ಇದೇ ತಿಂಗಳ 26ನೇ ತಾರೀಖಿನಂದು ಮಂಗಳ ಗ್ರಹವು ಮಕರ ರಾಶಿಗೆ ಕಾಲಿಡುತ್ತಿದೆ. ಈ ಮಂಗಳ ಗೋಚಾರದಿಂದ ನಾಲ್ಕು ರಾಶಿಗಳ ಅದೃಷ್ಟ ಖುಲಾಯಿಸಲಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂಬತ್ತು ಗ್ರಹಗಳೂ(planets) 12 ನಕ್ಷತ್ರಪುಂಜ(constellation)ಗಳೂ ಇವೆ. ಈ ಗ್ರಹಗಳ ಪ್ರತಿ ಚಲನೆಯೂ ಜೀವಿಗಳ ಪ್ರತಿ ಬದುಕಿನ ಮೇಲೆ ಪರಿಣಾಮ ಬೀರುತ್ತಲೇ ಇರುತ್ತದೆ. ವ್ಯಕ್ತಿ ಹುಟ್ಟಿದ ಸಮಯದಲ್ಲೇ ಆತನ ಕಾರಕ, ಮಾರಕ ಗ್ರಹಗಳು ನಿರ್ಧರಿತವಾಗುತ್ತವೆ. ಇದಲ್ಲದೆ, ಗ್ರಹಗಳ ಚಲನೆಯು ಆಗಾಗ ಬದುಕಿನಲ್ಲಿ ಬದಲಾವಣೆಗಳಿಗೆ ಕಾರಣವಾಗಿರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದಕ್ಕೆ ಹೋಗುವುದರಿಂದ ಕೆಲವರಿಗೆ ಲಾಭವಾದರೆ ಮತ್ತೆ ಕೆಲ ರಾಶಿಯವರಿಗೆ ನಷ್ಟವಾಗುತ್ತದೆ. ಈ ತಿಂಗಳ 26ರಂದು ಮಂಗಳ ಗ್ರಹವು ಮಕರ(Capricorn) ರಾಶಿಗೆ ಕಾಲಿಡುತ್ತಿದೆ. ಮಂಗಳವು ಧೈರ್ಯ ಕೊಡುವ ಗ್ರಹವಾಗಿದೆ. ಈ ಮಂಗಳ(Mars) ಗೋಚಾರದಿಂದ ಬಹುತೇಕ ಎಲ್ಲ ರಾಶಿಗಳ(zodiac signs) ಮೇಲೆ ಪರಿಣಾಮ ಉಂಟಾಗುತ್ತದೆ. ಅದರಲ್ಲೂ ನಾಲ್ಕು ರಾಶಿಗಳು ಈ ಮಂಗಳನ ಚಲನೆಯ ಅಪಾರ ಲಾಭ ಪಡೆಯಲಿವೆ. ಅವು ಯಾವೆಲ್ಲ, ಏನು ಫಲಗಳಿವೆ ನೋಡೋಣ.
ಮೇಷ(Aries)
ಈ ಮಂಗಳ ಗೋಚಾರದಿಂದ ಮೇಷ ರಾಶಿಯ ಜನರಿಗೆ ಬಹಳಷ್ಟು ಶುಭವಾಗಲಿದೆ. ಮೇಷ ರಾಶಿಯ ಅಧಿಪತಿಯೇ ಮಂಗಳನಾಗಿದ್ದಾನೆ. ಹೀಗಾಗಿ, ಮಂಗಳದ ಈ ಚಲನೆಯು ಮೇಷ ರಾಶಿಯ ನಿರುದ್ಯೋಗಿಗಳಿಗೆ ಹೊಸ ಕೆಲಸ(new job) ಕೊಡಿಸಲಿದೆ. ಉದ್ಯೋಗಸ್ಥರಿಗೆ ಭಡ್ತಿ ಹಾಗೂ ಸಂಬಳ ಹೆಚ್ಚಳವಾಗಲಿದೆ. ಬೇರೆ ಉದ್ಯಮದಲ್ಲಿ ತೊಡಗಿರುವವರಿಗೂ ಉತ್ತಮ ಆದಾಯ ಬರಲಿದೆ.
ವೃಷಭ(Taurus)
ವೃಷಭ ರಾಶಿಯ 9ನೇ ಮನೆಯಲ್ಲಿ ಮಂಗಳನ ಚಲನೆ ಆಗಲಿದೆ. ಇದು ಅದೃಷ್ಟ(luck)ಕ್ಕೆ ಸಂಬಂಧಿಸಿದ್ದು. ಹಾಗಾಗಿ, ಮಂಗಳ ಗೋಚಾರದಿಂದ ವೃಷಭ ರಾಶಿಯವರು ಕೈಗೊಳ್ಳುವ ಎಲ್ಲ ಕಾರ್ಯಗಳಲ್ಲೂ ಯಶ ದಕ್ಕಲಿದೆ. ಆರ್ಥಿಕ ಸ್ಥಿತಿಗತಿ(economic situation) ಉತ್ತಮವಾಗಲಿದೆ. ಹೊಸ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಕೂಡಾ ಈ ಸಮಯ ಪ್ರಶಸ್ತವಾದುದಾಗಿದೆ. ಮಂಗಳನ ಆಶೀರ್ವಾದದಿಂದ ಇವರ ಆತ್ಮವಿಶ್ವಾಸ ಸಾಕಷ್ಟು ಹೆಚ್ಚಲಿದೆ. ವಿದ್ಯಾರ್ಥಿಗಳಿಗೆ ಕೂಡಾ ಇದು ಉತ್ತಮ ಸಮಯ ಎಂಬುದು ಸಾಬೀತಾಗಲಿದೆ. ನೀವು ದೊಡ್ಡ ನಿರ್ಧಾರಗಳನ್ನು ಈ ಸಮಯದಲ್ಲಿ ತೆಗೆದುಕೊಳ್ಳುವುದು ಒಳ್ಳೆಯದು.
Auspicious Muhurat: ದಿನ ಅಶುಭವಾದರೂ ಶುಭ ಫಲವನ್ನೇ ನೀಡುತ್ತೆ ಈ ಮುಹೂರ್ತ!
ಧನು(Sagittarius)
ಧನು ರಾಶಿಗೆ ಕೂಡಾ ಮಂಗಳನ ಈ ಮಕರ ಚಲನೆಯಿಂದ ಬಹಳಷ್ಟು ಲಾಭಗಳಿವೆ. ಏಕೆಂದರೆ ಮಂಗಳ ಗ್ರಹವು ಈ ರಾಶಿಯ 2ನೇ ಮನೆಯಲ್ಲಿ ಚಲಿಸಲಿದೆ. ಈ ಮನೆಯು ಹಣ ಹಾಗೂ ಮಾತಿ(money, speech)ಗೆ ಸಂಬಂಧಿಸಿದ್ದು. ಮಾರ್ಕೆಟಿಂಗ್, ಮೀಡಿಯಾ, ಫಿಲ್ಮ್ ಇಂಡಸ್ಟ್ರಿಯಲ್ಲಿರುವ ಧನು ರಾಶಿಯವರಿಗೆ ಈ ಸಮಯ ಬಹಳ ಸುಸಂದರ್ಭಗಳನ್ನು, ಅವಕಾಶಗಳನ್ನು ಒದಗಿಸಲಿದೆ. ಹೊಸ ಹೊಸ ಒಪ್ಪಂದ(new deal) ಮಾಡಿಕೊಳ್ಳಲು ಪ್ರಶಸ್ತ ಸಮಯವಾಗಿದೆ. ಎಲ್ಲೋ ತಡೆಯಾಗಿ ನಿಂತ ಹಣ ಕೈ ಸೇರಲಿದೆ. ಗುರು ಗ್ರಹವು ಧನು ರಾಶಿಯ ಅಧಿಪತಿಯಾಗಿದೆ. ಗುರು ಹಾಗೂ ಮಂಗಳ ಸ್ನೇಹಿ ಗ್ರಹಗಳು. ಇವೆರಡರ ಈ ಸ್ನೇಹದಿಂದಾಗಿ ಈ ಮಂಗಳ ಗೋಚರ ಧನುವಿಗೆ ಅದೃಷ್ಟ ತರಲಿದೆ.
Vastu Tips For Kitchen: ಈ ಪದಾರ್ಥಗಳು ಅಡುಗೆಮನೆಯಲ್ಲಿ ಎಂದಿಗೂ ಮುಗಿಯದಂತೆ ನೋಡಿಕೊಳ್ಳಿ!
ಮೀನ(Pisces)
ಮೀನ ರಾಶಿಯ 11ನೇ ಮನೆಯಲ್ಲಿ ಮಂಗಳನ ಚಲನೆಯಾಗಲಿದೆ. ಇದು ಆದಾಯಕ್ಕೆ ಸಂಬಂಧಿಸಿದ್ದು. ಹಾಗಾಗಿ, ಈ ಸಂದರ್ಭದಲ್ಲಿ ಮೀನ ರಾಶಿಗೆ ಆದಾಯ ಹೆಚ್ಚಲಿದೆ. ಉದ್ಯೋಗ, ಉದ್ಯಮಗಳಲ್ಲಿ ಹೆಚ್ಚು ಲಾಭವಿರಲಿದೆ. ನಿರುದ್ಯೋಗಿಗಳಿಗೆ ಕೆಲಸ ದೊರೆವ ಸಾಕಷ್ಟು ಅವಕಾಶಗಳು ಎದುರಾಗಲಿವೆ. ಈ ರಾಶಿಯ ಅಧಿಪತಿ ಕೂಡಾ ಗುರುವೇ ಆಗಿದ್ದು, ಗುರು ಹಾಗೂ ಮಂಗಳದ ಗೆಳೆತನ ಮೀನ ರಾಶಿಗೆ ಲಾಭಕಾರಿಯಾಗಲಿದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.