Fact Check: ಕ್ವಾಡ್ ಶೃಂಗದಲ್ಲಿ ಪ್ರಧಾನಿ ಮೋದಿ ಕಡೆಗಣಿಸಿದ ಜೋ ಬೈಡೆನ್‌? ವೈರಲ್‌ ವಿಡಿಯೋ ಸತ್ಯಾಸತ್ಯತೆ ಏನು?

By Suvarna News  |  First Published May 25, 2022, 5:44 PM IST

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಡೆಗಣಿಸಿ, ಹೊಸದಾಗಿ ಆಯ್ಕೆಯಾದ ಆಸ್ಟ್ರೇಲಿಯದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರಿಗೆ ಶುಭಾಶಯ ಕೋರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


Fact Check: ಭಾರತ, ಅಮೆರಿಕ, ಜಪಾನ್‌ ಹಾಗೂ ಆಸ್ಪ್ರೇಲಿಯಾಗಳು ರಚನೆ ಮಾಡಿಕೊಂಡಿರುವ ಬಲಿಷ್ಠ ‘ಕ್ವಾಡ್‌ ಕೂಟ’ದ (Quad Summit) ಮಹತ್ವದ ಸಭೆ ಸೋಮವಾರ ಆರಂಭವಾಗಿದೆ. ಮಂಗಳವಾರ ಪ್ರಧಾನಿ ನರೇಂದ್ರ ಮೋದಿ (Narendra Modi), ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಆಸ್ಪ್ರೇಲಿಯಾದ ನೂತನ ಪ್ರಧಾನಿ ಆ್ಯಂಟನಿ ಆಲ್ಬನೀಸ್‌ ಹಾಗೂ ಜಪಾನ್‌ ಪ್ರಧಾನಿ ಫುಮಿಯೋ ಕಿಶಿಡಾ ಅವರು ಪಾಲ್ಗೊಂಡಿದ್ದು,  ಶೃಂಗದಲ್ಲಿ ಭಾರತ, ಅಮೆರಿಕ, ಜಪಾನ್‌ ಹಾಗೂ ಆಸ್ಪ್ರೇಲಿಯಾ ದೇಶಗಳು ಚೀನಾ ವಿರುದ್ಧ ಒಗ್ಗಟ್ಟಿನ ಬಲ ಪ್ರದರ್ಶಿಸಿವೆ. ಈ ನಡುವೆ ಯುಎಸ್ ಅಧ್ಯಕ್ಷ ಜೋ ಬೈಡನ್ ಭಾರತದ ಪ್ರಧಾನಿಯನ್ನು ನಿರ್ಲಕ್ಷಿಸಿ, ಹೊಸದಾಗಿ ಚುನಾಯಿತ ಆಸ್ಟ್ರೇಲಿಯನ್ ಪಿಎಂ ಆಂಟನಿ ಅಲ್ಬನೀಸ್ ಅವರಿಗೆ ಶುಭಾಶಯ ಕೋರಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 

14 ಸೆಕೆಂಡುಗಳ ಅವಧಿಯ ವಿಡಿಯೋ ಕ್ಲಿಪ್‌ನಲ್ಲಿ, ಬೈಡನ್ ಹೊಸ ಆಸ್ಟ್ರೇಲಿಯನ್ ಪ್ರಧಾನಿಯನ್ನು ಸ್ವಾಗತಿಸುವುದನ್ನು ಮತ್ತು ಮಾತನಾಡುವುದನ್ನು ಕಾಣಬಹುದು. ಆದರೆ, ಅವರೊಂದಿಗೆ ವೇದಿಕೆಯಲ್ಲಿದ್ದ ಪ್ರಧಾನಿ ಮೋದಿಯವರನ್ನು ಅವರು ನಿರ್ಲಕ್ಷಿಸಿರುವಂತೆ ತೋರುತ್ತಿದೆ. ಹೀಗಾಗಿ ಕ್ವಾಡ್ ಶೃಂಗಸಭೆಯಲ್ಲಿ ಬಿಡೆನ್ ಭಾರತದ ಪ್ರಧಾನಿಯನ್ನು ಅವಮಾನಿಸಿದ್ದಾರೆ ಎಂದು ಹಲವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

Tap to resize

Latest Videos

ಆದರೆ ಈ ವಿಡಿಯೋ ಜನರನ್ನು ತಪ್ಪು ದಾರಿಗೆಳೆಯುತ್ತಿದೆ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ತಿಳಿದುಬಂದಿದ್ದು, ವೈರಲಾಗಿರುವ ವಿಡಿಯೋದ ಮೂಲ ವೀಡಿಯೋದಲ್ಲಿ ಬಿಡೆನ್ ಮೋದಿಯವರಿಗೆ ಶುಭಾಶಯ ಕೋರುತ್ತಿರುವುದು ಕಾಣಬಹುದಾಗಿದೆ

Claim: ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿರುವ ವಿಡಿಯೋದಲ್ಲಿ ಹಿಂದಿಯಲ್ಲಿ "गजब बेइज्जती है यार अपने विश्वगुरु की" (ನಮ್ಮ ವಿಶ್ವಗುರುವಿಗೆ ದೊಡ್ಡ ಅವಮಾನವಾಗಿದೆ)" ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. 

Fact Check: ಕ್ವಾಡ್ ಶೃಂಗಸಭೆಯಲ್ಲಿ ಬಿಡೆನ್, ಮೋದಿ ಮತ್ತು ಅಲ್ಬನೀಸ್ ಅವರನ್ನು ಭೇಟಿಯಾದ ವೀಡಿಯೊಗಳನ್ನು ಹುಡುಕಿದಾಗ, ಕಾರ್ಯಕ್ರಮದ ಸಾಕಷ್ಟು ವೀಡಿಯೊ ಹಾಗೂ ಸುದ್ದಿಗಳನ್ನು ಕಾಣಬಹುದು.  ಮೇ 24 ರಂದು ಆಜ್ ತಕ್‌ ಸುದ್ದಿ ಚಾನಲ್ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಡ ವಿಡಿಯೋದವೊಂದರಲ್ಲಿ  ಬಿಡೆನ್ ಅವರು ಅಲ್ಬಾನೀಸ್ ಜೊತೆ ಮಾತನಾಡುವುದನ್ನು ಮುಗಿಸಿದ ನಂತರ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುವುದು, ನಗುವುದು ಮತ್ತು ಹಸ್ತಲಾಘವ ಮಾಡುವುದನ್ನು ಕಾಣಬಹುದು.

ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಯುಟ್ಯೂಬ್‌ ಖಾತೆಯಲ್ಲಿ ಅಪ್‌ಲೋಡ್ ಮಾಡಲಾದ "Highlights from PM Modi’s Japan visit" ವಿಡಿಯೋದಲ್ಲೂ ಇದನ್ನು ಕಾಣಬಹುದಾಗಿದೆ. ವಿಡಿಯೋದಲ್ಲಿ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಸೇರಿದಂತೆ ನಾಲ್ವರೂ ಫೋಟೋ ಸೆಷನ್‌ಗೆ ಪೋಸ್ ನೀಡಿದ್ದಾರೆ. ಈ ವೀಡಿಯೋವನ್ನು ಬೇರೆ ಬೇರೆ ಕೋನದಿಂದ ಚಿತ್ರೀಕರಿಸಲಾಗಿದೆ.

ಇನ್ನು ಆಸ್ಟ್ರೇಲಿಯಾದ SBS Newsನ ಪತ್ರಕರ್ತ ನವೀನ್ ರಾಝಿಕ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಈವೆಂಟ್‌ನ ವೀಡಿಯೊದಲ್ಲೂ ಇದನ್ನು ಕಾಣಬಹುದು. ಈ ವಿಡಿಯೋದಿಂದಲೇ ವೈರಲಾಗಿರುವ ವೀಡಿಯೊವನ್ನು ಕಟ್‌ ಮಾಡಲಾಗಿದೆ. ಮತ್ತು ಈ ಸುದೀರ್ಘ ವೀಡಿಯೊದಲ್ಲೂ ಕೂಡ ಬಿಡೆನ್ ಮೋದಿಯೊಂದಿಗೆ ಮಾತನಾಡುವುದನ್ನು ಗಮನಿಸಬಹುದಾಗಿದೆ. ಬಳಿಕ ಈ ನಾಲ್ಕೂ ನಾಯಕರು ಫೋಟೋಗೆ ಪೋಸ್ ನೀಡಿದ್ದಾರೆ. 

 

Prime Minister Anthony Albanese shakes hands with US President Joe Biden and appears to crack a few jokes as the leaders of the Quad pose for the 'family photo' in Tokyo pic.twitter.com/jS326e746S

— Naveen Razik (@naveenjrazik)

 

ಶೃಂಗಸಭೆಯ ಉದ್ಘಾಟನಾ ಭಾಷಣದಲ್ಲಿ ಪ್ರಧಾನಿ ಮೋದಿ, “ಕ್ವಾಡ್‌ ದೇಶಗಳ ನಡುವಿನ ಪರಸ್ಪರ ವಿಶ್ವಾಸ ಮತ್ತು ಒಗ್ಗಟ್ಟು ಪ್ರಜಾಪ್ರಭುತ್ವ ಶಕ್ತಿಗಳಿಗೆ ಹೊಸ ಬಲ ತುಂಬುತ್ತಿದೆ, ಕ್ವಾಡ್‌ ದೇಶಗಳ ಕಾರ್ಯವು, ಇಂಡೋ-ಪೆಸಿಫಿಕ್‌ ವಲಯವನ್ನು ಮುಕ್ತ ಮತ್ತು ಸಮಗ್ರ ಒಳಗೊಳ್ಳುವಿಕೆಯ ಭಾಗವಾಗಿರುವಂತೆ ನೋಡಿಕೊಳ್ಳುತ್ತಿದೆ" ಎಂದು ಹೇಳಿದ್ದಾರೆ..

ಹೀಗಾಗಿ, ವೈರಲ್ ವೀಡಿಯೊದಲ್ಲಿ ಹೇಳಿರುವಂತೆ ಬಿಡೆನ್‌ ಮೋದಿಯವರನ್ನು ನಿರ್ಲಕ್ಷಿಸಿರುವಂತೆ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ತಿಳಿದುಬಂದಿದೆ. ವೈರಲ್‌ ಆಗಿರುವ ವಿಡಿಯೀ ಮೂಲ ವಿಡಿಯೋದಿಂದ ಕ್ರಾಪ್‌ ಮಾಡಲಾಗಿದ್ದು, ಜನರನ್ನು ದಾರ ತಪ್ಪಿಸುತ್ತಿದೆ. 

ಇದನ್ನೂ ಓದಿ: ವಾರಾಣಸಿಯ ನಂದಿ ವಿಗ್ರಹ ಎನ್ನಲಾದ ವೈರಲ್‌ ಫೋಟೋ ಮಹಾರಾಷ್ಟ್ರದ್ದು

ಇದನ್ನೂ ಓದಿ: ಕಾಂಗ್ರೆಸ್ ಚಿಂತನ ಶಿಬಿರದ ಮೇಲ್ಛಾವಣಿಗೆ ಪಾಕಿಸ್ತಾನ ಧ್ವಜದ ಬಣ್ಣ, ಕಾರ್ಪೆಟ್‌ ಮಾತ್ರ ಕೇಸರಿ?

click me!