Fact Check: ಜಾಮಾ ಮಸೀದಿಯ ಗುಮ್ಮಟಕ್ಕೆ ಹಾನಿ? ಇಲ್ಲಿದೆ ವೈರಲ್‌ ಫೋಟೋ ಅಸಲಿಯತ್ತು

By Suvarna News  |  First Published Jun 10, 2022, 8:56 PM IST

ಇತ್ತೀಚೆಗೆ ದೆಹಲಿಯಲ್ಲಿ ಭೀಕರ ಚಂಡಮಾರುತದಿಂದಾಗಿ ಜಾಮಾ ಮಸೀದಿಯ ಗುಮ್ಮಟ ಕುಸಿದಿದೆ ಎನ್ನಲಾದ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ


ನವದೆಹಲಿ (ಜೂ. 10): ಇತ್ತೀಚೆಗೆ ದೆಹಲಿಯಲ್ಲಿ ಭೀಕರ ಚಂಡಮಾರುತದಿಂದಾಗಿ ಜಾಮಾ ಮಸೀದಿಯ ಗುಮ್ಮಟ ಕುಸಿದಿದೆ ಎನ್ನಲಾದ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ವೈರಲ್‌ ಪೋಸ್ಟ್‌ನಲ್ಲಿ ಮಸೀದಿಯ ಗುಮ್ಮಟ ಧ್ವಂಸವಾಗುವ ಚಿತ್ರದೊಂದಿಗೆ, ‘300 ಕೇಜಿ ಭಾರತದ ಗುಮ್ಮಟ ಇದ್ದಕ್ಕಿದ್ದಂತೆ ಕುಸಿಯುವುದು ಸಂಯೋಗವಲ್ಲ. ಇದು ಮಹಾದೇವನ ಸ್ಪಷ್ಟ ಸಂಕೇತವಾಗಿದೆ. ಭಾರತದ ಕಣಕಣವೂ ನಮ್ಮದು. ಹರಹರ ಮಹಾದೇವ್‌’ ಎಂದು ಬರೆಯಲಾಗಿದೆ.

ಆದರೆ ಈ ಪೋಸ್ಟ್‌ನ ಅಸಲಿಯತ್ತನ್ನು ಪರಿಶೀಲಿಸಿದಾಗ ಈ ಚಿತ್ರವು ಉತ್ತರ ಪ್ರದೇಶದ (Uttar Pradesh) ಉಪರ್‌ಕೋಟ್‌ನಲ್ಲಿರುವ ಜಾಮಾ ಮಸೀದಿಯದ್ದು ಎಂದು ತಿಳಿದುಬಂದಿದೆ. ಅಕ್ಟೋಬರ್‌ 21, 2017ರಂದು ಮಧ್ಯಾಹ್ನದ ಪ್ರಾರ್ಥನೆ ಸಲ್ಲಿಸುವಾಗ ಮಸೀದಿಯ ಮೂರು ಗುಮ್ಮಟದಲ್ಲಿ ಒಂದು ಕುಸಿದಿತ್ತು. ಇದರಿಂದಾಗಿ ಮೂರು ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದರು. ಒಂದು ಮಗು ಸಾವನ್ನಪ್ಪಿತ್ತು.

Latest Videos

undefined

ಉತ್ತರ ಪ್ರದೇಶದ ಮಸೀದಿಯ ಕುಸಿದ ಗುಮ್ಮಟದ ಚಿತ್ರವನ್ನು ಜನರಲ್ಲಿ ಕೋಮು ದ್ವೇಷಭಾವನೆ ಹರಡಲು ಬಳಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಜಾಮಾ ಮಸೀದಿಯ ಗುಮ್ಮಟ ಕುಸಿದಿದೆ ಎನ್ನಲಾಗುವ ಈ ಸುದ್ದಿ ಸುಳ್ಳು ಎಂಬುದು ಈ ಮೂಲಕ ಸ್ಪಷ್ಟವಾಗಿದೆ.

click me!