ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಗಳ 429ನೇ ವರ್ಧಂತೋತ್ಸವ ಹಿನ್ನೆಲೆಯಲ್ಲಿ ಚಿತ್ರನಟ ಜಗ್ಗೇಶ ಅವರು ಶ್ರೀಮಠಕ್ಕೆ ಆಗಮಿಸಿದ್ದರು. ಶ್ರೀಗುರು ರಾಯರ ಮೂಲ ಬೃಂದಾವನದ ಶ್ರೀಗಳು ಫಲಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು.
ರಾಯಚೂರು(ಮಾ.17): ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕಳೆದ6 ದಿನಗಳಿಂದ ನಡೆಯುತ್ತಿರುವ ಶ್ರೀರಾಘವೇಂದ್ರ ಸ್ವಾಮಿಗಳ ಗುರು ವೈಭವೋತ್ಸವದ ಕೊನೆ ದಿನ ರಾಯರ ವರ್ಧಂತೋತ್ಸವ ನಿಮಿತ್ತ ಶನಿವಾರ ಶ್ರೀಮಠದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಲಿಯುಗ ಕಲ್ಪತರು ಶ್ರೀಗುರುರಾಯರ 429ನೇ ವರ್ಧಂತೋತ್ಸವ ಹಿನ್ನೆಲೆಯಲ್ಲಿ ನಸುಕಿಗೆ ನಿರ್ಮಾಲ್ಯ ವಿಸರ್ಜನೆ, ಸುಪ್ರಭಾತ ಸೇವೆ, ವಿದ್ವಾಂಸರಿಂದ ಪ್ರವಚನ, ಶ್ರೀಗುರು ರಾಯರ ಮೂಲ ಬೃಂದಾವನಕ್ಕೆ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರಿಂದ ಪಂಚಾ ಮೃತ ಅಭಿಷೇಕ, ರಥೋತ್ಸವ, ಶ್ರೀಮೂಲ ರಾಮದೇವರಿಗೆ ಮಹಾಸಂಸ್ಥಾನ ಪೂಜೆ ಹಾಗೂ ನಾದಹಾರ ಸೇವೆ ಸೇರಿ ಮೊದಲಾದ ಕಾರ್ಯಕ್ರಮಗಳು ನಡೆದವು. ಪ್ರತಿವರ್ಷದ ಸಂಪ್ರದಾಯದಂತೆ ವರ್ಧಂತಿ ಉತ್ಸವದ ವೇಳೆ ತಿರುಮಲ ತಿರುಪತಿ ದೇವಸ್ಥಾನದಿಂದ ತರಲಾಗಿದ್ದ ಶೇಷವಸ್ತ್ರವನ್ನು ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.
undefined
ರಾಯಚೂರು: ರಾಯರ 403ನೇ ಪಟ್ಟಾಭಿಷೇಕ ಮಹೋತ್ಸವ
ಟಿಟಿಡಿ ಜೆಇಒ ವೀರಬ್ರಹ್ಮಮ್ ಅವರು ಶ್ರೀವಾರಿ ಪ್ರಸಾದ ರೂಪದ ಶ್ರೀವಾರಿ ವಸ್ತ್ರವನ್ನು ಪೀಠಾಧಿಪತಿ ಡಾ.ಸುಬುಧೇಂದ್ರ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 429ನೇ ವರ್ಧಂತಿ ಉತ್ಸವ ನಿಮಿತ್ತಿ ಟಿಟಿಡಿಯಿಂದ ತಂದಿದ್ದ ಶೇಷವಸ್ತ್ರವನ್ನು ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ರಾಯರ ಪ್ರತೀಕದ ಮುಂದಿರಿಸಿ ಪೂಜೆ ಮಾಡಿದರು.
ತೀರ್ಥರಿಗೆ ಹಸ್ತಾಂತರಿಸಿದರು. ಬಳಿಕ ಶ್ರೀ ವೆಂಕಟೇಶ್ವರ ದೇವರ ಶೇಷವಸ್ತ್ರವನ್ನು ತಲೆ ಮೇಲೆ ಇರಿಸಿಕೊಂಡು ಪ್ರದಕ್ಷಣೆ ಹಾಕಿ ಶ್ರೀಗಳು ಶ್ರೀಗುರುರಾಯರ ಮೂಲ ಬೃಂದಾ ವನದ ಮುಂದೆಯಿಟ್ಟು ವಿಶೇಷ ಪೂಜೆ ಸಲ್ಲಿಸಿದರು.
ಪ್ರಕಾರಾದ ಉಯ್ಯಾಲೆ ಮಂಟಪದಲ್ಲಿ ರಾಯರ ಪ್ರತೀಕದ ಮುಂದೆ ಶ್ರೀವಾರಿ ವಸ್ತ್ರ ಪ್ರಸಾದವನ್ನಿರಿಸಿ ಪೂಜಿಸಿದರು. ಇದೇ ವೇಳೆ ರಾಯರ ಭಕ್ತ ಶ್ರೀನಿವಾಸ ಮೂರ್ತಿಯವರು ಶ್ರೀ ಬ್ರಹ್ಮ ಕರಾಚಿತ ಶ್ರೀಮೂಲ ರಾಮ ದೇವರಿಗೆ ದೇಣಿಗೆಯಾಗಿ ನೀಡಿದ ವೈಜಯಂತಿ ವರಮಾಲಾವನ್ನು ಶ್ರೀಗಳು ಸಮರ್ಪಿಸಿ ನೆರೆದ ಭಕ್ತರನ್ನುದ್ದೇಶಿಸಿ ಅನುಗ್ರಹ ಸಂದೇಶ ನೀಡಿದರು.
Loksabha election 2024: ಹೈಕಮಾಂಡ್ ನನಗೆ ಮತ್ತೊಮ್ಮೆ ಅವಕಾಶ ಕೊಡುತ್ತೆ: ರಾಯಚೂರು ಸಂಸದ ರಾಜಾ
ಬಳಿಕ ಶ್ರೀಮಠದ ಪ್ರಾಕಾರದಲ್ಲಿ ನವರತ್ನ ಖಚಿತ ರಥದಲ್ಲಿ ರಾಯರ ರಜತ ಪ್ರತೀಕ ರಥೋತ್ಸವಕ್ಕೆ ಚಾಲನೆ ನೀಡಿದರು. ರಾಯರ ವರ್ಧಂತಿ ದಿನ ಪ್ರತಿ ವರ್ಷದಂತೆ ಈ ಸಲವೂ ನಾದಹಾರ ಸೇವೆ ನಡೆಯಿತು. ಚೆನ್ನೈನ ಶ್ರೀರಾಘವೇಂದ್ರ ಸ್ವಾಮಿ ನಾದಹಾರಂ ಟ್ರಸ್ ನ 350 ಕಲಾವಿದರು ಏಕಕಾಲದಲ್ಲಿ ವಿವಿಧ ವಾದ್ಯಗಳನ್ನು ನುಡಿಸಿ, ಗಾಯನ ಮಾಡಿ ರಾಯರ ಸ್ಮರಣೆ ಮುಖಾಂತರ ಅವರಿಗೆ ಸಂಗೀತ ಸೇವೆಯನ್ನು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಶ್ರೀಮಠದ ಪಂಡಿತ ಕೇಸರಿ ರಾಜಾ ಎಸ್.ಗಿರಿರಾಜ ಆಚಾರ್, ವ್ಯವಸ್ಥಾಪಕ ಎಸ್.ಕೆ ಶ್ರೀನಿವಾಸರಾವ್ ಸೇರಿದಂತೆ ಪಂಡಿತರು, ವಿದ್ವಾಂಸರು, ಆಡಳಿತಾಧಿಕಾರಿಗಳು, ಸಿಬ್ಬಂದಿ, ಭಕ್ತ ಸಮುದಾಯವು ಭಾಗವಹಿಸಿತ್ತು.
ರಾಯರ ದರ್ಶನ ಪಡೆದ ನಟ ಜಗ್ಗೇಶ್
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಗಳ 429ನೇ ವರ್ಧಂತೋತ್ಸವ ಹಿನ್ನೆಲೆಯಲ್ಲಿ ಚಿತ್ರನಟ ಜಗ್ಗೇಶ ಅವರು ಶ್ರೀಮಠಕ್ಕೆ ಆಗಮಿಸಿದ್ದರು. ಶ್ರೀಗುರು ರಾಯರ ಮೂಲ ಬೃಂದಾವನದ ಶ್ರೀಗಳು ಫಲಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು.