಾರೆ. ಬೆಟ್ಟದ ಆಧ್ಯಾತ್ಮಿಕ ಮಹತ್ವ ಇದನ್ನು ಭೂಮಿಯ ಮೇಲೆ ಹನುಮನ ನಿರಂತರ ಉಪಸ್ಥಿತಿಗೆ ಸಂಬಂಧಿಸಿದ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದನ್ನಾಗಿಸಿದೆ.
2) ಹಿಮಾಲಯ
ದೇವತೆಗಳ ವಾಸಸ್ಥಾನ ಎಂದು ಕರೆಯಲ್ಪಡುವ ಎತ್ತರದ ಹಿಮಾಲಯವು ಹನುಮನ ವಿಶ್ರಾಂತಿ ಸ್ಥಳಗಳಲ್ಲಿ ಒಂದು ಎಂದು ನಂಬಲಾಗಿದೆ. ಹಿಮಾಚಲ ಪ್ರದೇಶದ ಹನುಮಾನ್ ಟಿಬ್ಬಾ ಮತ್ತು ಕೇದಾರನಾಥದ ಸುತ್ತಮುತ್ತಲಿನ ಗುಹೆಗಳಂತಹ ಹಲವಾರು ಸ್ಥಳಗಳು ಅವನೊಂದಿಗೆ ಸಂಬಂಧ ಹೊಂದಿವೆ. ಕೆಲವು ಋಷಿಗಳು ಮತ್ತು ಯೋಗಿಗಳು ಹನುಮಂತನು ಸೂಕ್ಷ್ಮ ರೂಪದಲ್ಲಿ ಈ ಪ್ರದೇಶಗಳಲ್ಲಿ ಧ್ಯಾನ ಮಾಡುತ್ತಾನೆ ಎನ್ನುತ್ತಾರೆ. ಈ ಪ್ರದೇಶಗಳಲ್ಲಿರುವ ಹನುಮನ ದೇವಾಲಯಗಳು ಆಧ್ಯಾತ್ಮಿಕವಾಗಿ ಶಕ್ತಿಯ ನೆಲೆಗಳು.
3) ಮಾನಸ ಸರೋವರ
ಟಿಬೆಟ್‌ನ ಕೈಲಾಸ ಪರ್ವತದ ಬಳಿಯಿರುವ ಮಾನಸ ಸರೋವರವು ಶಿವನಿಗೆ ಪವಿತ್ರವಾದದ್ದು ಮಾತ್ರವಲ್ಲದೆ ಚಿರಂಜೀವಿಗಳಿಗೆ ಭೇಟಿಯಾಗುವ ಸ್ಥಳವಾಗಿದೆ ಎಂದು ನಂಬಲಾಗಿದೆ. ಹನುಮಂತ, ಇತರ ಚಿರಂಜೀವಿಗಳಾದ ವ್ಯಾಸ, ಬಲಿ, ಅಶ್ವತ್ಥಾಮ, ಮಾರ್ಕಂಡೇಯ ಮುಂತಾದವರು ವಿಶೇಷ ಸಮಯಗಳಲ್ಲಿ ಈ ಸರೋವರಕ್ಕೆ ಭೇಟಿ ನೀಡಿ ಅದರ ದೈವಿಕ ಶಕ್ತಿಯನ್ನು ಹೀರಿಕೊಳ್ಳುತ್ತಾರೆ ಎಂದು ನಂಬಲಾಗಿದೆ. ಸರೋವರದ ಬಳಿ ಧ್ಯಾನ ಮಾಡುವ ಅನೇಕ ಆಧ್ಯಾತ್ಮಿಕ ಅನ್ವೇಷಕರು ವಿವರಿಸಲಾಗದ ದಿವ್ಯತೆಯನ್ನು ಅನುಭವಿಸಿದ್ದಾರೆ.
4) ಹನುಮಾನ್ ಧಾರ, ಚಿತ್ರಕೂಟ
ಭಗವಾನ್ ರಾಮನೊಂದಿಗೆ ಆಳವಾಗಿ ಸಂಬಂಧ ಹೊಂದಿರುವ ಸ್ಥಳವಾದ ಚಿತ್ರಕೂಟದಲ್ಲಿ ಪ್ರಸಿದ್ಧ ಹನುಮಾನ್ ಧಾರಾ ದೇವಾಲಯವಿದೆ. ದಂತಕಥೆಯ ಪ್ರಕಾರ, ಹನುಮಾನ್ ತನ್ನ ಉರಿಯುತ್ತಿರುವ ಬಾಲದಿಂದ ಲಂಕೆಯನ್ನು ಹೊತ್ತಿಸಿದ ನಂತರ, ಅಸಹನೀಯ ಶಾಖದಿಂದ ಪರಿಹಾರವನ್ನು ಪಡೆಯಲು ಚಿತ್ರಕೂಟಕ್ಕೆ ಬಂದ. ಆತನ ಉರಿಯನ್ನು ತಣಿಸಲು ಭಗವಾನ್ ರಾಮನು ದೈವಿಕ ಬುಗ್ಗೆಯನ್ನು ಸೃಷ್ಟಿಸಿದ. ಅದು ಹನುಮನ ವಿಗ್ರಹದ ಮೇಲೆ ನಿರಂತರವಾಗಿ ನೀರನ್ನು ಸುರಿದು ಅವನನ್ನು ತಂಪಾಗಿಸುತ್ತದೆ. ಈ ಪವಿತ್ರ ಸ್ಥಳವು ಶತಮಾನಗಳಿಂದ ಪವಾಡಗಳ ಸ್ಥಳವಾಗಿದೆ.
5) ಪಂಚಮುಖಿ ಹನುಮಾನ್ ದೇವಾಲಯ, ರಾಮೇಶ್ವರಂ
ರಾಮೇಶ್ವರಂನಲ್ಲಿರುವ ಪಂಚಮುಖಿ ಹನುಮಾನ್ ದೇವಾಲಯವು ಹನುಮನನ್ನು ಐದು ಮುಖದ ರೂಪದಲ್ಲಿ ಪೂಜಿಸುವ ಅಪರೂಪದ ದೇವಾಲಯಗಳಲ್ಲಿ ಒಂದಾಗಿದೆ. ದಂತಕಥೆಯ ಪ್ರಕಾರ, ರಾಮ ಮತ್ತು ಲಕ್ಷ್ಮಣರನ್ನು ಅಪಹರಿಸಿದ ರಾಕ್ಷಸ ಮಹಿರಾವಣನ ವಿರುದ್ಧದ ಯುದ್ಧದ ಸಮಯದಲ್ಲಿ ಹನುಮಂತ ಈ ರೂಪವನ್ನು ಧರಿಸಿದನು. ಹನುಮನ ಐದು ಮುಖಗಳು ವಿಭಿನ್ನ ದೇವತೆಗಳನ್ನು ಪ್ರತಿನಿಧಿಸುತ್ತವೆ - ವರಾಹ, ನರಸಿಂಹ, ಗರುಡ, ಹಯಗ್ರೀವ ಮತ್ತು ಹನುಮ. ಅಪಾರ ಶಕ್ತಿ ಮತ್ತು ರಕ್ಷಣೆಯನ್ನು ಸಂಕೇತಿಸುತ್ತವೆ. ಈ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಹನುಮನ ದೈವಿಕ ಉಪಸ್ಥಿತಿಯು ಇಲ್ಲಿ ಇನ್ನೂ ಜೀವಂತವಾಗಿದೆ ಎಂದು ನಂಬುತ್ತಾರೆ.
ಗಂಡ ಹೆಂಡತಿ ರೊಮ್ಯಾಂಟಿಕ್ ಆಗಿರಬೇಕಾ? ಬೆಳಗ್ಗೆ ಈ ಕೆಲಸ ಮಾಡಿ
6) ಹನುಮಾನ್ ಗಡಿ, ಅಯೋಧ್ಯಾ
ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆಯನ್ನು ಹನುಮಾನ್ ಶಾಶ್ವತವಾಗಿ ರಕ್ಷಿಸುತ್ತಾನೆ ಎಂದು ಹೇಳಲಾಗುತ್ತದೆ. ಬೆಟ್ಟದ ತುದಿಯಲ್ಲಿರುವ ಹನುಮಾನ್ ಗಡಿ ದೇವಾಲಯವನ್ನು ಅವನಿಗೆ ಅರ್ಪಿಸಲಾಗಿದೆ. ಇದು ಭಗವಾನ್ ರಾಮನ ನಗರವನ್ನು ರಕ್ಷಿಸುವ ಅವನ ಶಾಶ್ವತ ಕರ್ತವ್ಯವನ್ನು ಸೂಚಿಸುತ್ತದೆ. ಸ್ಥಳೀಯ ನಂಬಿಕೆಗಳ ಪ್ರಕಾರ, ಹನುಮನು ಸ್ವತಃ ಅಯೋಧ್ಯೆಯನ್ನು ನೋಡಿಕೊಳ್ಳುತ್ತಾನೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಆಗಾಗ್ಗೆ ಇಲ್ಲಿ ಆಗುವ ದೈವಿಕ ಅನುಭವಗಳು, ವಿವರಿಸಲಾಗದ ಪವಾಡಗಳು ಮತ್ತು ಬಲವಾದ ಆಧ್ಯಾತ್ಮಿಕ ಉಪಸ್ಥಿತಿಯ ಬಗ್ಗೆ ಮಾತನಾಡುತ್ತಾರೆ.
7) ಗಂಧಮಾದನ ಪರ್ವತ
ತಮಿಳುನಾಡಿನ ರಾಮೇಶ್ವರಂ ಬಳಿ ಇರುವ ಗಂಧಮಾದನ ಪರ್ವತವು ರಾಮಾಯಣದಲ್ಲಿ ಹನುಮನ ಜೊತೆಗೆ ಬೆಸೆದುಕೊಂಡಿದೆ. ಸೀತೆಯನ್ನು ಹುಡುಕುತ್ತಾ ಹನುಮಂತನು ಸಾಗರವನ್ನು ದಾಟಿ ಲಂಕೆಗೆ ಜಿಗಿಯಲು ಆರಿಸಿಕೊಂಡ ಸ್ಥಳ ಇದು ಎಂದು ನಂಬಲಾಗಿದೆ. ಇಂದಿಗೂ ಪರ್ವತದ ಮೇಲಿರುವ ದೇವಾಲಯದಲ್ಲಿ ಹನುಮನ ಹೆಜ್ಜೆಗುರುತುಗಳನ್ನು ಹೊಂದಿರುವ ಪವಿತ್ರ ಬಂಡೆಯಿದೆ. ನಂಬಿಕೆ ಮತ್ತು ಭಕ್ತಿಯಿಂದ ಬರುವವರಿಗೆ ಹನುಮಂತನ ಉಪಸ್ಥಿತಿಯು ಅನುಭವಕ್ಕೆ ಬರುತ್ತದೆ.
ಚಾಣಕ್ಯನ ಪ್ರಕಾರ ಎಷ್ಟೇ ಅಂದ ಇರ್ಲಿ, ಚಂದ ಇರ್ಲಿ ಈ ಹುಡುಗಿಯನ್ನು ಮದುವೆಯಾಗಬಾರದು!