ರಾಜ್ಯ, ದೇಶ, ವಿಶ್ವದಲ್ಲಿ ಅಶಾಂತಿ ನಿರ್ಮಾಣವಾಗಿದೆ. ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂದು ಗುಮ್ಮಟನಗರಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಕೋಟಿಯಜ್ಞ ಪೂರೈಸಲಾಯಿತು.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಏ.23): ರಾಜ್ಯ, ದೇಶ, ವಿಶ್ವದಲ್ಲಿ ಅಶಾಂತಿ ನಿರ್ಮಾಣವಾಗಿದೆ. ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂದು ಗುಮ್ಮಟನಗರಿ ವಿಜಯಪುರ (Vijayapura) ಜಿಲ್ಲೆಯ ಇಂಡಿ ತಾಲೂಕಿನ ಬೆನಕನಹಳ್ಳಿ (Benakanahalli) ಗ್ರಾಮದಲ್ಲಿ ಕೋಟಿ ಯಜ್ಞ (Japa Yagna) ಪೂರೈಸಲಾಯಿತು. ವಿಶೇಷ ಅಂದರೆ ಈ ಮೂಲಕ ಜಿಲ್ಲೆಯಲ್ಲಿ 50 ವರ್ಷದ ಹಿಂದಿನ ಇತಿಹಾಸ ಮತ್ತೆ ಮರುಕಳಿಸಿದಂತಾಗಿದೆ.
undefined
18 ಕೋಟಿ ಬಾರಿ ಜಪಯಜ್ಞ: ಬೆನಕನಹಳ್ಳಿ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ವಿಶ್ವ ಶಾಂತಿ ಹಾಗೂ ಲೋಕ ಕಲ್ಯಾಣಕ್ಕಾಗಿ ಇಷ್ಟಲಿಂಗ ಪೂಜೆ ಹಾಗೂ 18 ಕೋಟಿ ಜಪಯಜ್ಞ ನಡೆಯಿತು. ಐತಿಹಾಸಿಕವಾಗಿ ಜರುಗಿದ ಈ ಕಾರ್ಯಕ್ರಮ ಹಿನ್ನಲೆ ಲಕ್ಷಾಂತರ ಜನ ಭಕ್ತಾದಿಗಳು ಜಪಯಜ್ಞ ಮಾಡಿದರು. ಬೆಳಗಿನ ಜಾವ 6 ಗಂಟೆಗೆ ಪ್ರಾರಂಭವಾದ 18 ಕೋಟಿ ಜಪಯಜ್ಞ ಹಾಗೂ ಇಷ್ಟಲಿಂಗ ಪೂಜಾ ಕಾರ್ಯಕ್ರಮ 9.30 ಗಂಟೆ ವರೆಗೆ ಮಾಡುವ ಮೂಲಕ 18 ಕೋಟಿ ಜಪಯಜ್ಞ ಪೂರೈಸಿದರು.
ಬರದ ನಾಡಿಗೆ ಕಾಲಿಟ್ಟ ಕಾಶ್ಮೀರಿ ಆ್ಯಪಲ್: ವಿಜಯಪುರದಲ್ಲಿ ಸೇಬು ಬೆಳೆದು ಸೈ ಎನಿಸಿಕೊಂಡ ರೈತ
ರಾಜಕಾರಣಿ, ಜನಪ್ರತಿನಿಧಿಗಳಿಂದಲೂ ಜಪಯಜ್ಞ: ಸಾಮೂಹಿಕವಾಗಿ ಲಕ್ಷಕ್ಕೂ ಅಧಿಕ ಭಕ್ತರು ಸೇರಿ ನಡೆದ 18 ಕೋಟಿ ಜಪಯಜ್ಞ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ರಾಜಕಾರಣಿಗಳು ಸಹ ಪಾಲ್ಗೊಂಡಿದ್ದರು. ಮಾತ್ರವಲ್ಲದೆ ತಾವು ಕೂಡ ಜಪಯಜ್ಞ ಮಾಡಿದ್ದು ವಿಶೇಷವಾಗಿತ್ತು. ಇಂಡಿ ಶಾಸಕ ಶಾಸಕ ಯಶವಂತರಾಗೌಡ ಪಾಟೀಲ, ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಮಾಜಿ ಸಚಿವ ಪಟ್ಟಣಶೆಟ್ಟಿ ಸೇರಿದಂತೆ ಹಲವು ಜನ ರಾಜಕಾರಣಿಗಳು, ಜನಪ್ರತಿನಿಧಿಗಳು ಪಾಲ್ಗೊಂಡು ಜಪಯಜ್ಞ ಮಾಡಿದರು.
ಹೆಲಿಕಾಪ್ಟರ್ ಮೂಲಕ ಹೂಮಳೆ: ಜಪಯಜ್ಞ ಸಮಯದಲ್ಲಿ ಹೆಲಿಕಾಪ್ಟರ್ ಮೂಲಕ ಹೂವಿನ ಮಳೆ ಸುರಿಸಲಾಯಿತು. ದೇಗುಲದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಪ್ರಾಂಗಣವನ್ನ ಸುತ್ತು ಹೊಡೆದ ಹೆಲಿಕಾಪ್ಟರ್ ಹೂಮಳೆ ಸುರಿಸಿತು. ಈ ವೇಳೆ ಜಪಯಜ್ಞದಲ್ಲಿ ಪಾಲ್ಗೊಂಡಿದ್ದ ಲಕ್ಷಾಂತರ ಭಕ್ತರು ಪುಳಕಿತಗೊಂಡರು.
ಮರುಕಳಿಸಿದ 50 ವರ್ಷದ ಇತಿಹಾಸ: ಮಹಾತ್ಮ ಬಸವಣ್ಣನ ನಂತರ ಅವರ ತತ್ವಾದಾರ್ಶಗಳನ್ನೇ ದಯವಾಗಿಸಿಕೊಂಡಿದ್ದ ಲಿಂಗೈಕ್ಯ ಬಂಥನಾಳದ ಸಂಗನಬಸವ ಶಿವಯೋಗಿಗಳು 1969 ರಲ್ಲಿ ಇಂಡಿ ತಾಲೂಕಿನ ಲಚ್ಯಾಣದ ಸಿದ್ದಿಪುರುಷ ಸಿದ್ದಪ್ಪಮಹಾರಾಜರ ಸುಕ್ಷೇತ್ರದಲ್ಲಿ ಏಕಕಾಲದಲ್ಲಿ 1.96 ಲಕ್ಷ ಗಣ ಇಷ್ಟ ಲಿಂಗ ಪೂಜೆ ನೆರವೇರಿಸಿದ್ದರು. ಅವರ ನೆನಪಿಗಾಗಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವೀರಗೋಟದಲ್ಲಿ 2019 ಫೆ 18 ರಂದು 1.96 ಲಕ್ಷ ಇಷ್ಟಲಿಂಗ ಪೂಜೆ ನೆರವೇರಿಸಿದ ಕೀರ್ತಿ ಅಡವಿಲಿಂಗ ಮಹಾರಾಜರಿಗೆ ಸಲ್ಲುತ್ತದೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ 1 ವರ್ಷ 11 ತಿಂಗಳ ಪುಟಾಣಿ
ಅದೇ ತರನಾಗಿ ಇಂದು ಇಂಡಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಅಡವಿಲಿಂಗ ಮಹಾರಾಜರ ಗುರುಗಳಾದ ಶಿವಯೋಗೇಶ್ವರ ಮಹಾಸ್ವಾಮಿಗಳ 1968 ರಲ್ಲಿ 18 ತಿಂಗಳು ಯೋಗಾನುಷ್ಟಾನ ಆಚರಿಸಿದ್ದರು. ಅಂದು ಬಂಥನಾಳದ ಸಂಗನಬಸವ ಸ್ವಾಮಿಜಿ ಹಾಗೂ ವಿಜಯಪುರದ ಜ್ಞಾನಯೋಗಾಶ್ರಮದ ಪೂಜ್ಯ ಮಲ್ಲಿಕಾರ್ಜುನ ಶ್ರೀಗಳು ಆಗಮಿಸಿ ಮಹಾಜಪಯಜ್ಞ ಕಾರ್ಯಕ್ರಮ ಹಮ್ಮಿಕೊಂಡು 50 ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಶಿವಯೋಗಿಗಳ ಶಿಷ್ಯರಾದ ಅಡವಿಲಿಂಗ ಮಹಾರಾಜರ ಸಂಕಲ್ಪದಂತೆ ವಿಶ್ವಶಾಂತಿಗಾಗಿ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ 18 ಕೋಟಿ ಜಪಯಜ್ಞ ಕಾರ್ಯಕ್ರಮ ನಡೆಯಿತು. ಈ ಮೂಲಕ 50 ವರ್ಷದ ಹಳೆಯ ಇತಿಹಾಸ ಮತ್ತೆ ಮರುಕಳಿಸಿದಂತಾಗಿದೆ.