Fact Check: ಯುವತಿಯೊಂದಿಗಿನ ರಾಹುಲ್‌ ಗಾಂಧಿ‌ ವೈರಲ್ ಫೋಟೋ ಭಾರತ್‌ ಜೋಡೋದ್ದಲ್ಲ

By Manjunath NayakFirst Published Sep 23, 2022, 7:06 PM IST
Highlights

Rahul Gandhi Viral Photo Fact Check: ರಾಹುಲ್‌ ಗಾಂಧಿ ಯುವತಿಯೊಂದಿಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಕುರಿತ ಫ್ಯಾಕ್ಟ್‌ ಚೆಕ್‌ 

ನವದೆಹಲಿ (ಸೆ. 23): ತಮಿಳುನಾಡಿನಲ್ಲಿ (Tamil Nadu) ಸೆಪ್ಟೆಂಬರ್ 7 ರಿಂದ ಚಾಲನೆ ನೀಡಲಾಗಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ (Rahul Gandhi) ನೇತೃತ್ವದ ಭಾರತ ಐಕ್ಯತಾ ಯಾತ್ರೆ ಸೆಪ್ಟಂಬರ್ 30 ರಂದು ಕರ್ನಾಟಕ ಪ್ರವೇಶಿಸಲಿದೆ. ಒಟ್ಟು 7 ಜಿಲ್ಲೆಯಲ್ಲಿ 22 ದಿವಸ ಈ ಯಾತ್ರೆ ಸಂಚರಿಸಲಿದೆ.  ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆಗೆ ರಾಜ್ಯ ಕಾಂಗ್ರೆಸ್ (Karnataka Congress) ಭರ್ಜರಿ ತಯಾರಿ ನಡೆಸುತ್ತಿದೆ. ಈ ನಡುವೆ ರಾಹುಲ್‌ ಗಾಂಧಿ ಯುವತಿಯೊಂದಿಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್‌ ಆಗಿದೆ. ವೈರಲ್‌ ಫೋಟೋ ಭಾರತ್‌ ಜೋಡೋ (Bharth Jodo) ಯಾತ್ರೆಯೊಂದಿಗೆ ಹೋಲಿಸಲಾಗಿದೆ.  ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಫ್ಯಾಕ್ಟ್‌ ಚೆಕ್‌ ಮಾಡಿದಾಗ ಈ ಫೋಟೋ 2015ರ ಫೋಟೋ ಎಂಬುದು ಸಾಬೀತಾಗಿದೆ. 

Claim: "ಭಾರತ್‌ ಜೋಡೋ Container ಯಾತ್ರೆ ಪ್ರಗತಿಯಲ್ಲಿದೆ" ಎಂಬ ಶೀರ್ಷಿಕೆಯೊಂದಿಗೆ ರಾಹುಲ್‌ ಗಾಂಧಿ ಯುವತಿಯೊಂದಿಗಿರುವ ಫೋಟೋ ವಾಟ್ಸಾಪ್‌ (WhatsApp) ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. 

Fact Check: ಫೋಟೋ ಸತ್ಯಾಸತ್ಯತೆ ಪರಿಶೀಲಿಸಲು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಗೂಗಲ್ ರಿವರ್ಸ್‌ ಇಮೇಜ್‌ ಸರ್ಚ್‌ ಮಾಡಿದಾಗ ಹಲವು ವರದಿಗಳು ಪತ್ತೆಯಾಗಿವೆ. 20 August 2015ರಂದು ಹಿಂದುಸ್ತಾನ್‌ ಟೈಮ್ಸ್ ರಾಹುಲ್‌ ಗಾಂಧಿ ಯುವತಿಯೊಂದಿಗಿರುವ ಈ ಫೋಟೋ ಪೋಸ್ಟ್‌ ಮಾಡಿದ್ದು "ನವದೆಹಲಿಯಲ್ಲಿ ನಡೆದ ರಾಜೀವ್ ಗಾಂಧಿ ಅವರ 71 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಅವರ ಪುತ್ರಿ ಮಿರಾಯಾ ವಾದ್ರಾ ಮತ್ತು ರಾಹುಲ್ ಗಾಂಧಿ ಭಾಗಿಯಾದ್ದರು" ಎಂದು ತಿಳಿಸಿದೆ.

ಇನ್ನು ಇಂಡಿಯನ್‌ ಎಕ್ಸ್‌ಪ್ರೆಸ್‌ (Indian Express) ಕೂಡ ಇದೇ ಕಾರ್ಯಕ್ರಮದ ವರದಿ ಮಾಡಿದ್ದು "ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಮೊಮ್ಮಗಳು ಮಿರಾಯಾ (Miraya Gandhi) ಅವರು ತಮ್ಮ ಅಜ್ಜಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾವ ರಾಹುಲ್ ಅವರೊಂದಿಗೆ ತಮ್ಮ ದಿವಂಗತ ಅಜ್ಜನ 71 ನೇ ಜನ್ಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದರು" ಎಂದು ತಿಳಿಸಿದೆ. ಕಾರ್ಯಕ್ರಮದಲ್ಲಿ ಮಿರಾಯಾ  ಪೋಷಕರಾದ ಪ್ರಿಯಾಂಕಾ ವಾದ್ರಾ ಮತ್ತು ರಾಬರ್ಟ್ ವಾದ್ರಾ ಕೂಡ ಭಾಗವಹಿಸಿದ್ದರು ಎಂದು ವರದಿ ತಿಳಿಸಿದೆ.

Fact Check: 'ಹಿಟ್ಟು ಅಂದು ಲೀಟರ್‌ಗೆ ₹22, ಇಂದು ₹40' ಎಂದು ಹೇಳಿ ಬಳಿಕ ಸರಿಪಡಿಸಿಕೊಂಡ ರಾಹುಲ್‌ ಗಾಂಧಿ

Conclusion: ಹೀಗಾಗಿ ರಾಹುಲ್‌ ಗಾಂಧಿ ವೈರಲ್‌ ಫೋಟೋ ಭಾರತ್‌ ಜೋಡೋದ್ದಲ್ಲ ಎಂದು ಸಾಬೀತಾಗಿದೆ. ರಾಹುಲ್‌ ಗಾಂಧಿಯವರೊಂದಿಗಿನ  ಪ್ರಿಯಾಂಕಾ ವಾದ್ರಾ ಮತ್ತು ರಾಬರ್ಟ್ ವಾದ್ರಾ ಮಗಳು ಮಿರಾಯಾ ಫೋಟವನ್ನು ಭಾರತ್‌ ಜೋಡೋ ಸಂದರ್ಭದಲ್ಲಿನ ಫೋಟೋ ಎಂದು ವೈರಲ್‌ ಮಾಡಲಾಗಿದೆ. 

click me!