Fast Fashion: ಒಮ್ಮೆ ಧರಿಸಿ ಬಿಸಾಡಬೇಡಿ! ನಿಮ್ಮ ಬಟ್ಟೆ ಯಾವಾಗಲೂ ಹೊಸದಾಗಿ ಕಾಣಲು ಇಷ್ಟು ಮಾಡಿ ಸಾಕು!

Ravi Janekal   | CMS
Published : Sep 02, 2026, 10:06 PM IST
Fast Fashion

ಸಾರಾಂಶ

ಫಾಸ್ಟ್ ಫ್ಯಾಷನ್ ಬಟ್ಟೆಗಳನ್ನು 'ಬಳಸಿ ಬಿಸಾಡು'ವ ಬದಲು, ಕೆಲವು ಸರಳ ವಿಧಾನಗಳ ಮೂಲಕ ಅವುಗಳ ಬಾಳಿಕೆಯನ್ನು ಹೆಚ್ಚಿಸಬಹುದು. ವಾಷಿಂಗ್, ಸಂಗ್ರಹಣೆ ಮತ್ತು ಸ್ಟೈಲಿಂಗ್‌ನಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡರೆ ಹಣ ಉಳಿತಾಯದ ಜೊತೆಗೆ ಪರಿಸರಕ್ಕೂ ಒಳ್ಳೆಯದು.

ವೀಕೆಂಡ್ ಬಂದರೆ ಸಾಕು ಬೆಂಗಳೂರಿನ ಜನ ಮಾಲ್‌ಗಳಿಗೆ ನುಗ್ಗುತ್ತಾರೆ ಮನಸೋ ಇಚ್ಛೇ ಬಟ್ಟೆಗಳನ್ನ ಖರೀದಿಸುತ್ತಾರೆ. ಹಿಂದೆಲ್ಲ, ವರ್ಷಕ್ಕೆ ಒಮ್ಮೆ, ಹಬ್ಬದ ದಿನಗಳಲ್ಲಿ ಮಾತ್ರ ಬಟ್ಟೆ ಖರೀದಿಸುತ್ತಿದ್ದರು. ಆದರೆ ಕಾಲ ತುಂಬಾ ಪ್ರತಿ ವೀಕೆಂಡ್‌ಗೂ ಬಟ್ಟೆ ಖರೀದಿಸುತ್ತಾರೆ. ಖರೀದಿಸಿದ ಬಟ್ಟೆಗಳು ಒಮ್ಮೆ ಧರಿಸಿ ಬಿಸಾಡುತ್ತಾರೆ. ಮತ್ತೆ ಧರಿಸಲು ಹಳೆದಂತೆ ಕಾಣುತ್ತೆ! ಕೆಲವರಂತೂ ಒಮ್ಮೆ ಧರಿಸಿದ ಬಟ್ಟೆ ಮತ್ತೆ ಧರಿಸುವುದೇ ಇಲ್ಲ.

ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಖರೀದಿಸುವ ಫಾಸ್ಟ್ ಫ್ಯಾಷನ್ ಬಟ್ಟೆಗಳು ಕೆಲವೇ ದಿನಗಳಲ್ಲಿ ಹಾಳಾಗುತ್ತವೆ ಎಂಬುದು ಇವರ ಸಾಮಾನ್ಯ ದೂರು. ಆದರೆ ಕೆಲವು ವಿಧಾನಗಳ ಮೂಲಕ ಈ ಬಟ್ಟೆಗಳ ಬಾಳಿಕೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಇದರಿಂದ ನಿಮ್ಮ ಹಣ ಉಳಿತಾಯವಾಗುವುದಲ್ಲದೆ. ಅನಗತ್ಯವಾಗಿ ಬಟ್ಟೆಗಳನ್ನು ಬಿಸಾಡುವುದನ್ನು ತಪ್ಪಿಸಬಹುದು.

ಬಟ್ಟೆಗಳನ್ನ ಹೇಗೆ ವಾಶ್ ಮಾಡುತ್ತೀರಿ?

ಬಟ್ಟೆಗಳ ಬಾಳಿಕೆ ಹೆಚ್ಚಿಸುವಲ್ಲಿ ನೀವು ಅವುಗಳನ್ನು ಹೇಗೆ ತೊಳೆಯುತ್ತೀರಿ ಎಂಬುದು ಬಹಳ ಮುಖ್ಯ. ಪ್ರತಿ ಬಾರಿ ಧರಿಸಿದ ತಕ್ಷಣ ಬಟ್ಟೆಗಳನ್ನು ತೊಳೆಯುವ ಅಭ್ಯಾಸವನ್ನು ಬಿಡುವುದು ಮೊದಲ ಹೆಜ್ಜೆ. ಇದರಿಂದ ಬಟ್ಟೆಯ ಎಳೆಗಳು ಬೇಗ ಸವೆದು ಹೋಗುವುದು ತಪ್ಪುತ್ತದೆ.

ವಾಷಿಂಗ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

ಬಟ್ಟೆಗಳನ್ನು ತೊಳೆಯುವಾಗ ಬಿಸಿ ನೀರಿಗೆ ಬದಲಾಗಿ ತಣ್ಣೀರನ್ನು ಬಳಸುವುದು ಉತ್ತಮ. ತಣ್ಣೀರು ಬಟ್ಟೆಯ ಬಣ್ಣವನ್ನು ಕಾಪಾಡುತ್ತದೆ ಮತ್ತು ಬಟ್ಟೆ ಮುದುಡುವುದು ತಡೆಯುತ್ತದೆ. ವಾಷಿಂಗ್ ಮೆಷಿನ್‌ಗೆ ಹಾಕುವ ಮುನ್ನ ಬಟ್ಟೆಗಳನ್ನು ಉಲ್ಟಾ ಮಾಡುವುದು ಒಳ್ಳೆಯದು.

ಮೆಷಿನ್‌ನಲ್ಲಿ 'ಜೆಂಟಲ್ ಸೈಕಲ್' ಆಯ್ಕೆ ಮಾಡಿಕೊಳ್ಳಿ. ಸಾಧ್ಯವಾದಷ್ಟು, ಬಟ್ಟೆಗಳನ್ನು ಡ್ರೈಯರ್‌ನಲ್ಲಿ ಒಣಗಿಸುವ ಬದಲು, ಗಾಳಿಯಲ್ಲಿ ಅಥವಾ ನೆರಳಿನಲ್ಲಿ ಒಣಗಿಸುವುದು ಒಳ್ಳೆಯದು. ಇದರಿಂದ ಬಟ್ಟೆಯ ಫ್ಯಾಬ್ರಿಕ್ ದೀರ್ಘಕಾಲ ಬಾಳಿಕೆ ಬರುತ್ತದೆ. ಸೂಕ್ಷ್ಮವಾದ ಬಟ್ಟೆಗಳನ್ನು ಮೆಶ್ ಬ್ಯಾಗ್‌ನಲ್ಲಿ ಹಾಕಿ ತೊಳೆಯುವುದು ಜಾಣತನ.

ಬಟ್ಟೆಗಳನ್ನ ಇಟ್ಟುಕೊಳ್ಳುವುದು ಅಷ್ಟೇ ಮುಖ್ಯ

ಕೆಲವರು ಬಟ್ಟೆಗಳನ್ನ ಧರಿಸಿ ಮನೆಗೆ ಬಂದಾಗ ಎಲ್ಲೆಂದರಲ್ಲೆ ಬಿಸಾಡುತ್ತಾರೆ. ವಾಶ್ ಮಾಡಿದ ಬಟ್ಟೆಗಳನ್ನು ಫೋಲ್ಡ್ ಮಾಡಿ ಇಡುವ ಬದಲು ಒಂದು ಕುಂಪೆಯಂತೆ ಒಟ್ಟು ಮಾಡಿ ಇಡ್ತಾರೆ. ಹೀಗೆ ಮಾಡುವುದರಿಂದ ಬೇಗನೇ ಹಳೆಯದಂತಾಗುತ್ತೆ. ಉದಾಹರಣೆಗೆ, ದಪ್ಪನೆಯ ಸ್ವೆಟರ್‌ಗಳನ್ನು ಹ್ಯಾಂಗರ್‌ನಲ್ಲಿ ನೇತು ಹಾಕಿದರೆ ಅವು ಹಿಗ್ಗಿಕೊಂಡು ಆಕಾರ ಕಳೆದುಕೊಳ್ಳುತ್ತವೆ. ಹಾಗಾಗಿ, ಅವುಗಳನ್ನು ಅಂದವಾಗಿ ಮಡಚಿ ಇಡುವುದು ಸೂಕ್ತ. ಉಳಿದ ಬಟ್ಟೆಗಳಿಗೆ ಉತ್ತಮ ಗುಣಮಟ್ಟದ ಹ್ಯಾಂಗರ್‌ಗಳನ್ನು ಬಳಸಬೇಕು.

ಬಟ್ಟೆಯ ಗುಂಡಿ ಕಿತ್ತು ಬಂದರೆ ಅಥವಾ ಸಣ್ಣ ತೂತು ಬಿದ್ದರೆ, ಅದನ್ನು ಎಸೆಯುವ ಬದಲು ನೀವೇ ಸರಿಪಡಿಸಲು ಕಲಿಯಿರಿ. ಹೊಲಿಗೆ ಹಾಕುವ ಸ್ಕಿಲ್ ಕಲಿತುಕೊಳ್ಳಿ. ಯುಟ್ಯೂಬ್‌ನಲ್ಲಿ ಇದರ ಬಗ್ಗೆ ಸಾಕಷ್ಟು ವಿಡಿಯೋಗಳು ಸಿಗುತ್ತವೆ. ಹೀಗೆ ಹರಿದ ಭಾಗಕ್ಕೆ ಹೂವಿನ ಅಲಂಕಾರದಲ್ಲಿ ಹೊಲಿಗೆ ಹಾಕಿದರೆ ಇನ್ನಷ್ಟು ಫ್ಯಾಶನ್ ಆಗಿ ಕಾಣುವುದಲ್ಲದೆ. ನಿಮ್ಮ ಬಟ್ಟೆಗಳು ಇನ್ನಷ್ಟು ವರ್ಷಗಳು ಬಳಸಬಹುದು. ಹಳೆಯ ಟೀ-ಶರ್ಟ್‌ಗಳನ್ನು ಮನೆ ಒರೆಸಲು ಅಥವಾ ಹಳೆಯ ಜೀನ್ಸ್ ಅನ್ನು ಶಾರ್ಟ್ಸ್ ಆಗಿ ಪರಿವರ್ತಿಸುವ ಮೂಲಕ ಮರುಬಳಕೆ ಮಾಡಬಹುದು.

ಸ್ಟೈಲಿಂಗ್‌ನಲ್ಲೂ ಇದೆ ಜಾಣ್ಮೆ!

ನಿಮ್ಮ ವಾರ್ಡ್‌ರೋಬ್‌ನಲ್ಲಿರುವ ಎಲ್ಲಾ ಬಟ್ಟೆಗಳೂ ಫಾಸ್ಟ್ ಫ್ಯಾಷನ್ ಆಗಿರಬೇಕಿಲ್ಲ. ಫಾಸ್ಟ್ ಫ್ಯಾಷನ್ ಬಟ್ಟೆಗಳನ್ನು ಉತ್ತಮ ಗುಣಮಟ್ಟದ, ದೀರ್ಘಕಾಲ ಬಾಳಿಕೆ ಬರುವ ಬಟ್ಟೆಗಳೊಂದಿಗೆ ಮಿಕ್ಸ್ ಅಂಡ್ ಮ್ಯಾಚ್ ಮಾಡಿ ಧರಿಸಿ. ಇದನ್ನೇ 'ಹೈ-ಲೋ' ಸ್ಟೈಲಿಂಗ್ ಎನ್ನುತ್ತಾರೆ.

ಒಂದೇ ಬಟ್ಟೆಯನ್ನು ಬೇರೆ ಬೇರೆ ಆಕ್ಸೆಸರಿಗಳೊಂದಿಗೆ ಧರಿಸುವ ಮೂಲಕ ಪ್ರತಿ ಬಾರಿಯೂ ಹೊಸ ನೋಟವನ್ನು ಪಡೆಯಬಹುದು. ಈ ಸಣ್ಣಪುಟ್ಟ ಬದಲಾವಣೆಗಳು ನಿಮ್ಮ ಬಟ್ಟೆಗಳು ಬೇಗ ಹಳೆಯದಾದಂತೆ ಕಾಣುವುದನ್ನು ತಪ್ಪಿಸುತ್ತವೆ. ಇದೆಲ್ಲಾ ದೊಡ್ಡ ಕಷ್ಟದ ಕೆಲಸವೇನಲ್ಲ, ಸ್ವಲ್ಪ ಗಮನ ಕೊಟ್ಟರೆ ಸಾಕು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Black Beads: ಕರಿಮಣಿ ಸರಕ್ಕೆ ಮ್ಯಾಚಿಂಗ್ ಬ್ರೇಸ್ಲೆಟ್! ಟ್ರೆಂಡಿ ಡಿಸೈನ್‌ ನೋಡಿ
Miss World 2026: ಮಹಾಕಾಲನ ಊರಿನಿಂದ ಮಹಾಸುಂದರಿ, ವಿಶ್ವ ಸುಂದರಿ ಭಾರತದ ಪ್ರತಿನಿಧಿ