Diwali 2022: ಈ ದೀಪಾವಳಿಯಲ್ಲಿ ಈ 5 ರಾಶಿಚಕ್ರಗಳಿಗೆ ಅದೃಷ್ಟದ ಹೊಳೆ ಹರಿಸುವ ಗ್ರಹ ಸಂಚಾರ

By Suvarna NewsFirst Published Sep 25, 2022, 12:51 PM IST
Highlights

ಈ ವರ್ಷ ದೀಪಾವಳಿಗೆ ಇನ್ನೇನು ಹೆಚ್ಚು ಸಮಯವಿಲ್ಲ. ದೀಪಾವಳಿಯ ಸಮಯದಲ್ಲಿ ಅನೇಕ ಗ್ರಹಗಳು ರಾಶಿಚಕ್ರವನ್ನು ಬದಲಾಯಿಸುತ್ತಿವೆ. ಇದು ಅನೇಕ ರಾಶಿಚಕ್ರಗಳ ಜನರ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಈ ಐದು ರಾಶಿಗಳು ಹೆಚ್ಚು ಅದೃಷ್ಟವಂತರಾಗುತ್ತಿವೆ..

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೀಪಾವಳಿ ಹಬ್ಬವನ್ನು ಕಾರ್ತಿಕ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಈ ಬಾರಿ ದೀಪಾವಳಿ ಅಕ್ಟೋಬರ್ 24ರಂದು ಸೋಮವಾರ ಬರುತ್ತದೆ. ದೀಪಾವಳಿಯು ಕೆಟ್ಟದ್ದರ ವಿರುದ್ಧ ಒಳ್ಳೆಯದರ ಗೆಲುವನ್ನು ಸಂಭ್ರಮಿಸುವ ಹಬ್ಬವಾಗಿದೆ. ಈ ಸಮಯದಲ್ಲಿ ಮನೆಮನೆಯಲ್ಲೂ ಜ್ಯೋತಿ ಬೆಳಗಿಸಲಾಗುತ್ತದೆ. ಈ ಶುಭ ಸಮಯದಲ್ಲಿ, ಅನೇಕ ಗ್ರಹಗಳು ರಾಶಿಚಕ್ರ ಚಿಹ್ನೆಗಳನ್ನು ಸಹ ಬದಲಾಯಿಸುತ್ತವೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ, 16 ಅಕ್ಟೋಬರ್ 2022ರಂದು ಮಂಗಳವು ಮಿಥುನ ರಾಶಿಯಲ್ಲಿ ಸಾಗಲಿದೆ. ಮತ್ತೊಂದೆಡೆ, ಸೂರ್ಯ ದೇವರು 17 ಅಕ್ಟೋಬರ್ 2022ರಂದು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ಶುಕ್ರ 18 ಅಕ್ಟೋಬರ್ 2022ರಂದು ತುಲಾ ರಾಶಿಯಲ್ಲಿ ಸಾಗುತ್ತಾನೆ. ಶನಿದೇವನು 23ನೇ ಅಕ್ಟೋಬರ್ 2022ರಂದು ಮಕರ ರಾಶಿಯಲ್ಲಿ ಸಾಗುತ್ತಾನೆ. ಇದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ಪರಿಣಾಮ ಬೀರುತ್ತದೆ. ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ, ಗ್ರಹಗಳ ಬದಲಾವಣೆಯು ಅನೇಕ ರಾಶಿಚಕ್ರ ಚಿಹ್ನೆಗಳ ಜನರಿಗೆ ಹಣಕಾಸಿನ ಪ್ರಯೋಜನಗಳನ್ನು ನೀಡುತ್ತದೆ. ಈ ಅವಧಿಯಲ್ಲಿ, ಯಾವ ರಾಶಿಯ ಜನರು ಹಣದ ಲಾಭ ಮತ್ತು ಆರ್ಥಿಕ ಬೆಳವಣಿಗೆಯನ್ನು ಪಡೆಯಬಹುದು ಎಂಬುದನ್ನು ನೋಡೋಣ.

ಮೇಷ ರಾಶಿ(Aries)
ಈ ರಾಶಿಚಕ್ರದ ಜನರು ಶುಕ್ರನ ಸಂಕ್ರಮಣ ಮತ್ತು ಶನಿ ದೇವನ ಪಥ ನೇರಗೊಳ್ಳುವುದರಿಂದ ಲಾಭವನ್ನು ಪಡೆಯಬಹುದು. ವೃತ್ತಿಯಲ್ಲಿಯೂ ಯಶಸ್ಸನ್ನು ಪಡೆಯಬಹುದು. ವ್ಯಾಪಾರವೂ ಚೆನ್ನಾಗಿರುತ್ತದೆ. ಆಸ್ತಿ ಮಾರಾಟ ಪ್ರಕ್ರಿಯೆಯಲ್ಲಿ ಅಧಿಕ ಲಾಭ ದೊರೆಯುತ್ತದೆ. ಬಹಳ ದಿನಗಳಿಂದ ಕಾಡುತ್ತಿದ್ದ ಚಿಂತೆ ದೂರಾಗುತ್ತದೆ. 

Navratri 2022: ಹಬ್ಬದ ಸಮಯದಲ್ಲಿ ಈ ಕೆಲಸ ಮಾಡಿದರೆ ಬಡತನ ಎದುರಾಗಬಹುದು, ಎಚ್ಚರ!

ಮಿಥುನ ರಾಶಿ(Gemini)
ಶನಿದೇವ ಮತ್ತು ಶುಕ್ರನ ರಾಶಿಯ ಬದಲಾವಣೆಯಿಂದಾಗಿ ಈ ರಾಶಿಯವರಿಗೆ ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಹೊಸ ಉದ್ಯೋಗ ಅರಸುವವರಿಗೆ ಅವಕಾಶಗಳು ಲಭಿಸುತ್ತವೆ. ನೀವು ಎಲ್ಲೋ ಸಿಕ್ಕಿಕೊಂಡು ನಿಂತ ಅಥವಾ ಬಹಳ ಹಿಂದೆ ಸಾಲ ಕೊಟ್ಟಿದ್ದ ಹಣವನ್ನು ಪಡೆಯಬಹುದು ಮತ್ತು ಆರ್ಥಿಕ ಬಲವನ್ನು ಸಹ ಪಡೆಯಬಹುದು. ನಿರುದ್ಯೋಗಿಗಳು ಉದ್ಯೋಗ ರಂಗಕ್ಕೆ ಕಾಲಿಡಬಹುದು.

ಸಿಂಹ ರಾಶಿ(Leo)
ಮಿಥುನ ರಾಶಿಯಲ್ಲಿ ಮಂಗಳ ಮತ್ತು ತುಲಾ ರಾಶಿಯಲ್ಲಿ ಸೂರ್ಯ ದೇವರ ಸಂಕ್ರಮಣ ಈ ರಾಶಿಯವರಿಗೆ ಲಾಭದಾಯಕ. ಈ ಸಮಯವು ಸಿಂಹ ರಾಶಿಯವರ ವೃತ್ತಿ ಜೀವನಕ್ಕೆ ಉತ್ತಮವಾಗಿರುತ್ತದೆ. ಬೋನಸ್ ಇತ್ಯಾದಿ ಲಾಭಗಳು ದೊರೆಯಬಹುದು. ಭೂಮಿ ಇತ್ಯಾದಿಗಳಲ್ಲಿ ಹೂಡಿಕೆ ಲಾಭದಾಯಕವಾಗಬಹುದು. ನೀವು ವೃತ್ತಿಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

ವೃಶ್ಚಿಕ ರಾಶಿ(Scorpio)
ಸೂರ್ಯ ಮತ್ತು ಮಂಗಳ ಸಂಚಾರವು ವೃಶ್ಚಿಕ ರಾಶಿಯ ಸ್ಥಳೀಯರಿಗೆ ಉತ್ತಮ ಫಲಿತಾಂಶಗಳನ್ನು ನೀಡಬಹುದು. ಇವರ ಆದಾಯ ಹೆಚ್ಚಾಗಬಹುದು. ವ್ಯಾಪಾರಕ್ಕೆ ಈ ಸಮಯ ಉತ್ತಮವಾಗಿರುತ್ತದೆ. ಬಹಳ ಕಾಲದಿಂದ ಮುಂದೂಡಲ್ಪಟ್ಟ ವಿವಾಹ ಕಾರ್ಯಗಳು ಮುಂದುವರಿಯುತ್ತವೆ. ನಿಮ್ಮ ಆರೋಗ್ಯ ಚೆನ್ನಾಗಿರುವ ಜೊತೆಗೆ ಹೊಸ ಉದ್ಯೋಗ ಅರಸುವವರಿಗೆ ಉತ್ತಮ ಅವಕಾಶಗಳು ಲಭಿಸುತ್ತವೆ.

Navratri 2022: ಹಬ್ಬದಲ್ಲಿ ಈ ವಸ್ತುಗಳನ್ನು ಮನೆಗೆ ತಂದರೆ ಸಮೃದ್ಧಿ ಖಚಿತ!

ಮಕರ ರಾಶಿ(Scorpio)
ಮಕರ ರಾಶಿಯವರಿಗೆ ಸೂರ್ಯ ದೇವರು ಮತ್ತು ಮಂಗಳ ಸಂಕ್ರಮಣ ಲಾಭದಾಯಕವಾಗಿರುತ್ತದೆ. ವ್ಯಾಪಾರಸ್ಥರಿಗೆ ಅಧಿಕ ಲಾಭವಾಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಈ ಸಮಯದಲ್ಲಿ ಬಾಕಿ ಉಳಿದಿರುವ ಕೆಲಸಗಳನ್ನು ಸಹ ಪೂರ್ಣಗೊಳಿಸಬಹುದು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!