Fact Check: 27 ವರ್ಷ ಹಿಂದೆ ಕೇಶುಭಾಯ್ ಪಟೇಲ್ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ಮೋದಿ

By Suvarna News  |  First Published Dec 12, 2022, 11:36 AM IST

Narendra Modi at Keshubhai Patel swearing in: ಭೂಪೇಂದ್ರ ಪಟೇಲ್‌, ನರೇಂದ್ರ ಮೋದಿ, ಎಲ್ ಕೆ ಅಡ್ವಾಣಿ ಸೇರಿದಂತೆ ಅನೇಕ ಗಣ್ಯರಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ 


ನವದೆಹಲಿ (ನ. 09): ಗುಜರಾತಲ್ಲಿ ಬಿಜೆಪಿ ದಾಖಲೆಯ ಸತತ ಏಳನೇ ಬಾರಿ ವಿಧಾನಸಭೆ ಚುನಾವಣೆಯಲ್ಲಿ (Gujarat Elections) ಭರ್ಜರಿ ಜಯ ಸಾಧಿಸಿದೆ. ತನ್ಮೂಲಕ ಹಾಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌  ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಸಜ್ಜಾಗಿದ್ದಾರೆ. ಈ ನಡುವೆ  ಭೂಪೇಂದ್ರ ಪಟೇಲ್‌, ನರೇಂದ್ರ ಮೋದಿ, ಎಲ್ ಕೆ ಅಡ್ವಾಣಿ ಸೇರಿದಂತೆ ಅನೇಕ ಗಣ್ಯರಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ ಆಗಿದೆ.  ಚಿತ್ರದಲ್ಲಿ ಭೂಪೇಂದ್ರ ಪಟೇಲ್‌ (Bhupendrabhai Patel) ಹಾಗೂ ಎಲ್ ಕೆ ಅಡ್ವಾಣಿ (L K Advani) ಕುರ್ಚಿಯ ಮೇಲೆ ಕೂತ್ತಿದ್ದರೆ ಪ್ರಧಾನಿ ಮೋದಿ (PM Narendra Modi) ನೆಲದ ಮೇಲೆ ಕುಳಿತಿರುವುದು ಕಾಣಬಹುದು. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ಹಂಚಿಕೊಂಡಿದ್ದು 'ನೆಲದ ಮೇಲೆ ಕುಳಿತಿರುವ ವ್ಯಕ್ತಿಯು ವಿಶ್ವದ ಅಗ್ರಮಾನ್ಯ ನಾಯಕನಾಗಿದ್ದಾನೆ' ಎಂದು ಆಂಗ್ಲ ಭಾಷೆಯಲ್ಲಿ ಶೀರ್ಷಿಕೆಯಲ್ಲಿ ಬರೆದಿದ್ದಾರೆ.  ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಈ ಫೋಟೋ ಬಗ್ಗೆ ತನಿಖೆ ನಡೆಸಿದಾಗ ಈ ಫೋಟೋ ನಿಜವೆಂದು ಸಾಬೀತಾಗಿದೆ. 

Claim: "ಗುಜರಾತ್ ಮುಖ್ಯಮಂತ್ರಿಯಾಗಿ ಕೇಶುಭಾಯ್ ಪಟೇಲ್ ಪ್ರಮಾಣ ವಚನ ಸ್ವೀಕಾರ ಸಮಾರಂಭ (1995) ... ಸುಮಾರು 2 ದಶಕಗಳ ನಂತರ ಪ್ರಧಾನಿ ಹುದ್ದೆಗೆ ಏರಿರುವ ನೆಲದ ಮೇಲೆ ಕುಳಿತ ವ್ಯಕ್ತಿಯನ್ನು ಗಮನಿಸಿ ... ಅಡ್ವಾಣಿ ಹಿಂದೆ ಪ್ರಮೋದ್ ಮಹಾಜನ್ ಕುರ್ಚಿಯ ಮೇಲೆ ಕುಳಿತಿದ್ದಾರೆ ! ಮತ್ತು ನೆಲದ ಮೇಲೆ ಕುಳಿತಿರುವ ವ್ಯಕ್ತಿಯು ವಿಶ್ವದ ಅಗ್ರಮಾನ್ಯ ನಾಯಕನಾಗಿದ್ದಾನೆ !! ವಾಹ್, ಡೆಸ್ಟಿನಿ ಡೆಸ್ಟಿನಿ ನೋಡಿ" ಎಂದು ಹಲವರು ಬರೆದುಕೊಂಡಿದ್ದಾರೆ

Tap to resize

Latest Videos

Fact Check: ವೈರಲ್‌ ಫೋಟೋ ಸತ್ಯಾಸತ್ಯತೆ ತಿಳಿಯಲು ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಕೀವರ್ಡ್‌ಗಳನ್ನು ಬಳಸಿ ಗೂಗಲ್‌ ಸರ್ಚ್‌ ಮಾಡಿದಾಗ ಹಲವು ವರದಿಗಳು ಪತ್ತೆಯಾಗಿವೆ.  "ಅಡ್ವಾಣಿ, ಮೋದಿ, ವಘೇಲಾ... 27 ವರ್ಷಗಳ ಹಿಂದೆ ಗುಜರಾತ್‌ನಲ್ಲಿ ನಡೆದ ಕೇಶುಭಾಯ್ ಪಟೇಲ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಈ ದಿಗ್ಗಜರು ಎಲ್ಲಿದ್ದಾರೆ?"  ಎಂದ ಶಿರ್ಷೀಕೆಯೊಂದಿಗೆ ನವಭಾರತ ಟೈಮ್ಸ್‌ (Navbharat Times) ವರದಿ ಲಭ್ಯವಾಗಿದೆ. 

undefined

ನವಭಾರತ ಟೈಮ್ಸ್‌ ವರದಿಯಲ್ಲಿ "ಇದು 1995 ರ ಚಿತ್ರ. ಗುಜರಾತ್‌ನಲ್ಲಿ ಮೊದಲ ಬಾರಿಗೆ ಬಿಜೆಪಿಯ ಮುಖ್ಯಮಂತ್ರಿಯಾಗಿ ಕೇಶುಭಾಯಿ ಪಟೇಲ್ ಪ್ರಮಾಣ ವಚನ ಸ್ವೀಕರಿಸಿದರು. ಭಾರತದ ರಾಜಕೀಯದಲ್ಲಿ ತಮ್ಮದೇ ಆದ ಸ್ಥಾನವನ್ನು ಹೊಂದಿರುವ ಅನೇಕ ಸೆಲೆಬ್ರಿಟಿಗಳು ಆ ಪ್ರಮಾಣವಚನ ಸಮಾರಂಭದಲ್ಲಿ ಉಪಸ್ಥಿತರಿದ್ದರು. ನರೇಂದ್ರ ಮೋದಿ, ಎಲ್‌ಕೆ ಅಡ್ವಾಣಿ, ಭೈರೋನ್ ಸಿಂಗ್ ಶೇಖಾವತ್, ಶಂಕರಸಿನ್ಹ್ ವಘೇಲಾ, ಆನಂದಿ ಪಟೇಲ್ ಮುಂತಾದ ದೊಡ್ಡ ಹೆಸರುಗಳು ಚಿತ್ರದಲ್ಲಿ ಕಾಣಿಸಿಕೊಂಡಿವೆ" ಎಂದು ಹೇಳಲಾಗಿದೆ. 

Conclusion: 27 ವರ್ಷ ಹಿಂದೆ ಕೇಶುಭಾಯ್ ಪಟೇಲ್ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದು ವೈರಲ್‌ ಫೋಟೋ ನಿಜ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ಸಾಬೀತಾಗಿದೆ

click me!