Fact Check: 25 GB ಉಚಿತ ಡಾಟಾ ಆಫರ್, ಎಚ್ಚರಿಕೆ ನೀಡಿ ರಿಲಯನ್ಸ್ ಜಿಯೋ !

By Suvarna News  |  First Published Mar 30, 2020, 9:12 PM IST

ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ಬಹುತೇಕ ಕಂಪನಿಗಳು ಮನೆಯಲ್ಲಿ ಕೆಲಸ ಮಾಡಲು ನೌಕರರಿಗೆ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ನೌಕರರಿಗೆ ಇಂಟರ್‌ನೆಟ್ ಸೇವೆ ಅವಶ್ಯಕವಾಗಿದೆ. ಇದೇ ವೇಳೆ  ಜಿಯೋ 25 ಜಿಬಿ ಉಚಿತ ಆಫರ್ ನೀಡುತ್ತಿದೆ ಅನ್ನೋ ಸಂದೇಶಗಳನು ಹರಿದಾಡತೊಡಗಿದೆ. ಈ ಕುರಿತು ರಿಲಯನ್ಸ್ ಜಿಯೋ ಎಚ್ಚರಿಕೆ ನೀಡಿದೆ. 


ಮುಂಬೈ(ಮಾ.30): ಸುಳ್ಳು ಸುದ್ದಿ ಹಾಗೂ ಸಂದೇಶಗಳನ್ನು ತೇಲಿ ಬಿಡುವವರಿಗೆ ರಿಲಯನ್ಸ್ ಜಿಯೋ ಖಡಕ್ ಎಚ್ಚರಿಕೆ ನೀಡಿದೆ. ಸುಳ್ಳು ಸುದ್ದಿಗಳಿಗೆ ಮರುಳಾಗಬೇಡಿ ಎಂದು ಸ್ಪಷ್ಟ ಸಂದೇಶ ರವಾನಿಸಿದೆ. ಕಳೆದ ಕೆಲ ದಿನಗಳಿಂದ ರಿಲಯನ್ಸ್ ಜಿಯೋ 25 ಜಿಬಿ ಡಾಟಾ ಉಚಿತ ಡಾಟಾ ನೀಡುತ್ತಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಇದೀಗ ಜಿಯೋ ಟ್ವಿಟರ್ ಖಾತೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದೆ

ಆಫರ್ ಕುರಿತು ಜಿಯೋ ಯಾವುದೇ ರೀತಿ ಕರೆ ಹಾಗೂ ಸಂದೇಶ ರವಾನಿಸುವುದಿಲ್ಲ. ಜಿಯೋ ಕುರಿತು ಯಾವುದೇ ಆಫರ್‌‍ಗಳ ವಿವರ ಆ್ಯಪ್ ಮೂಲಕ ಅಧೀಕೃತ ವೆಸ್‌ಸೈಟ್ ಮೂಲಕ ಪ್ರಕಟಿಸುತ್ತದೆ ಎಂದು ಸ್ಪಷ್ಟಪಡಿಸಿದೆ. 

Tap to resize

Latest Videos

ಜಿಯೋ ಹಾಗೂ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ಜೊತೆಯಾಗಿ 25 ಲಕ್ಷ ಲಾಟರಿ ಪ್ರಶಸ್ತಿ ನೀಡಲಾಗುತ್ತಿದೆ ಅನ್ನೋ ಸುಳ್ಳು ಸುದ್ದಿಗೂ ಸ್ಪಷ್ಟನೆ ನೀಡಿದೆ. ಹಲವು ಜಿಯೋ ಗ್ರಾಹಕರಿಗೆ ನೀವು 25 ಲಕ್ಷ ರೂಪಾಯಿ ಗೆದ್ದಿದ್ದೀರಿ ಎಂಬ ಸಂದೇಶಗಳು ಬರುತ್ತಿದೆ. ಹೀಗಾಗಿ ಈ ರೀತಿಯ ಸುಳ್ಳು ಸಂದೇಶಗಳಿಗೆ ಕಿವಿಗೊಡಬೇಡಿ ಎಂದು ರಿಲಯನ್ಸ್ ಜಿಯೋ ಹೇಳಿದೆ.
 

click me!