Fact Check: ಛಾಯಾಗ್ರಾಹಕ ನೆಲದ ಮೇಲೆ ಮಲಗಿ ಪಿಎಂ ಮೋದಿ ಫೋಟೋ ಕ್ಲಿಕ್ಕಿಸುತ್ತಿರುವ ವೈರಲ್‌ ಚಿತ್ರ ಎಡಿಟೆಡ್‌

By Manjunath Nayak  |  First Published Nov 12, 2022, 1:28 PM IST

PM Narendra Modi Photographer Fact Check: ಛಾಯಾಗ್ರಾಹಕರೊಬ್ಬರು ನೆಲದ ಮೇಲೆ ಮಲಗಿ ಪ್ರಧಾನಿ ಮೋದಿ ಚಿತ್ರವನ್ನು ಕ್ಲಿಕ್ಕಿಸುತ್ತಿರುವ ಫೋಟೋ ಎಡಿಟ್‌ ಮಾಡಿದ್ದು ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ಸಾಬೀತಾಗಿದೆ


ನವದೆಹಲಿ (ನ. 12): ಪ್ರಧಾನಿ ನರೇಂದ್ರ ಮೋದಿ (PM Narendra Modi) ಕೈಮುಗಿದುಕೊಂಡು ನಡೆಯುತ್ತಿದ್ದು, ಛಾಯಾಗ್ರಾಹಕರೊಬ್ಬರು ನೆಲದ ಮೇಲೆ ಮಲಗಿ ಅವರ ಚಿತ್ರವನ್ನು ಕ್ಲಿಕ್ಕಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. "one man who works 18-20 hours a day, 365 days a year (ವರ್ಷದ 365 ದಿನ, ದಿನಕ್ಕೆ 18-20 ಗಂಟೆ ಕೆಲಸ ಮಾಡುವ ಏಕೈಕ ವ್ಯಕ್ತಿ) ಎಂಬ ಶಿರ್ಷಿಕೆ ಸೇರಿದಂತೆ ಹಲವು ಶಿರ್ಷೀಕೆಗಳೊಂದಿಗೆ ಪೋಸ್ಟ್‌ ವೈರಲ್‌ ಆಗುತ್ತಿದೆ. ಆದರೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಫ್ಯಾಕ್ಟ್‌ ಚೆಕ್‌ (Fact Check) ನಡೆಸಿದಾಗ ಈ ಫೋಟೋ ಎಡಿಟ್‌ ಮಾಡಿರುವುದು ಸಾಬೀತಾಗಿದೆ. 

Claim: PM Narendra Modi’s Photo Showing Photographer on the Ground | ನೆಲದ ಮೇಲೆ ಮಲಗಿ ಪ್ರಧಾನಿ ಮೋದಿ ಫೋಟೋ ಕ್ಲಿಕ್ಕಿಸುತ್ತಿರುವ ಛಾಯಾಗ್ರಾಹಕ 

Tap to resize

Latest Videos

Fact Check: ವೈರಲ್ ಫೋಟೋದ ಸತ್ಯಾಸತ್ಯತೆ ತಿಳಿಯಲು ನಾವು ರಿವರ್ಸ್ ಇಮೇಜ್ ಸರ್ಚ್‌ ನಡೆಸಿದಾಗ ಹಲವು ವರದಿಗಳು ಲಭ್ಯವಾಗಿವೆ. ಇಂಡಿಯಾ ಟಿವಿ (India TV) ವರದಿಯಲ್ಲಿ ದೆಹಲಿಯ ಗಾಂಧಿ ಸ್ಮೃತಿಯಲ್ಲಿ ಮಹಾತ್ಮ ಗಾಂಧಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದರು ಎಂದು ಹೇಳಲಾಗಿದೆ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಸಿದಾಗ 2ನೇ ಅಕ್ಟೋಬರ್ 2021 ರಂದು ದೆಹಲಿಯ ಗಾಂಧಿ ಸ್ಮೃತಿಯಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಭಾಗೌಹಿಸಿದ್ದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ಖಾತೆಯಿಂದ ಮಾಡಿದ ಟ್ವೀಟ್ ಪತ್ತೆಯಾಗಿದೆ.  ಟ್ವೀಟ್‌ನಲ್ಲಿನ ಎರಡನೇ ಚಿತ್ರವು ವೈರಲ್ ಆಗಿರುವ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಯಾವುದೇ ಛಾಯಾಗ್ರಾಹಕ ಇರಲಿಲ್ಲ. 

 

Took part in a prayer meeting at the Gandhi Smriti in Delhi. pic.twitter.com/bP2xuv7rRr

— Narendra Modi (@narendramodi)

 

ಇನ್ನು ವೈರಲ್‌ ಚಿತ್ರದಲ್ಲಿ ನೆಲದ ಮೇಲೆ ಮಲಗಿ ಫೋಟೋ ಕ್ಲಿಕ್ಕಿಸುತ್ತಿರುವ ಛಾಯಗ್ರಾಹಕರ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ರಿವರ್ಸ್ ಇಮೇಜ್ ಸರ್ಚ್‌ ನಡೆಸಿದಾಗ ಯಾವುದೇ ಫಲಿತಾಂಶ ಸಿಕ್ಕಿಲ್ಲ. ಹೀಗಾಗಿ ಕೆಲವು ಕೀವರ್ಡ್‌ ಬಳಿಸಿ ಗೂಗಲ್‌ ಸರ್ಚ್‌ ಮಾಡಿದಾಗ ಈ ಫೋಟೋಗ್ರಾಫರ್‌ನ ಚಿತ್ರವನ್ನು ನಾವು ಸ್ಟಾಕ್ ಇಮೇಜಸ್ ವೆಬ್‌ಸೈಟ್ ಅಲಾಮಿಯಲ್ಲಿ (Alamy) ಕಂಡುಕೊಂಡಿದ್ದೇವೆ. ಈ ಚಿತ್ರದಲ್ಲಿ ಪ್ರಧಾನಿ ಮೋದಿ ಎಲ್ಲೂ ಇರಲಿಲ್ಲ.

ಇಲ್ಲಿರುವ ಚಿತ್ರವನ್ನು 15 ಮಾರ್ಚ್, 2017 ರಂದು ಪೋಸ್ಟ್‌ ಮಾಡಲಾಗಿದೆ.  “Photographer lying on the ground while photographing a large building from different perspective. Creative photography style" (ವಿಭಿನ್ನ ದೃಷ್ಟಿಕೋನದಿಂದ ದೊಡ್ಡ ಕಟ್ಟಡದ ಫೋಟೋ ಕ್ಲಿಕ್ಕಿಸುವಾಗ ನೆಲದ ಮೇಲೆ ಮಲಗಿರುವ ಛಾಯಾಗ್ರಾಹಕ. ಕ್ರಿಯೇಟಿವ್‌ ಫೋಟೋಗ್ರಾಫಿ ಸ್ಟೈಲ್‌)  ಎಂದು ಶೀರ್ಷಿಕೆಯಲ್ಲಿ ಉಲ್ಲೇಖಿಸಲಾಗಿದೆ. ಈ  ಚಿತ್ರವನ್ನು 'ಇಂಗೆಮಾರ್ ಮ್ಯಾಗ್ನುಸನ್' (Ingemar Magnusson) ಎಂಬುವವರು ಕಾಂಟ್ರಿಬ್ಯೂಟ್‌ ಮಾಡಿದ್ದಾರೆ. 

Conclusion: ನೆಲದ ಮೇಲೆ ಮಲಗಿ ಛಾಯಾಗ್ರಾಹಕರೊಬ್ಬರು ಪ್ರಧಾನಿ ಮೋದಿ ಫೋಟೋ ಕ್ಲಿಕ್ಕಿಸುತ್ತಿರುವ ಚಿತ್ರವನ್ನು ಎಡಿಟ್ ಮಾಡಿರುವುದು ಫ್ಯಾಕ್ಟ್‌ ಚೆಕ್‌ನಲ್ಲಿ ಸಾಬೀತಾಗಿದೆ. ಹೀಗಾಗಿ ವೈರಲ್ ಆದ ಚಿತ್ರ ನಕಲಿ.

ಇದನ್ನೂ ಓದಿ: Fact Check: ಇದು ಅರುಣಾಚಲದ 'ಬಿದಿರಿನ ವಿಮಾನ ನಿಲ್ದಾಣ'ವಲ್ಲ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌

ಇದನ್ನೂ ಓದಿ: Fact Check: ಬಿಸಿ ತೆಂಗಿನ ನೀರು ಕ್ಯಾನ್ಸರನ್ನು ಗುಣಪಡಿಸುವುದಿಲ್ಲ: ವೈರಲ್ ಪೋಸ್ಟ್ ಸುಳ್ಳು

click me!