Fact Check: ಚುನಾವಣೆ ಹಿನ್ನೆಲೆ ಮತದಾರರಿಗೆ ಹಣ ಹಂಚುತ್ತಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್?

By Suvarna News  |  First Published Feb 13, 2022, 1:17 PM IST

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಹಣ ಹಂಚುತ್ತಿರುವ ವೀಡಿಯೊವನ್ನು ಹಲವಾರು ಜನರು ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 


Fact Check: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ (UP Elections 2022) ಮೊದಲ ಹಂತದ ಮತದಾನದ ಭರ್ಜರಿಯಾಗಿ ನಡೆದಿದೆ. ಪಂಚರಾಜ್ಯ ಚುನಾವಣೆಯ (Five State Elections) ಭಾಗವಾಗಿ ಸೋಮವಾರ ಮೂರು ರಾಜ್ಯಗಳಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಸೋಮವಾರ 2ನೇ ಹಂತದ ಮತದಾನ ನಡೆಯಲಿದೆ. ರಾಷ್ಟ್ರ ರಾಜಕಾರಣದ ದಿಕ್ಕನ್ನೇ ಬದಲಾಯಿಸುವ ಸಾಮರ್ಥ್ಯವಿರುವ ಉತ್ತರ ಪ್ರದೇಶದಲ್ಲಿ ರಾಜಕೀಯ ಪಕ್ಷಗಳು ಅಧಿಕಾರದ ಗದ್ದುಗೆ ಏರಲು ತದಿಗಾಲಲ್ಲಿ ನಿಂತಿವೆ.

ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ವಿವಿಧ ಪಕ್ಷಗಳ ಬೆಂಬಲಿಗರು ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath)  ಹಣ ಹಂಚುತ್ತಿರುವ ವೀಡಿಯೊವನ್ನುಹಲವಾರು ಜನರು ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 

Latest Videos

undefined

ಇದನ್ನೂ ಓದಿ: Fact Check: ಟಿಎಂಸಿಯ ಹಳೆ ಪೋಸ್ಟರ್ ಬಳಸಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪ್ರಚಾರ!

ವೈರಲ್‌ ವಿಡಿಯೋದಲ್ಲಿ ಯೋಗಿ ಆದಿತ್ಯನಾಥ್‌ ಕುರ್ಚಿಯ  ಮೇಲೆ ಕುಳಿತುಕೊಂಡಿದ್ದು ಸುತ್ತಲು ಜನರಿದ್ದಾರೆ. ಹಣ ಪಡೆದ ನಂತರ ಕೆಲವರು ಯೋಗಿ ಪಾದಗಳನ್ನು ಸ್ಪರ್ಶಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಶೇರ್ ಮಾಡುತ್ತಿರುವವರು ಸಿಎಂ ಮತದಾರರಿಗೆ ಲಂಚ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.‌ 

''ಅವರು ಸ್ಪರ್ಧಿಸುತ್ತಿರುವುದು ಹೀಗೆ. ಈ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರು ಚುನಾವಣೆ ಗೆಲ್ಲಲು ಹಣ ಹಂಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ" ಎಂದು ಟ್ವಿಟರ್ ಬಳಕೆದಾರರೊಬ್ಬರು ಹೇಳಿದ್ದಾರೆ.

ಇದೇ ಹೇಳಿಕೆಯೊಂದಿಗೆ ಫೇಸ್‌ಬುಕ್‌ನಲ್ಲಿ ಕೂಡ ವೀಡಿಯೊ ವೈರಲ್ ಆಗಿದೆ. ವೈರಲ್‌ ವಿಡಿಯೋಗಳನ್ನು ನೋಡಬಹುದು.


Claim: 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಈ ವೀಡಿಯೊ ಆರಂಭದಲ್ಲಿ ವೈರಲ್ ಆಗಿತ್ತು. ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಏಪ್ರಿಲ್‌ 5 2019ರಂದು ಇಂಡಿಯಾ ಟುಡೆ ವರದಿ ಮಾಡಿತ್ತು. ವರದಿ ಇಲ್ಲಿ ನೋಡಬಹುದು. ಹೀಗಾಗಿ ವೈರಲ್ ಆಗಿರುವ ವಿಡಿಯೋ ಒಂದು ದಶಕದಷ್ಟು ಹಳೆಯದಾಗಿದ್ದು, ಪ್ರಸ್ತುತ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ತಿಳಿದುಬಂದಿದೆ. 

Claim Review: ಇನ್ನು ಮೂಲ ವೀಡಿಯೋವನ್ನು ವಿನಯ್ ಕುಮಾರ್ ಗೌತಮ್ (Facebook) ಎಂಬ ವ್ಯಕ್ತಿ 2012 ರಲ್ಲಿ ಅಪ್‌ಲೋಡ್ ಮಾಡಿದ್ದರು. ವಿಡಿಯೋ ಅಪ್‌ಲೋಡ್ ಮಾಡಿದ್ದ ವ್ಯಕ್ತಿ ವಿಡಿಯೋವನ್ನು ಏಪ್ರಿಲ್ 2012 ರಲ್ಲಿ ಚಿತ್ರೀಕರಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಆ ಸಮಯದಲ್ಲಿ ಯೋಗಿ ಆದಿತ್ಯನಾಥ್ ಗೋರಖ್‌ಪುರದಿಂದ ಲೋಕಸಭೆಯ ಸಂಸದರಾಗಿದ್ದರು. 

ಇದನ್ನೂ ಓದಿ: Fact Check: ತಿರುಪತಿ ದೇವಸ್ಥಾನದ ಪುರೋಹಿತರಿಂದ 128Kg ಚಿನ್ನ, ₹60 ಕೋಟಿ ಮೌಲ್ಯದ ವಜ್ರ ವಶ?

ಗೌತಮ್ ಪ್ರಕಾರ, ಗೋರಖ್‌ಪುರ ಮತ್ತು ಸುತ್ತಮುತ್ತಲಿನ ಹಲವಾರು ಜನರು ತಮ್ಮ ಬೆಳೆಗಳು ಬೆಂಕಿಗಾಹುತಿಯಾದ ನಂತರ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದರು. ಆಗಿನ ಸಂಸದರಾದ ಯೋಗಿ ಈ ಗ್ರಾಮಸ್ಥರಿಗೆ ನೆರವಿಗೆ ಮುಂದಾಗಿದ್ದು ಸಂಸದರ ನಿಧಿಯನ್ನು ಬಳಸಿಕೊಂಡು ಆರ್ಥಿಕವಾಗಿ ಸಹಾಯ ಮಾಡಿದರು. ಆದರೆ, ನಂತರ ಗೌತಮ್ ಈ ವಿಡಿಯೋವನ್ನು ಯೂಟ್ಯೂಬ್ ನಿಂದ ಡಿಲೀಟ್ ಮಾಡಿದ್ದಾರೆ.

ಹೀಗಾಗಿ, ಯೋಗಿ ಆದಿತ್ಯನಾಥ್ ಹಣ ಹಂಚುತ್ತಿರುವ ವೈರಲ್ ವಿಡಿಯೋ ಸುಮಾರು ಒಂದು ದಶಕದಷ್ಟು ಹಳೆಯದು ಮತ್ತು ಈಗ ನಡೆಯುತ್ತಿರುವ ಉತ್ತರಪ್ರದೇಶ ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಫ್ಯಾಕ್ಟ್ ಚೆಕ್‌ನಲ್ಲಿ ತಿಳಿದುಬಂದಿದೆ. 

click me!