Fact Check: ಬಾಳಾಠಾಕ್ರೆ ತಿಲಕ ಇಡುತ್ತಿರುವುದು ಏಕನಾಥ್ ಶಿಂಧೆಗಲ್ಲ, ಶಿಂಧೆ ಗುರು ಆನಂದ ದಿಘೆಗೆ

By Suvarna NewsFirst Published Jul 1, 2022, 6:14 PM IST
Highlights

Fact Check: ಉದ್ಧವ್‌ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾದ ಬಂಡಾಯ ನಾಯಕ ಏಕನಾಥ ಶಿಂಧೆಗೆ ಸ್ವತಃ ಬಾಳಾ ಠಾಕ್ರೆಯವರೇ ತಿಲಕವನ್ನು ಹಚ್ಚಿ ಅಭಿನಂದಿಸಿದ್ದರು ಎನ್ನಲಾದ ಹಳೆಯ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ

Fact Check:10 ದಿನಗಳ ಹಿಂದೆ ಮಹಾರಾಷ್ಟ್ರದ (Maharashtra) ಮಹಾ ಅಘಾಡಿ ಸರ್ಕಾರದಲ್ಲಿ ನಡೆದ ದಿಢೀರ್‌ ಬಂಡಾಯ, ಗುರುವಾರ ಮತ್ತೆ ಇನ್ನೆರೆಡು ಮಹಾ ಅಚ್ಚರಿಗಳೊಂದಿಗೆ ಮಹಾರಾಷ್ಟ್ರಕ್ಕೆ ಯಾರೂ ಊಹಿಸಿರದ ನೂತನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯನ್ನು ನೀಡಿದೆ. ಅತಿದೊಡ್ಡ ಪಕ್ಷವಾಗಿರುವ ಹೊರತಾಗಿಯೂ 50 ಶಾಸಕರ ಬೆಂಬಲ ಹೊಂದಿರುವ ಏಕನಾಥ ಶಿಂಧೆ (Eknath Shindhe) ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಬಿಜೆಪಿ ದಯಪಾಲಿಸಿದ್ದರೆ, ಮೊದಲು ಸರ್ಕಾರದ ಭಾಗವಾಗಿಲ್ಲ ಎಂದಿದ್ದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ (Devendra Fadnavis) ಕೊನೆಗೆ ರಾಜ್ಯದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇತ್ತ ಉದ್ಧವ್‌ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾದ ಬಂಡಾಯ ನಾಯಕ ಏಕನಾಥ ಶಿಂಧೆಗೆ ಸ್ವತಃ ಬಾಳಾ ಠಾಕ್ರೆಯವರೇ ತಿಲಕವನ್ನು ಹಚ್ಚಿ ಅಭಿನಂದಿಸಿದ್ದರು ಎನ್ನಲಾದ ಹಳೆಯ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕಪ್ಪು ಬಿಳುಪಿನ ಈ ಹಳೆಯ ಫೋಟೊದಲ್ಲಿ ಬಾಳಾ ಠಾಕ್ರೆಯವರು ವ್ಯಕ್ತಿಯೊಬ್ಬನಿಗೆ ತಿಲಕ ಹಚ್ಚುತ್ತಿದ್ದಾರೆ. ಸ್ವತಃ ಬಾಳಾ ಸಾಹೇಬ್‌ ಏಕನಾಥ ಶಿಂಧೆಗೆ ತಿಲಕ ಹಚ್ಚಿ ಆಶೀರ್ವದಿಸಿದ್ದಾರೆ ಎಂದು ವೈರಲ್‌ ಆದ ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಆದರೆ ಈ ಪೋಸ್ಟ್‌ನ ಅಸಲಿಯತ್ತನ್ನು ಪರಿಶೀಲಿಸಿದಾಗ ಚಿತ್ರದಲ್ಲಿರುವ ವ್ಯಕ್ತಿ ಶಿಂಧೆಯಲ್ಲ ಅವರ ರಾಜಕೀಯ ಗುರುವಾದ ಆನಂದ ದಿಘೆ ಎಂಬುದು ತಿಳಿದುಬಂದಿದೆ. ಬಾಳಾ ಸಾಹೇಬ್‌ಗೆ ಆಪ್ತರಾಗಿದ್ದ ದಿಘೆ 2001ರಲ್ಲಿ ನಿಧನರಾದಾಗ ಈ ಚಿತ್ರವನ್ನು ಬಿಬಿಸಿ ಮರಾಠಿ ಪ್ರಕಟಿಸಿತ್ತು. ಬಳಿಕ 2021ರಲ್ಲಿ ದಿಘೆಯವರ ಪುಣ್ಯತಿಥಿಯಂದು ಶಿವಸೇನೆ ಕೂಡಾ ಇದೇ ಚಿತ್ರವನ್ನು ಪೋಸ್ಟ್‌ ಮಾಡಿ ಅವರಿಗೆ ಶೃದ್ಧಾಂಜಲಿ ಸಲ್ಲಿಸಿತ್ತು. ಹೀಗಾಗಿ ಬಾಳಾ ಠಾಕ್ರೆ ಶಿಂಧೆಗೆ ತಿಲಕವಿಟ್ಟು ಆಶೀರ್ವದಿಸಿದ ಸುದ್ದಿ ಸುಳ್ಳು ಎಂಬುದು ಫ್ಯಾಕ್ಟ್‌ಚೆಕ್‌ನಲ್ಲಿ ತಿಳಿದುಬಂದಿದೆ. 

Claim: "ಹಳೆಯ ಫೋಟೋದಲ್ಲಿ, ಬಾಳಾಸಾಹೇಬ್ ಠಾಕ್ರೆ ಏಕನಾಥ ಶಿಂಧೆಯವರಿಗೆ ತಿಲಕ ನೀಡಿ ಆಶೀರ್ವಾದ ನೀಡುತ್ತಿದ್ದಾರೆ" ಎಂಬ ಇಂಗ್ಲೀಷ್ ಶಿರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಳ್ಳಲಾಗಿದೆ. ‌ಈಂಥಹ ಕೆಲ ಫೋಸ್ಟ್‌ಗಳನ್ನು ನೋಡಬಹುದು. 

Fact Check: ಫೋಟೋವನ್ನು ಗೂಗಲ್‌ ರಿವರ್ಸ್‌ ಸರ್ಚ್‌ ಮೂಲಕ ಹುಡುಕಿದಾಗ, ಈ ಫೋಟೋ ಒಳಗೊಂಡಿರುವ ಹಲವಾರು ಸುದ್ದಿ ವರದಿಗಳು ಲಭ್ಯವಾಗುತ್ತವೆ. 2001 ರಲ್ಲಿ ನಿಧನರಾದ ಶಿವಸೇನಾ ನಾಯಕ ಆನಂದ್ ದಿಘೆ ಅವರ ಕುರಿತಾದ ಏಪ್ರಿಲ್ ವರದಿಯಲ್ಲಿ ಬಿಬಿಸಿ ಮರಾಠಿ ( BBC Marathi) ಈ ಚಿತ್ರವನ್ನು ಪ್ರಕಟಿಸಿದೆ. ಇದೇ ಫೋಟೋವನ್ನು ಈ ವರ್ಷದ ಮೇ ತಿಂಗಳಲ್ಲಿ ಮರಾಠಿ ದೈನಿಕ ಲೋಕಮತ್‌ನಲ್ಲಿ (Lokmat) ಪ್ರಕಟಿಸಲಾಗಿದೆ.

 

धर्मवीर आनंद दिघे साहेब यांच्या स्मृती प्रत्येक शिवसैनिकाच्या मनात कायम आहेत. त्यांना स्मृतिदिनानिमित्त विनम्र अभिवादन. pic.twitter.com/SQ7heuq9pc

— ShivSena - शिवसेना (@ShivSena)

 

ಆಗಸ್ಟ್ 26, 2021 ರಂದು ದಿಘೆ ಅವರ ಪುಣ್ಯತಿಥಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಶಿವಸೇನೆ ಟ್ವೀಟ್ ಸಹ ನಾವು ಕಂಡುಕೊಂಡಿದ್ದೇವೆ. ಅಲ್ಲದೇ ಚಿತ್ರವನ್ನು ಇತರ ಶಿವಸೇನೆ ನಾಯಕರು ಸಹ ಟ್ವೀಟ್ ಮಾಡಿದ್ದಾರೆ (https://twitter.com/iYashwantJadhav/status/1486616083666665477).

ಇದನ್ನೂ ಓದಿ:  'ನಾನು ಇಂದಿರಾ ಸೊಸೆ, ಯಾರಿಗೂ ಹೆದರುವುದಿಲ್ಲ': ಇ.ಡಿ. ಸಮನ್ಸ್‌ ಬೆನ್ನಲ್ಲೇ ಸೋನಿಯಾ ಗಾಂಧಿ ಹಳೆ ವೀಡಿಯೊ ವೈರಲ್

ಆನಂದ್ ದಿಘೆ ಯಾರು?: ದಿಘೆ ಅವರು ಬಾಳ್ ಠಾಕ್ರೆ ಅವರ ಅನುಯಾಯಿ ಮತ್ತು ಬಂಡಾಯ ಸೇನಾ ನಾಯಕ ಏಕನಾಥ್ ಶಿಂಧೆ ಅವರ ಮಾರ್ಗದರ್ಶಕರಾಗಿದ್ದರು. ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು "ಧರ್ಮ ವೀರ್" ಎಂದು ಜನಪ್ರಿಯವಾಗಿ ಕರೆಯಲ್ಪಡುವ ಶಿಂಧೆಯ ಮಾರ್ಗದರ್ಶಕರನ್ನು ಈಗ ಗಮನಕ್ಕೆ ತಂದಿದೆ. ತೀವ್ರ ಹೃದಯಾಘಾತದ ನಂತರ ದಿಘೆ 50 ನೇ ವಯಸ್ಸಿನಲ್ಲಿ ನಿಧನರಾದರು. 

ಫ್ರಂಟ್‌ಲೈನ್ ಮ್ಯಾಗಜೀನ್‌ನಲ್ಲಿ ದಿಘೆ ಅವರ  ಮರಣೋತ್ತರ ಪ್ರೊಫೈಲಿನಲ್ಲಿ ಥಾಣೆ ಪ್ರದೇಶದ ಮೇಲೆ ಹಿಡಿತ ಸಾಧಿಸಿದ್ದರಿಂದ ಅವರು "ಥಾಣೆಯ ವಾಸ್ತವಿಕ ಬಾಳ್ ಠಾಕ್ರೆ" ಎಂದು ಗುರುತಿಸಿದ್ದಾರೆ. ವರದಿಯ ಪ್ರಕಾರ, 1989 ರಲ್ಲಿ ಥಾಣೆ ಮೇಯರ್ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಅಡ್ಡ ಮತ ಚಲಾಯಿಸಿದ ಶಿವಸೇನಾ ಕಾರ್ಪೊರೇಟರ್ ಶ್ರೀಧರ್ ಖೋಪ್ಕರ್ ಅವರ ಹತ್ಯೆಯ ನಂತರ ದಿಘೆ ಬೆಳಕಿಗೆ ಬಂದರು.

ಹೀಗಾಗಿ, ಬಾಳ್ ಠಾಕ್ರೆ ಆಶೀರ್ವಾದ ಪಡೆದಿರುವ ಫೋಟೋದಲ್ಲಿರುವ ವ್ಯಕ್ತಿ ಏಕನಾಥ್ ಶಿಂಧೆ ಅಲ್ಲ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ತಿಳಿದುಬಂದಿದೆ. ಬದಲಿಗೆ, ಇದು ಅವರ ಮಾರ್ಗದರ್ಶಕ ಮತ್ತು ಥಾಣೆಯ ದಿವಂಗತ ಸೇನಾ ನಾಯಕ ಆನಂದ್ ದಿಘೆ ಫೋಟೋ ಎಂದು ತಿಳಿದು ಬಂದಿದೆ. 

click me!