Fact Check: ಹಂಬಲ್ ಪೊಲಿಟಿಷಿಯನ್ ನೋಗ್‌ರಾಜ್ ನಟ ಟಿಕು ತಲ್ಸಾನಿಯಾ ಇಸ್ಲಾಂಗೆ ಮತಾಂತರಗೊಂಡಿದ್ದು ಸುಳ್ಳು!‌

By Suvarna News  |  First Published Feb 17, 2022, 1:43 PM IST

ನಟ-ಹಾಸ್ಯನಟ ಟಿಕು ತಲ್ಸಾನಿಯಾ ಅವರ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ಮುಸ್ಲಿಂ ಟೋಪಿ ಮತ್ತು ಉದ್ದನೆಯ ಗಡ್ಡದೊಂದಿಗೆ ಕಾಣಿಸಿಕೊಂಡಿದ್ದಾರೆ. 


Fact Check: ಪ್ರಸಿದ್ಧ ಹಿಂದಿ ನಟ ಹಾಗೂ ಕನ್ನಡದ ಹಂಬಲ್ ಪೊಲಿಟಿಷಿಯನ್ ನೋಗರಾಜ್ (Humble Politician Nograj) ಚಿತ್ರದಲ್ಲಿ ನಟಿಸಿರುವ ಟಿಕು ತಲ್ಸಾನಿಯಾ (Tiku Talsania) ಇಸ್ಲಾಂ ಧರ್ಮಕ್ಕೆ (Islam) ಮತಾಂತರಗೊಂಡಿದ್ದಾರೆ ಎಂದು ಹೇಳುವ ಚಿತ್ರಗಳ ಕೊಲಾಜ್ ಮತ್ತು ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ (Social Media) ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. ಹಾಸ್ಯನಟ ಟಿಕು ತಲ್ಸಾನಿಯಾ ಅವರ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ಮುಸ್ಲಿಂ ಟೋಪಿ ಮತ್ತು ಉದ್ದನೆಯ ಗಡ್ಡದೊಂದಿಗೆ ಕಾಣಿಸಿಕೊಂಡಿದ್ದಾರೆ. 

Claim:ಪ್ರಸಿದ್ಧ ಹಿಂದಿ ನಟ ಹಾಗೂ ಕನ್ನಡದ ಹಂಬಲ್ ಪೊಲಿಟಿಷಿಯನ್ ನೋಗರಾಜ್ ಚಿತ್ರದಲ್ಲಿ ನಟಿಸಿರುವ ಟಿಕು ತಲ್ಸಾನೀಯಾ ಮುಸ್ಲಿಮ್‌ಗೆ ಮತಾಂತರ ಗೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನಟನ ವಿಡಿಯೋ ಹಾಗೂ ಫೋಟೋಗಳೊಂದಿಗೆ ಶೇರ್‌ ಮಾಡಲಾಗಿದೆ. 

Tap to resize

Latest Videos

ಯೂಟ್ಯೂಬ್‌ನಲ್ಲೂ ಈ ಸಂಬಂಧ ಹಲವಾರು ವಿಡಿಯೋಗಳನ್ನು ಪೋಸ್ಟ್‌ ಮಾಡಲಾಗಿದ್ದು ನಟ  ಟಿಕು ತಲ್ಸಾನೀಯಾ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ ಹಾಗೂ ಹಿಜಾಬ್‌ ಪರ ಮಾತನಾಡಿದ್ದಾರೆ ಎಂದು ವಿಡಿಯೋವೊಂದರಲ್ಲಿ ಹೇಳಲಾಗಿದೆ. ಇದರೊಂದಿಗೆ ನಟ ಟಿಕು ಈ ಮುಸ್ಲಿಂ ಲುಕ್‌ಗೆ ಸಂಬಂಧಿಸಿದ ವಿಡಿಯೋ ಕೂಡ ಶೇರ್ ಆಗುತ್ತಿದೆ. ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ಅವರಿಗೆ "ಚಾಚಾ, ಸಲಾಮ್ ವಲೇಕುಮ್" ಎಂದು ಹೇಳುತ್ತಾಳೆ. ಇದಕ್ಕೆ ಅವರು, "ವಾಲೇಕುಮ್ ಅಸ್ಸಲಾಮ್" ಎಂದು ಉತ್ತರಿಸುತ್ತಾರೆ. ಈ ವಿಡಿಯೋಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು. 

ಇದನ್ನೂ ಓದಿ: Fact Check: ತಿರುಪತಿ ದೇವಸ್ಥಾನದ ಪುರೋಹಿತರಿಂದ 128Kg ಚಿನ್ನ, ₹60 ಕೋಟಿ ಮೌಲ್ಯದ ವಜ್ರ ವಶ?

ಆದರೆ  ನಟ ಟಿಕು ಇಸ್ಲಾಂಗೆ ಮತಾಂತರಗೊಂಡಿರುವುದು ಕೇವಲ ವದಂತಿ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ತಿಳಿದುಬಂದಿದೆ. ಮುಸ್ಲಿಂ ಉಡುಗೆಯಲ್ಲಿರುವ ಅವರ ಚಿತ್ರಗಳು ಮತ್ತು ವೀಡಿಯೊಗಳು ವೈರಲ್ ಆಗಿದ್ದು, ಮುಂಬರುವ ಬಿಬಿಸಿ ವೆಬ್ ಶೋ 'ನವರಂಗಿ' (Navarangi) ಗಾಗಿ ಅವರು ಮುಸ್ಲಿಂ ವೇಷವನ್ನು ಧರಿಸಿದ್ದಾರೆ ಎಂದು ತಿಳಿದುಬಂದಿದೆ. 

Fact Check (Claim Review): ಈ ಬಗ್ಗೆ ಗೂಗಲ್ ಕೀ ವರ್ಡ್ಸ್ ಸರ್ಚ್ ಮಾಡಿದಾಗ,  ಬಿಬಿಸಿ ವೆಬ್ ಶೋ 'ನವರಂಗಿ'ಗಾಗಿ  ಭಾಗವಾಗಿ ಟಿಕು ಇಂಥ ಉಡುಗೆ ತೊಟ್ಟಿದ್ದರೆಂಬುವುದು ಕಂಡು ಬರುತ್ತದೆ. ಆದರೆ, ಹೆಚ್ಚಿನ ಮಾಹಿತಿ ಲಭ್ಯವಾಗಲಿಲ್ಲ. ಪ್ರಸಿದ್ಧ ಫ್ಯಾಕ್ಟ್ ಚೆಕ್ಕಿಂಗ್ ವೆಬ್‌ಸೈಟ್ ವಿಶ್ವಾಸ್ ನ್ಯೂಸ್ ಮೂಲಕ ಸ್ವತಃ ನಟನನ್ನೇ ಸಂಕರ್ಪಿಸಿದಾಗ, ಹೌದು ಇದು ಸೀರಿಸ್‌ ವೊಂದರ ಪಾತ್ರವೆಂದೂ, ವೈರಲ್ ಆಗುತ್ತಿರುವ ಸುದ್ದಿ ಸುಳ್ಳೆಂದು ಸ್ಪಷ್ಟಪಡಿಸಿದ್ದಾರೆ. 

ಇದನ್ನೂ ಓದಿ: Fact Check: ಚುನಾವಣೆ ಹಿನ್ನೆಲೆ ಮತದಾರರಿಗೆ ಹಣ ಹಂಚುತ್ತಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್?

ಇನ್ನೂ ಈ ಬಗ್ಗೆ ಸ್ವತಃ ನಟ್ ಟಿಕು ಪ್ರತಿಕ್ರಿಯಿಸಿದ್ದು ಅವರು ಇಸ್ಲಾಂಗೆ ಮತಾಂತರಗೊಳ್ಳುವ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಆಜ್‌ ತಕ್‌ (Aaaj Tak) ವರದಿ ಮಾಡಿದೆ. ಈ ಚಿತ್ರಗಳನ್ನು ಅವರು ಕಿವುಡನ ಪಾತ್ರವನ್ನು ನಿರ್ವಹಿಸುತ್ತಿರುವ ಅವರ ಬಿಬಿಸಿ ಶೋವೊಂದರ ಚಿತ್ರೀಕರಣದ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ. ಕಾರ್ಯಕ್ರಮದ ಸಂಚಿಕೆಯಲ್ಲಿ ಅವರು ಮುಸ್ಲಿಂ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಶೋ ಯೂಟ್ಯೂಬ್‌ನಲ್ಲಿ ಪ್ರಸಾರವಾಗಲಿದೆ. 

ಹೀಗಾಗಿ ವೆಬ್ ಶೋವೊಂದರ ಚಿತ್ರೀಕರಣದ ವೇಳೆ ಟಿಕು ತಲ್ಸಾನಿಯಾ ಮುಸ್ಲಿಂ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಶೂಟಿಂಗ್‌ನ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಅವರು ಮತಾಂತರವಾಗಿದ್ದಾರೆ ಎಂಬುದು ದಾರಿ ತಪ್ಪಿಸುವ ಪೋಸ್ಟ್‌ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ತಿಳಿದುಬಂದಿದೆ. 

ಯಾರು ಈ ಟಿಕು ತಲ್ಸಾನೀಯಾ?: ಟಿಕು ತಲ್ಸಾನಿಯಾ ತೊಂಬತ್ತರ ದಶಕದ ಅನೇಕ ಹಿಟ್ ಚಿತ್ರಗಳಾದ 'ರಾಜಾ ಹಿಂದೂಸ್ತಾನಿ', 'ದಿಲ್ ಹೈ ಕಿ ಮಾನತಾ ನಹಿ' ಮತ್ತು 'ಇಷ್ಕ್' ನಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ಲೀಲಾ ಬನ್ಸಾಲಿಯವರ 'ದೇವದಾಸ್' ಚಿತ್ರದಲ್ಲಿ, ಅವರು ದೇವದಾಸ್ ಅಂದರೆ ಶಾರುಖ್ ಶಾನ್ ಅವರ ಕೇರ್ ಟೇಕರ್ ಧರ್ಮದಾಸ್ ಪಾತ್ರವನ್ನು ನಿರ್ವಹಿಸಿದ್ದಾರೆ. ಟಿಕು ಅವರ ಪುತ್ರಿ ಶಿಖಾ ತಲ್ಸಾನಿಯಾ (shikha Talsania) ಕೂಡ ನಟಿಯಾಗಿದ್ದು, 'ವೀರೆ ದಿ ವೆಡ್ಡಿಂಗ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಜನವರಿ 6ರಂದು ವೂಟ್ ಸೆಲೆಕ್ಟ್‌ನಲ್ಲಿ ಬಿಡುಗಡೆಯಾದ 'ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್' 10 ಕಂತುಗಳ ವೆಬ್ ಸೀರಿಸ್‌ನಲ್ಲಿ ಕೂಡ ಟಿಕು ತಲ್ಸಾನಿಯಾ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಸಿನಿಮಾವಾಗಿ ಬಿಡುಗಡೆಯಾಗಿದ್ದ ಹಂಬಲ್ ಪೊಲಿಟಿಷಿಯನ್ ನೋಗ್‌ರಾಜ್‌ (Humble Politician Nograj) ವೆಬ್‌ ಸೀರಿಸ್‌ ಮಾದರಿಯಲ್ಲಿ ಬಿಡುಗಡೆಯಾಗಿದೆ.  ವಿಜಯ್ ಚೆಂಡೂರ್, ಪ್ರಕಾಶ್ ಬೆಳವಾಡಿ, ಗೀತಾಂಜಲಿ ಕುಲಕರ್ಣಿ, ದಿಶಾ ಮದನ್, ವರುಣ್ ಠಾಕುರ್, ಟಿಕು ತಲ್ಸಾನಿಯಾ, ಶಾಲಿನಿ ನಾರಾಯಣ್ ಈ ಸಿರೀಸ್‌ನಲ್ಲಿ ನಟಿಸಿದ್ದಾರೆ. 

click me!