Solar Eclipse 2022: ಸೂರ್ಯಗ್ರಹಣದಂದು ಮಾಡಬೇಕಾದ್ದು, ಮಾಡಬಾರದ್ದು ಏನು?

By Suvarna News  |  First Published Apr 22, 2022, 5:25 PM IST

ಗ್ರಹಣದ ಸಮಯದಲ್ಲಿ ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎಂಬ ಗೊಂದಲ ಸಹಜವಾಗಿ ಇದ್ದೇ ಇರುತ್ತವೆ. ಗ್ರಹಣದ ಸಮಯದಲ್ಲಿ ನಕಾರಾತ್ಮಕ ಶಕ್ತಿಯ ಅರಿವು ಹೆಚ್ಚಾಗಿರುತ್ತದೆ. ಹಾಗಾಗಿ ಕೆಲವು ಕೆಲಸಗಳನ್ನು ಮಾಡುವುದು ನಿಷಿದ್ಧವಾಗಿದೆ. ಹಾಗಾದರೆ ಯಾವ ಕೆಲಸಗಳನ್ನು ಮಾಡಬೇಕು ಮತ್ತು ಮಾಡಬಾರದು ಎಂಬುದನ್ನು ತಿಳಿಯೋಣ...


ಹಿಂದೂ ಸಂಪ್ರದಾಯದಲ್ಲಿ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಗ್ರಹಣಕ್ಕೆ (Eclipse) ವಿಶೇಷ ಮಹತ್ವವಿದೆ. ಕೇವಲ ಅಷ್ಟೇ ಅಲ್ಲದೆ ವೈಜ್ಞಾನಿಕವಾಗಿ ಸಹ ಗ್ರಹಣವನ್ನು ವಿಶೇಷವೆಂದೇ ಹೇಳಲಾಗುತ್ತದೆ. ಈ ಬಾರಿ ಏಪ್ರಿಲ್‌ 30 ರಂದು ವರ್ಷದ ಮೊದಲ ಸೂರ್ಯಗ್ರಹಣ ಉಂಟಾಗಲಿದೆ. ಅಮವಾಸ್ಯೆಯಂದು ಚಂದ್ರ ಮತ್ತು ಭೂಮಿಯ ನಡುವೆ ಬಂದಾಗ ಸೂರ್ಯಗ್ರಹಣದ ಸ್ಥಿತಿ ಉಂಟಾಗುತ್ತದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣ ಕಾಲದಲ್ಲಿ ಸುತ್ತಮುತ್ತಲಿನ ವಸ್ತುಗಳು ಸೇರಿದಂತೆ ಎಲ್ಲವೂ ಗ್ರಹಣದ ಪ್ರಭಾವಕ್ಕೆ (Effect) ಒಳಗಾಗುತ್ತವೆ. ಹಾಗಾಗಿ ಈ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡಬಾರದೆಂಬ ನಿಷೇಧವಿದೆ. ಭಾರತದಲ್ಲಿ ಈ ಗ್ರಹಣ ಗೋಚರ ಆಗುವುದಿಲ್ಲ. ಹಾಗಾಗಿ ಸೂತಕ ಕಾಲವನ್ನು ಇಲ್ಲಿ ಆಚರಿಸುವ ಅವಶ್ಯಕತೆ ಇರುವುದಿಲ್ಲ. ಗ್ರಹಣ ಉಂಟಾಗುವುದು ನಿಜವೇ ಆದ್ದರಿಂದ ಆ ಸಮಯದಲ್ಲಿ ಕೆಲವು ಜಾಗ್ರತೆಗಳನ್ನು (Precautions) ವಹಿಸಿಕೊಳ್ಳಬೇಕಾಗುತ್ತದೆ. ಶಾಸ್ತ್ರಗಳಲ್ಲಿ ಹೇಳಿದ ಹಾಗೆ ಗ್ರಹಣದ ಸಮಯದಲ್ಲಿ ಹಲವು ಕೆಲಸಗಳನ್ನು ಮಾಡುವುದು ಅಪಾಯಕ್ಕೆ (Threat) ನಾಂದಿಯಾಗುತ್ತದೆ. ಹಾಗಾಗಿ ಅವುಗಳನ್ನು ಆ ಸಮಯದಲ್ಲಿ ಮಾಡದಿರುವುದು ಉತ್ತಮ. ಹಾಗಾದರೆ ಸೂರ್ಯ (Sun) ಗ್ರಹಣದ ಸಮಯದಲ್ಲಿ ಯಾವ ಕೆಲಸಗಳನ್ನು ಮಾಡಬೇಕು (Dos) ಮತ್ತು ಯಾವುದನ್ನು ಮಾಡುವುದು ನಿಷೇಧ (Do not) ಎಂಬುದರ ಬಗ್ಗೆ ತಿಳಿಯೋಣ...

ಗ್ರಹಣದ ಸಮಯದಲ್ಲಿ ಏನನ್ನು ಮಾಡಬಾರದು ಎಂಬುದನ್ನು ತಿಳಿಯೋಣ:
ಹೊಸ ಕಾರ್ಯಕ್ಕೆ ಚಾಲನೆ (New work): ಗ್ರಹಣದ ಸಮಯದಲ್ಲಿ ನಕಾರಾತ್ಮಕ ಶಕ್ತಿಯ (Negative energy) ಪ್ರಭಾವ ಹೆಚ್ಚಿರುವುದರಿಂದ ಯಾವುದೇ ಹೊಸ ಕೆಲಸಗಳನ್ನು ಆರಂಭಿಸಬಾರದು. ಅಷ್ಟೆ ಅಲ್ಲದೆ ಶುಭ ಕಾರ್ಯಗಳನ್ನು ಈ ಸಮಯದಲ್ಲಿ ಮಾಡುವುದು ನಿಷಿದ್ಧವಾಗಿದೆ. ಮುಖ್ಯವಾಗಿ ಈ ಸಮಯದಲ್ಲಿ ಉಗುರು ಕತ್ತರಿಸುವುದು, ತಲೆ ಬಾಚಿಕೊಳ್ಳುವುದನ್ನು ಮಾಡಲೇ ಬಾರದೆಂದು ಶಾಸ್ತ್ರ ಹೇಳುತ್ತದೆ. 

ಇದನ್ನು ಓದಿ: ಈ 3 ವಸ್ತುಗಳ ದಾನ ಮಾಡಿ ತೊಂದರೆಯಿಂದ ಪಾರಾಗಿ

ಆಹಾರ ತಿನ್ನಬಾರದು (Eating food): 
ಶಾಸ್ತ್ರಗಳ ಪ್ರಕಾರ ಗ್ರಹಣದ ಸಮಯದಲ್ಲಿ ಯಾವುದೇ ರೀತಿಯ ಆಹಾರವನ್ನು ಸೇವಿಸಬಾರದು. ಈ ಸಮಯದಲ್ಲಿ ಆಹಾರ ಸೇವನೆ ಮಾಡುವುದರಿಂದ ಗ್ರಹಣದ ನಕಾರಾತ್ಮಕ ಪ್ರಭಾವ ವ್ಯಕ್ತಿಯ ಮೇಲಾಗುತ್ತದೆ. ಅಷ್ಟೇ ಅಲ್ಲದೆ ಗ್ರಹಣದ ಸಮಯದಲ್ಲಿ ಆಹಾರವನ್ನು ಸಿದ್ಧ ಮಾಡುವುದು ಕೂಡ ನಿಷಿದ್ಧವಾಗಿದೆ. ಒಂದೊಮ್ಮೆ ಸಿದ್ಧಮಾಡಿದ ಆಹಾರವಿದ್ದರೂ ಅದನ್ನು ಗ್ರಹಣದ ನಂತರ ಸೇವಿಸುವುದು ಸಹ ವರ್ಜ್ಯವಾಗಿದೆ. ಮುಖ್ಯವಾಗಿ ಗ್ರಹಣದ ಸಮಯದಲ್ಲಿ ತರಕಾರಿ ಹೆಚ್ಚುವುದು (Chopping vegetables), ಹೂ ಕೊಯ್ಯುವುದು, ಹೂ ಕಟ್ಟುವುದು ಮುಂತಾದ ಕೆಲಸಗಳನ್ನು ಮಾಡಬಾರದೆಂದು ಶಾಸ್ತ್ರ ಹೇಳುತ್ತದೆ.

ಇವುಗಳನ್ನು ಮಾಡಲೇಬಾರದು 
ಗ್ರಹಣದ ಸಮಯದಲ್ಲಿ ಮುಖ್ಯವಾಗಿ ಮಲಗುವುದು (Sleeping) ನಿಷಿದ್ಧವಾಗಿದೆ. ಜತೆಗೆ ಸೂಜಿ ದಾರ ಬಳಸಿ ಹೊಲಿಯುವುದು ಮತ್ತು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವುದು ಇತ್ಯಾದಿ ಕೆಲಸಗಳನ್ನು ಮಾಡಲೇಬಾರದೆಂದು ಹೇಳಲಾಗುತ್ತದೆ. 

ಗರ್ಭಿಣಿಯರು (Pregnant) ಇದನ್ನು ಮಾಡಬಾರದು
ಗ್ರಹಣದ ಸಮಯದಲ್ಲಿ ಗರ್ಭಿಣಿಯರು ತುಂಬ ಎಚ್ಚರದಿಂದ ಇರಬೇಕು. ಯಾವುದೇ ಹರಿತವಾದ (Sharp) ವಸ್ತುಗಳನ್ನು ಚಾಕು, ಚೂರಿ, ಕತ್ತಿ ಮುಂತಾದ ವಸ್ತುಗಳನ್ನು ಮುಟ್ಟುವುದು ಸಹ ನಿಷಿದ್ಧವಾಗಿದೆ. ಇದರಿಂದ ಮಗುವಿನ (Baby) ಮೇಲೆ ಕೆಟ್ಟ ಪರಿಣಾಮ (Bad effect) ಉಂಟಾಗುತ್ತದೆ. ಅಷ್ಟೇ ಅಲ್ಲದೆ ಯಾವುದೇ ಕೆಲಸವನ್ನೂ ಮಾಡದೆ ದೇವರ ಧ್ಯಾನ (Meditation) ಮಾಡುತ್ತಿದ್ದರೆ ಅತ್ಯಂತ ಉತ್ತಮ. 

ಗ್ರಹಣದ ಸಮಯದಲ್ಲಿ ಈ ಕೆಲಸಗಳನ್ನು ಮಾಡಬೇಕು
ಸಿದ್ಧಪಡಿಸಿದ ಆಹಾರ, ನೀರು, ಉಪ್ಪಿನಕಾಯಿ ಇತ್ಯಾದಿ ಪದಾರ್ಥಗಳ ಮೇಲೆ ತುಳಸಿ (Tulasi) ಎಲೆಯನ್ನು ಇಡಬೇಕು. ಇದರಿಂದ ಗ್ರಹಣದ ನಕಾರಾತ್ಮಕ ಪರಿಣಾಮ ಆ ವಸ್ತುಗಳ ಮೇಲೆ ಆಗುವುದಿಲ್ಲ. ಅವೇ ತುಳಸಿಯನ್ನು ಇಟ್ಟ ಪದಾರ್ಥಗಳನ್ನು ಗ್ರಹಣದ ನಂತರವೂ ಬಳಸಬಹುದು. 

ಇದನ್ನು ಓದಿ: Solar Eclipse: ಏ.30ರ ಸೂರ್ಯಗ್ರಹಣ ಎಷ್ಟು ಗಂಟೆಗೆ? ಎಫೆಕ್ಟ್ ಉಂಟಾ?

ಗ್ರಹಣದ ಸಮಯದಲ್ಲಿ ದೇವರ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸಿಡಬೇಕು. ಗ್ರಹಣದ ಸಮಯದಲ್ಲಿ ದೇವರ ಧ್ಯಾನ ಮಾಡುತ್ತಿರಬೇಕು. ಗ್ರಹಣ ಅಂತ್ಯವಾದ ನಂತರ ಸ್ನಾನ ಮಾಡಿ, ಶಕ್ತ್ಯಾನುಸಾರ ದಾನ ಧರ್ಮಗಳನ್ನು ಮಾಡಬೇಕು.

click me!