Fact Check: ಜಿಯೋದಿಂದ 498 ಫ್ರೀ ರೀಚಾರ್ಜ್ ಆಫರ್?

By Kannadaprabha News  |  First Published Mar 28, 2020, 8:43 AM IST

ಕೊರೋನಾವೈರಸ್‌ ಕಾರಣಕ್ಕೆ ದೇಶಾದ್ಯಂತ ಮಾರ್ಚ್ 24 ರಿಂದ 21 ದಿನಗಳ ಲಾಕ್‌ಡೌನ್‌ ಘೋಷಿಸಲಾಗಿದೆ. ಹಾಗಾಗಿ ಭಾರತದಲ್ಲಿ ಹಿಂದೆಂದಿಗಿಂತಲೂ ಇಂಟರ್‌ನೆಟ್‌ಗೆ ಹೆಚ್ಚು ಬೇಡಿಕೆ ಬಂದಿದೆ. ಆದ್ದರಿಂದ ಜಿಯೋ ಪ್ರತಿಯೊಬ್ಬರಿಗೂ 498 ರು. ಉಚಿತ ರೀಚಾರ್ಜ್ ಆಫರ್‌ ನೀಡಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.


ಕೊರೋನಾವೈರಸ್‌ ಕಾರಣಕ್ಕೆ ದೇಶಾದ್ಯಂತ ಮಾರ್ಚ್ 24 ರಿಂದ 21 ದಿನಗಳ ಲಾಕ್‌ಡೌನ್‌ ಘೋಷಿಸಲಾಗಿದೆ. ಹಾಗಾಗಿ ಭಾರತದಲ್ಲಿ ಹಿಂದೆಂದಿಗಿಂತಲೂ ಇಂಟರ್‌ನೆಟ್‌ಗೆ ಹೆಚ್ಚು ಬೇಡಿಕೆ ಬಂದಿದೆ. ಆದ್ದರಿಂದ ಜಿಯೋ ಪ್ರತಿಯೊಬ್ಬರಿಗೂ 498 ರು. ಉಚಿತ ರೀಚಾಜ್ ಆಫರ್‌ ನೀಡಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

Fact Check: ಕೊರೋನಾಗೆ ತತ್ತರಿಸಿದ ಇಟಲಿಯಲ್ಲಿ ರಸ್ತೆ ಬದಿಯಲ್ಲೇ ಐಸಿಯು!

Tap to resize

Latest Videos

undefined

ವೈರಲ್‌ ಆಗಿರುವ ಸಂದೇಶ ಹಿಂದಿ ಭಾಷೆಯಲ್ಲಿದ್ದು, ‘ಇಂಥ ಸಂದಿಗ್ಧ ಸನ್ನಿವೇಶದಲ್ಲಿ ಜಿಯೋ ತನ್ನ ಬಳಕೆದಾರರಿಗೆ 498 ರು. ಉಚಿತ ರೀಚಾರ್ಜ್ ಆಫರ್‌ ನೀಡಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಲು ಕೆಳಕಂಡ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ. ವಿಶೇಷ ಸೂಚನೆ: ಈ ಆಫರ್‌ ಮಾಚ್‌ರ್‍ 31ರ ವರೆಗೆ ಮಾತ್ರ ಲಭ್ಯವಿರುತ್ತದೆ’ ಎಂದು ಹೇಳಲಾಗಿದೆ.

ಆದರೆ ಈ ಸುದ್ದಿ ನಿಜವೇ ಎಂದು ಬೂಮ್‌ ಲೈವ್‌ ಪರಿಶೀಲಿಸಿದಾಗ ಎಂದಿನಂತೆ ಜಾಹೀರಾತುಗಳ ಲಾಭಕ್ಕಾಗಿ ಸೃಷ್ಟಿಯಾದ ನಕಲಿ ವೆಬ್‌ಸೈಟ್‌ ಎಂಬುದು ಖಚಿತವಾಗಿದೆ. ಜೊತೆಗೆ ಬೂಮ್‌ಗೆ ರಿಲಯನ್ಸ್‌ ಇಂಟಸ್ಟ್ರಿಯ ವಕ್ತಾರರು ಸ್ಪಷ್ಟನೆ ನೀಡಿದ್ದು, ‘ಇದು ಜಿಯೋ ಅಧಿಕೃತ ವೆಬ್‌ಸೈಟ್‌ ಅಲ್ಲ. ಈ ನಕಲಿ ವೆಬ್‌ಸೈಟ್‌ ಬಗ್ಗೆ ಈಗಾಗಲೇ ದೂರು ನೀಡಿದ್ದೇವೆ’ ಎಂದಿದ್ದಾರೆ. ಅಲ್ಲದೆ ಈ ವೈರಲ್‌ ಲಿಂಕ್‌ ಓಪನ್‌ ಮಾಡಿದಾಗ ವೈಯಕ್ತಿಕ ಮಾಹಿತಿಗಳನ್ನು ಭರ್ತಿ ಮಾಡುವಂತೆ ಸೂಚಿಸುತ್ತದೆ.

ಕೊನೆಗೆ ಈ ಸಂದೇಶವನ್ನು ವಾಟ್ಸ್‌ಆ್ಯಪ್‌ನಲ್ಲಿ ಫಾರ್ವರ್ಡ್‌ ಮಾಡುವುದು ಕಡ್ಡಾಯ ಎಂದೂ ಸೂಚಿಸುತ್ತದೆ. ಅಲ್ಲಿಗೆ ಇದು ಸುಳ್ಳುಸುದ್ದಿ ಎಂಬುದು ದೃಢ. ಜಾಹೀರಾತುಗಳ ಮುಖಾಂತರ ಹಣ ಗಳಿಸುವ ಉದ್ದೇಶದಿಂದ ಇಂಥ ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿಸಲಾಗುತ್ತದೆ. ಇದೂ ಕೂಡ ಅಂಥದ್ದೇ ನಕಲಿ ವೆಬ್‌ಸೈಟ್‌.

- ವೈರಲ್ ಚೆಕ್ 

click me!