Fact Check: ಕ್ರಿಕೆಟಿಗ ಶಕೀಬ್ ಅಲ್ ಹಸನ್ ನಿರ್ಮಿಸಿದ ಮಸೀದಿ ಹೆಸರಲ್ಲಿ ಉಕ್ರೇನ್ ರೈಲ್ವೆ ನಿಲ್ದಾಣದ ಫೋಟೋ ವೈರಲ್

By Suvarna NewsFirst Published Jul 4, 2022, 2:29 PM IST
Highlights

Fact Check: ಬಾಂಗ್ಲಾದೇಶದ ಕ್ರಿಕೆಟಿಗ ಶಕೀಬ್ ಅಲ್ ಹಸನ್ ನಿರ್ಮಿಸಿದ ಮಸೀದಿ ಎಂಬ ಸುದ್ದಿಯೊಂದಿಗೆ ಉಕ್ರೇನ್ ರೈಲ್ವೆ ನಿಲ್ದಾಣದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Fact Check: ಸಾಮಾಜಿಕ ಜಾಲತಾಣದಗಳಲ್ಲಿ ಕಟ್ಟಡದ ಫೋಟೋವೊಂದು ವೈರಲ್ ಆಗಿದ್ದು, ಈ ಮಸೀದಿಯನ್ನು ಬಾಂಗ್ಲಾದೇಶದ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಮತ್ತು ಅವರ ಪತ್ನಿ ನಿರ್ಮಿಸಿದ್ದಾರೆ ಎಂದು ಬರೆಯಲಾಗಿದೆ. ಸುಮಾರು ಒಂದು ವರ್ಷದ ಹಿಂದೆ ವೈರಾಲಾಗಿದ್ದ ಈ ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಹಂಚಿಕೊಂಡಿದ್ದಾರೆ. ಆದರೆ ಇದು ಮಸೀದಿಯ ಫೋಟೋ ಅಲ್ಲ, ಬದಲಾಗಿ ಉಕ್ರೇನ್‌ನ ಖಾರ್ಕಿವ್‌ನಲ್ಲಿರುವ ರೈಲು ನಿಲ್ದಾಣದ ಕಟ್ಟಡ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ಸಾಬೀತಾಗಿದೆ. 

Claim: ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಈ ಫೋಟೋವನ್ನು ಹಂಚಿಕೊಂಡಿದ್ದು “ಬಾಂಗ್ಲಾದೇಶಿ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಮತ್ತು ಅವರ ಪತ್ನಿ ತಮ್ಮ ನಗರದಲ್ಲಿ ಮಸೀದಿಯನ್ನು ನಿರ್ಮಿಸಿದ್ದಾರೆ, ಇದಕ್ಕೆ ಸುಮಾರು 90 ಲಕ್ಷ ರೂಪಾಯಿ ವೆಚ್ಚವಾಗಿದೆ. ಶಕೀಬ್ ಅಲ್ ಹಸನ್ ತಮ್ಮ ಜೇಬಿನಿಂದ ಅದನ್ನು ಪಾವತಿಸಿದ್ದಾರೆ. ಅಲ್ಲಾಹನು ಅವರ ಉದಾತ್ತ ಉದ್ದೇಶಗಳನ್ನು ಪೂರೈಸಲಿ! ” ಎಂದು ಹೇಳಲಾಗಿದೆ. 

Fact Check: ಈ ಫೋಟೋವನ್ನು ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್ ಮೂಲಕ ಹುಡುಕಿದಾಗ ಬ್ರಿಟಿಷ್ ಸ್ಟಾಕ್ ಫೋಟೋಗ್ರಫಿ ಏಜೆನ್ಸಿ ಅಲಾಮಿಯಲ್ಲಿ ಇದೇ ರೀತಿಯ ಫೋಟೋವನ್ನು ಕಂಡುಕೊಂಡಿದ್ದೇವೆ. ಈ ಕಟ್ಟಡವು ಉಕ್ರೇನ್‌ನ ಖಾರ್ಕಿವ್‌ನಲ್ಲಿರುವ ದಕ್ಷಿಣ ರೈಲ್ವೆ ನಿಲ್ದಾಣವಾಗಿದೆ ಎಂದು ವೆಬ್‌ಸೈಟ್ ಹೇಳಿದೆ.

ಇನ್ನು ಶಕೀಬ್ ಅಲ್ ಹಸನ್ ಮತ್ತು ಅವರು ಮಸೀದಿ ನಿರ್ಮಿಸಲು ಸಹಾಯ ಮಾಡಿದ ವರದಿಗಳಿಗಾಗಿ ಹುಡುಕಿದಾಗ ಮಾರ್ಚ್ 2021ರ ಕೆಲ ವರದಿಗಳು (Link) ಲಭ್ಯವಾಗಿವೆ.  ವರದಿಗಳು ಪ್ರಕಾರ ಶಕೀಬ್ ಬಾಂಗ್ಲಾದ ಮಾಗುರಾದಲ್ಲಿ ಮಸೀದಿಯೊಂದರ ಪುನರ್ನಿಮಾಣಕ್ಕೆ ಸಹಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ . ಹೊಸ ಮಸೀದಿಯು ಹಳೆಯದಕ್ಕಿಂತ ದೊಡ್ಡದಾಗಿದೆ ಎಂದು ವರದಿಗಳು ಹೇಳಿವೆ. ಅಲ್ ಹಸನ್ ಈ ಪ್ರಯತ್ನಕ್ಕೆ ಸುಮಾರು ₹20-25 ಲಕ್ಷದ ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಮಸೀದಿಯ ಫೋಟೋಗಳನ್ನು ಮತ್ತು ವೈರಲ್ ಫೋಟೋ ಎರಡೂ ಬೇರೆ ಬೇರೆಯಾಗಿವೆ. 

Conclusion: ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿರುವ ಸುದ್ದಿ ತಪ್ಪುದಾರಿಗೆಳೆಯುತ್ತಿದೆ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ಸಾಬೀತಾಗಿದ್ದು, ಫೋಟೋ ಮಸೀದಿಯದ್ದಲ್ಲ, ಆದರೆ ಉಕ್ರೇನ್‌ನ ಖಾರ್ಕಿವ್‌ನಲ್ಲಿರುವ ರೈಲ್ವೆ ನಿಲ್ದಾಣದ್ದು ಎಂದು ಖಚಿತವಾಗಿದೆ. 

ಇದನ್ನೂ ಓದಿ: 'ನಾನು ಇಂದಿರಾ ಸೊಸೆ, ಯಾರಿಗೂ ಹೆದರುವುದಿಲ್ಲ': ಇ.ಡಿ. ಸಮನ್ಸ್‌ ಬೆನ್ನಲ್ಲೇ ಸೋನಿಯಾ ಗಾಂಧಿ ಹಳೆ ವೀಡಿಯೊ ವೈರಲ್

click me!