
ಆಭರಣಗಳು ಎಂದರೆ ಮಹಿಳೆಯರಿಗೆ ಅಚ್ಚು ಮೆಚ್ಚು, ಮಹಿಳೆಯರು ಆಭರಣ ಪ್ರಿಯರು. ತಮ್ಮ ಬಳಿ ಎಷ್ಟೇ ಆಭರಣಗಳು ಇದ್ದರೂ ಸಹ ಮಾರುಕಟ್ಟೆಗೆ ಬರುವಂತಹ ಹೊಸ ಟ್ರೆಂಡ್ ಆಭರಣಗಳು ಬಂದಾಗ ತೆಗೆಕೊಳ್ಳದೇ ಇರಲಾರರು. ಹಾಗೇ ಆರ್ಟಿಫಿಷಿಯಲ್ ಆಭರಣಗಳನ್ನ(Artificial jewelry ) ತೆಗೆದುಕೊಂಡು ಅವುಗಳನ್ನ ಹೆಚ್ಚು ಬಳಸಿದಂತೆ ಅವುಗಳ ಮೇಲೆ ಕಪ್ಪು ಕಲೆಗಳು ಬೀಳುವುದು ಸಹಜ. ಕಪ್ಪು ಕಲೆಗಳು ಬಿದ್ದಾಗ ಉಪಯೋಗಕ್ಕೆ ಬಾರದು ಎಂದು ಆಭರಣಗಳನ್ನ ಎಸೆಯುವ ಬದಲು ಅವುಗಳ ಮೇಲಿನ ಕಪ್ಪು ಕಲೆಗಳನ್ನ ತೊಲಗಿಸಿ ಮರು ಬಳಸಬಹುದು.
ಕೃತಕ ಆಭರಣಗಳು (Artificial jewelry ) ಸ್ವಲ್ಪ ನಾಜೂಕು ಆಗಿದ್ದರೂ ಕೂಡ, ಬಜೆಟ್‌ಗೆ ಅನುಕೂಲವಾಗಿರುತ್ತವೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಚಿನ್ನದ ಆಭರಣಕ್ಕಿಂತ ಕೃತಕ ಆಭರಣಗಳನ್ನು ಧರಿಸಲು ಇಷ್ಟಪಡುತ್ತಾರೆ. ಚಿನ್ನದ ಆಭರಣಗಳು ಇದ್ದರೂ ಹೆಚ್ಚಾಗಿ ಆರ್ಟಿಫಿಶಿಯಲ್ ಆಭರಣಗಳತ್ತ ಮನಸೋಲುವುದೇ ಹೆಚ್ಚು. ಆದರೆ, ಕೃತಕ ಆಭರಣಗಳ(Artificial jewelry ) ಸಂರಕ್ಷಣೆ ಸ್ವಲ್ಪ ಗಮನ ಹರಿಸಬೇಕಾಗುತ್ತದೆ. ಈ ಆಭರಣಗಳು ಧೂಳನ್ನು ಮತ್ತು ಕೆಸರನ್ನ ಹಿಡಿದುಕೊಳ್ಳುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಜೊತೆಗೆ ನೀರು, ಬೆವರು, ಗಾಳಿ ಮತ್ತು ಬಾಡಿ ಕ್ರೀಮ್‌ಗಳಿಂದ ಇವು ಬಣ್ಣ ಬದಲಿಸಬಹುದು ಅಥವಾ ಮಂಕಾಗಬಹುದು. ಆದರೆ ಸಿಹಿ ಸುದ್ದಿ ಏನೆಂದರೆ, ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಬಹುದು. ಮನೆಯಲ್ಲಿಯೆ ಇರುವಂತಹ ಕೆಲವು ವಸ್ತುಗಳಿಂದ ಹೊಳಪು ಕಳೆದುಕೊಂಡಿರುವಂತಹ ಆಭರಣಗಳು ಮತ್ತೆ ಹೊಳಪು ಬರುವಂತೆ ಮಾಡಬಹುದು. ನೀವು ಎಷ್ಟೇ ಬಾರಿ ಬಳಸಿದರೂ ನಿಮ್ಮ ಕೃತಕ ಆಭರಣಗಳು ಇನ್ನೂ ಹೊಸದರಂತೆ ಇರಬೇಕಾದರೆ ಈ ಟಿಪ್ಸ್ ನಿಮಗಾಗಿ.
ನಿಂಬೆ ರಸ (Lemon Juice) ನಿಂಬೆ ನೈಸರ್ಗಿಕವಾಗಿ ಆಮ್ಲೀಯವಾಗಿದೆ, ಇದು ಆಭರಣದ ಮೇಲಿನ ಆಕ್ಸೈಡ್ ಪದರವನ್ನು ಸುಲಭವಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ. ನೀರು ಮತ್ತು ನಿಂಬೆ ರಸವನ್ನ ಎರಡು ಒಂದೇ ಪ್ರಮಾಣದಲ್ಲಿ ತೆಗೆದುಕೊಂಡು, ಅದರಲ್ಲಿ 10 ರಿಂದ 15 ನಿಮಿಷಗಳ ಕಾಲ ನೆನೆಸಿಡಬೇಕು. ನೆನಸಿದ ಮೇಲೆ ಒರಟಾದ ಬಟ್ಟೆ ಅಥವಾ ಹಲ್ಲುಜ್ಜುವ ಬ್ರಷ್‌ನಿಂದ ಆಭರಣವನ್ನು ನಿಧಾನವಾಗಿ ಉಜ್ಜಿಕೊಂಡು, ತಣ್ಣಗಿನ ನೀರಿನಿಂದ ತೊಳೆಯಬೇಕು. ಇದು ಕೇವಲ ಆರ್ಟಿಫಿಷಿಯಲ್ ಆಭರಣಗಳಿಗೆ ಮಾತ್ರವಲ್ಲದೇ ಲೋಹ, ರತ್ನ ಮತ್ತು ಗಾಜಿನ ಆಭರಣಗಳಿಗೂ ಬಳಸಬಹುದು.
ಅಡಿಗೆ ಸೋಡಾ ಮತ್ತು ಉಪ್ಪು(Salt And Soda) ಬೇಕಿಂಗ್ ಸೋಡಾವು ಬಣ್ಣವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಬೇಕಿಂಗ್ ಸೋಡಾವನ್ನ ಕೇವಲ ಆಭರಣಗಳ ಕಲೆ ತೆಗೆಯಲು ಬಳಸುವುದಿಲ್ಲ ಬದಲಾಗಿ ಬಟ್ಟೆಗಳ ಕಲೆ ತೆಗೆಯಲೂ ಸಹ ಉಪಯೋಗಿಸುತ್ತಾರೆ. ಒಂದು ಬಟ್ಟಲಿನಲ್ಲಿ ಒಂದು ಚಮಚ ಅಡಿಗೆ ಸೋಡಾ ಮತ್ತು ಉಪ್ಪು ಮತ್ತು ಒಂದು ಕಪ್ ಬೆಚ್ಚಗಿನ ನೀರನ್ನು ಮಿಶ್ರಣ ಮಾಡಿ. ಆ ಮಿಶ್ರಣದಲ್ಲಿ ಆಭರಣವನ್ನ ಹಾಕಿ. ಹಾಕಿದ ಮೇಲೆ ಗುಳ್ಳೆಗಳು ಬರುತ್ತವೆ ಹಾಗೇ ಬಂದ ಮೇಲೆ ಕೆಲವು ನಿಮಿಷಗಳ ಕಾಲ ಅದನ್ನು ಬಿಡಿ. ಆಭರಣವನ್ನು ನಿಮ್ಮ ಬೆರಳುಗಳಿಂದ ನಿಧಾನವಾಗಿ ಉಜ್ಜಿಕೊಳ್ಳಿ ಮತ್ತು ತಣ್ಣೀರಿನಿಂದ ತೊಳೆಯಿರಿ. ನಿಮ್ಮ ಆಭರಣಗಳನ್ನು ಸ್ವಚ್ಛವಾದ ಬಟ್ಟೆಯಿಂದ ಚೆನ್ನಾಗಿ ಒಣಗಿಸಿ. ಇದರಿಂದ ಕಲೆಗಳು ಹೋಗಿ ಹೊಳಪು ಆಭರಣದ ಮೇಲೆ ಬರುತ್ತದೆ.
ಬಿಳಿ ವಿನೆಗರ್ ಮತ್ತು ನೀರು (Vinegar And Water) ಇದು ಸಹ ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬೇಕಾಗುವಂತಹ ವಿಧಾನವಾಗಿದ್ದು, ವಿನೆಗರ್ ಮತ್ತು ನೀರಿನ್ನ ಬಳಸಿ ಕಪ್ಪು ಕಲೆಗಳನ್ನ ತೆಗೆಯಬಹುದಾಗಿದೆ. ಒಂದು ಬಟ್ಟಲಿನಲ್ಲಿ ಬಿಳಿ ವಿನೆಗರ್ ಮತ್ತು ನೀರನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರಣ ಮಾಡಿ. ಆ ನೀರಲ್ಲಿ ನಿಮ್ಮ ಆಭರಣಗಳನ್ನು 15 ರಿಂದ 20 ನಿಮಿಷಗಳ ಕಾಲ ನೆನೆಸಿಡಿ. ನೆನೆಸಿದ ಆಭರಣಗಳನ್ನು ಹಳೆಯ ಹಲ್ಲುಜ್ಜುವ ಬ್ರಷ್‌ನಿಂದ ಚೆನ್ನಾಗಿ ಸ್ವಚ್ಛಗೊಳಿಸಿ. ತಣ್ಣಗಿನ ನೀರಿನಿಂದ ಅದನ್ನು ತೊಳೆಯಿರಿ ಮತ್ತು ಅದನ್ನು ಉಜ್ಜಲು ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ. ಆಭರಣಗಳು ಹೆಚ್ಚು ಕಲ್ಲಿನಿಂದ ಕೂಡಿದ್ದರೆ ನೀವು ಟೂತ್ ಬ್ರಷ್ ಬದಲಿಗೆ ಸ್ಪಾಂಜ್ ಅನ್ನು ಸಹ ಬಳಸಬಹುದು. ಕಲ್ಲುಗಳು ಹೊಳೆಯುವಂತೆ ಮಾಡಲು ಜಾಲಾಡುವಿಕೆಯ ನಂತರ ಆಲಿವ್ ಎಣ್ಣೆಯ ಕೆಲವು ಹನಿಗಳನ್ನು ಸೇರಿಸಬಹುದು.
ಬಿಯರ್(Beer) ಹಿತ್ತಾಳೆ, ಬೆಳ್ಳಿ ಮತ್ತು ಆರ್ಟಿಫಿಷಿಯಲ್ ಆಭರಣಗಳ(Artificial jewelry ) ಬಣ್ಣ ಮತ್ತು ಕಲೆಗಳನ್ನು ತೆಗೆದುಹಾಕಲು ಬಿಯರ್(Beer) ಸಹಾಯ ಮಾಡುತ್ತದೆ. ಮೃದುವಾದ ಬಟ್ಟೆಯ ತುಂಡು ಮೇಲೆ ಬಿಯರ್ನ ಕೆಲವು ಹನಿಗಳನ್ನು ಹಾಕಿ. ಆ ಬಟ್ಟೆಯಿಂದ ನಿಮ್ಮ ಆಭರಣವನ್ನ ಉಜ್ಜುವುದರಿಂದ ಕಲೆ ಹೋಗುತ್ತದೆ. ಕಲೆಯಾದಂತಹ ಜಾಗಗಳಲ್ಲಿ ಮಾತ್ರ ಉಜ್ಜುವುದು ಉತ್ತಮ. ಬೇರೆ ಜಾಗಗಳಲ್ಲಿ ಉಜ್ಜಿದರೆ ಇರುವ ಬಣ್ಣ ಹೋಗುವ ಸಾಧ್ಯತೆ ಇರುತ್ತದೆ.
ಕೃತಕ ಆಭರಣಗಳನ್ನು ಸ್ವಚ್ಛಗೊಳಿಸುವಾಗ ನೀವು ಕೆಲವು ಅಂಶಗಳನ್ನ ಗಮನದಲ್ಲಿಟ್ಟುಕೊಳ್ಳಬೇಕು. ಯಾವಾಗಲೂ ಒದ್ದೆಯಾದ ಬ್ರಷ್ ಬಳಸಿ, ತುಂಬಾ ಹಾನಿಕಾರಕ ರಾಸಾಯನಿಕಗಳನ್ನು ಬಳಸದಿರುವುದು ಉತ್ತಮ, ಮೃದುವಾದ ಬಟ್ಟೆಯನ್ನು ಬಳಸಿ ಮತ್ತು ಆಭರಣಗಳನ್ನು ಅತಿಯಾಗಿ ಉಜ್ಜಬೇಡಿ. ಈ ಎಲ್ಲಾ ಸಲಹೆಗಳ ಸಹಾಯದಿಂದ, ನೀವು ಕೃತಕ ಆಭರಣಗಳ ಕಪ್ಪು ಬಣ್ಣವನ್ನು ಸುಲಭವಾಗಿ ತೆಗೆದುಹಾಕಿ ಅದನ್ನು ಹೊಸದಾಗಿ ಕಾಣುವಂತೆ ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.