ರಷ್ಯಾದ ರೈಲಿನ ಎಂಜಿನ್‌ನಲ್ಲಿ ಹಿಂದೂ ದೇವರು ಶ್ರೀಕೃಷ್ಣನ ಫೋಟೋ ಅಂಟಿಸಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿಜನಾ ಇದು..? ಏನ್ ಹೇಳುತ್ತೆ ಫ್ಯಾಕ್ಟ್ ಚೆಕ್.?
ರಷ್ಯಾದ ರೈಲಿನ ಎಂಜಿನ್‌ನಲ್ಲಿ ಹಿಂದೂ ದೇವರು ಶ್ರೀಕೃಷ್ಣನ ಫೋಟೋ ಅಂಟಿಸಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರೊಂದಿಗೆ ‘ಇಸ್ಕಾನ್ ಫೌಂಡೇಶನ್ ರಷ್ಯಾದಲ್ಲಿ ಹಿಂದುತ್ವ ಸಂದೇಶ ಸಾರುವ ಉದ್ದೇಶದಿಂದ ರೈಲಿನ ಮೇಲೆ ಶ್ರೀಕೃಷ್ಣನ ಫೋಟೋ ಅಂಟಿಸಿದೆ’ ಎಂದು ಅಡಿಟಿಪ್ಪಣಿ ಬರೆಯಲಾಗಿದೆ.
ನೆಟ್ಟಿಗರು ಇದನ್ನು ಶೇರ್ ಮಾಡಿ, ‘ಶ್ರೀ ಕೃಷ್ಣ ಪರಮಾತ್ಮನ ಬಗ್ಗೆ ಜಗತ್ತಿಗೇ ಸಾರುವ ಉದ್ದೇಶದಿಂದ ಇಸ್ಕಾನ್ ದೇಗುಲದ ಜನರು ರಷ್ಯಾದಲ್ಲಿ ರೈಲಿನ ಮೇಲೆ ಕೃಷ್ಣನ ಫೋಟೋವನ್ನು ಅಂಟಿಸಿದ್ದಾರೆ. ಯೋಚಿಸಿ, ಈ ರೈಲು ಭಾರತದ್ದಾಗಿದ್ದರೆ ಸಂಸತ್ ಮತ್ತು ದೇಶಾದ್ಯಂತ ಗದ್ದಲಗಳೇ ಆರಂಭವಾಗುತ್ತಿದ್ದವು. ಕಹಿ ಸತ್ಯ ಎಂದರೆ ನಮ್ಮ ಅವನತಿಗೆ ನಾವೇ ಕಾರಣ’ ಎಂದು ಬರೆದುಕೊಂಡಿದ್ದಾರೆ.
Fact Check: ಟಿಎಂಸಿಯ ಹಳೆ ಪೋಸ್ಟರ್ ಬಳಸಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪ್ರಚಾರ!
ಆದರೆ ನಿಜಕ್ಕೂ ರಷ್ಯಾದ ರೈಲುಗಳ ಮೇಲೆ ಕೃಷ್ಣನ ಪೋಸ್ಟರ್‌ಗಳನ್ನು ಅಂಟಿಸಲಾಗಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಅದರಲ್ಲಿ ಯಾವುದೇ ದೇವರ ಫೋಟೋವೂ ಇಲ್ಲ. ಎಂಜಿನ್ ಮೇಲೆ ಮೆಟ್ರೋ ಎಂದು ಬರೆಯಲಾಗಿದೆ ಅಷ್ಟೆ. ಅಲ್ಲದೆ ಅದು ಆಸ್ಪ್ರೇಲಿಯಾ ಮೂಲದ ಮೆಟ್ರೋ ರೈಲುಗಳು ರಷ್ಯಾದ್ದಲ್ಲ ಎಂದು ತಿಳಿದುಬಂದಿದೆ. ಹಾಗಾಗಿ ವೈರಲ್ ಸುದ್ದಿ ಸುಳ್ಳು.
- ವೈರಲ್ ಚೆಕ್