ಕೊರೋನಾ ಸಾಂಕ್ರಾಮಿಕ ರೋಗವು ಮಾಂಸಾಹಾರದಿಂದ ಹರಡುತ್ತದೆ. ಬರೀ ಶಾಲೆ, ಕಾಲೇಜು ಮಾಲ್ಗಳನ್ನು ಮಾತ್ರ ರದ್ದು ಮಾಡಿದ್ದೇಕೆ? ಎಲ್ಲಾ ಮಾಂಸದಂಗಡಿಗಳನ್ನೂ ಬಂದ್ ಮಾಡಿ’ ಎಂದು ಕ್ರಿಕೆಟ್ ದೇವರು ಎಂದೇ ಕರೆಯಲಾಗುವ ಸಚಿನ್ ತೆಂಡುಲ್ಕರ್ ಕರೆಕೊಟ್ಟಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ?
ಕೊರೋನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ನಡುವೆ ಮಾಂಸಾಹಾರ ಅಥವಾ ಚಿಕನ್ ಸೇವಿಸಿದರೆ ಕೊರೋನಾ ಸೋಂಕು ತಗುಲುತ್ತದೆ ಎಂಬ ವದಂತಿಯಿಂದಾಗಿ ಕುಕ್ಕುಟೋದ್ಯಮ ನಷ್ಟಅನುಭವಿಸುತ್ತಿದೆ.
ಇತ್ತ ಕೊರೋನಾ ಸಾಂಕ್ರಾಮಿಕ ರೋಗವು ಮಾಂಸಾಹಾರದಿಂದ ಹರಡುತ್ತದೆ. ಬರೀ ಶಾಲೆ, ಕಾಲೇಜು ಮಾಲ್ಗಳನ್ನು ಮಾತ್ರ ರದ್ದು ಮಾಡಿದ್ದೇಕೆ? ಎಲ್ಲಾ ಮಾಂಸದಂಗಡಿಗಳನ್ನೂ ಬಂದ್ ಮಾಡಿ’ ಎಂದು ಕ್ರಿಕೆಟ್ ದೇವರು ಎಂದೇ ಕರೆಯಲಾಗುವ ಸಚಿನ್ ತೆಂಡುಲ್ಕರ್ ಕರೆಕೊಟ್ಟಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
undefined
ಆದರೆ ಬೂಮ್ ಲೈವ್ ಈ ಸುದ್ದಿಯ ಸತ್ಯಾಸತ್ಯ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ. ಬೂಮ್, ಕ್ರಿಕೆಟ್ ಆಟಗಾರ ಸಚಿನ್ ತೆಂಡುಲ್ಕರ್ ಅವರ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡುವವರ ಬಳಿ ಸ್ಪಷ್ಟನೆ ಪಡೆದಾಗ ಸಚಿನ್ ಎಲ್ಲೂ ಈ ರಿತಿಯ ಹೇಳಿಕೆ ನೀಡಿಲ್ಲ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ. ಸಚಿನ್ ತೆಂಡುಲ್ಕರ್ ಟ್ವೀಟ್ಟರ್ನಲ್ಲಿ ಹಲವು ಟ್ವೀಟ್ ಮೂಲಕ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಆದರೆ ಎಲ್ಲೂ ಈ ಬಗ್ಗೆ ಹೇಳಿಲ್ಲ. ಸುದ್ದಿಯ ವಿಶ್ವಾಸಾರ್ಹತೆಯನ್ನು ಗಳಿಸುವ ಉದ್ದೇಶದಿಂದ ಸಚಿನ್ ತೆಂಡುಲ್ಕರ್ ಹೆಸರನ್ನು ಬಳಸಿಕೊಳ್ಳಲಾಗಿದೆ. ಅಲ್ಲಿಗೆ ತೆಂಡುಲ್ಕರ್ ಹೆಸರಲ್ಲಿ ವೈರಲ್ ಆಗಿರುವ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.
ಕೊರೋನಾ ವೈರಸ್ಚೀನಾದಲ್ಲಿ ಪತ್ತೆಯಾದಾಗಿನಿಂದ ಮಾಂಸಾಹಾರ ಕುರಿತ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದರೆ ಮಾಂಸಾಹಾರದಿಂದ ಕೊರೋನಾ ವೈರಸ್ ಹರಡುವುದಿಲ್ಲ. ಸರಿಯಾಗಿ ಬೇಯಿಸಿದ ಆಹಾರ ಸೇವಿಸುವುದರಿಂದ ಸೋಂಕು ಹರಡುವುದಿಲ್ಲ ಎಂದು ವಿಜ್ಞಾನಿಗಳು ದೃಢಪಡಿಸಿದ್ದರೂ ಇಂಥ ವದಂತಿಗಳು ಹರಿದಾಡುತ್ತಿವೆ.
Close