ಇತ್ತೀಚೆಗೆ ಕರೋನಾ ವೈರಸ್ ಬಗ್ಗೆ ವಿಶ್ವಸಂಸ್ಥೆಯ ಯುನೆಸೆಫ್ (ವಿಶ್ವಸಂಸ್ಥೆಯ ಅಂತಾಷ್ಟ್ರೀಯ ಮಕ್ಕಳ ತುರ್ತು ನಿಧಿ)ಯು ಸಲಹೆಯನ್ನು ನೀಡಿದೆ ಎನ್ನುವ ಪ್ರಕಟಣೆಯೊಂದು ಹಲವಾರು ಭಾಷೆಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?
ಇತ್ತೀಚೆಗೆ ಕರೋನಾ ವೈರಸ್ ಬಗ್ಗೆ ವಿಶ್ವಸಂಸ್ಥೆಯ ಯುನೆಸೆಫ್ (ವಿಶ್ವಸಂಸ್ಥೆಯ ಅಂತಾಷ್ಟ್ರೀಯ ಮಕ್ಕಳ ತುರ್ತು ನಿಧಿ)ಯು ಸಲಹೆಯನ್ನು ನೀಡಿದೆ ಎನ್ನುವ ಪ್ರಕಟಣೆಯೊಂದು ಹಲವಾರು ಭಾಷೆಗಳಲ್ಲಿ ವೈರಲ್ ಆಗುತ್ತಿದೆ.
ಅದರಲ್ಲಿ ‘ಕೊರೋನಾ ವೈರಸ್ ಗಾತ್ರದಲ್ಲಿ 400-500 ಮೈಕ್ರೋ ಸೂಕ್ಷ್ಮವ್ಯಾಸ ದಪ್ಪನಾಗಿದ್ದು, ಯಾವುದೇ ಮಾಸ್ಕ್ ಇದರ ಪ್ರವೇಶವನ್ನು ತಡೆಯುತ್ತದೆ. ನೆಲ ವಸ್ತುಗಳು, ಕೈಗಳ ಮೇಲೆ ಇರುತ್ತದೆ ವಿನಃ ಗಾಳಿಯಲ್ಲಿ ಇರುವುದಿಲ್ಲ. ಹಾಗೂ ಗಾಳಿಯಲ್ಲಿ ಪ್ರಸಾರವಾಗುವುದಿಲ್ಲ. ಕೊರೋನಾ ವೈರಸ್ ವಸ್ತುಗಳ ಮೇಲೆ 12 ಗಂಟೆಗಳ ಕಾಲ ಜೀವಿಸುತ್ತದೆ. ಆದ್ದರಿಂದ ಡಿಟರ್ಜೆಂನಿಂದ ಶುಚಿ ಮಡಬೇಕು.
undefined
Fact Check| ದಿಲ್ಲಿ ಗಲಭೆ: ಆಪ್‌ನಿಂದ ಮುಸ್ಲಿಮರಿಗೆ ಮಾತ್ರ ಪರಿಹಾರ!
ಬಟ್ಟೆಗಳ ಮೇಲೆ 9 ಗಂಟೆಗಳ ಕಾಲ ಜೀವಿಸುತ್ತದೆ. ಹಾಗಾಗಿ ಬಟ್ಟೆಯನ್ನು ತೊಳೆದು ಬಸಿ ಹಾಕಿದರೆ ವೈರಾಣು ಸಾಯುತ್ತದೆ. ಈ ವೈರಸ್ ಅನ್ನು 26-27 ಡಿಗ್ರಿ ಉಷ್ಣಾಂಶ ಕೊಲ್ಲುತ್ತದೆ. ವಿಶೇಷ ಸೂಚನೆ-ಐಸ್‌ಕ್ರೀಮ್ ಮತ್ತು ತಂಪು ಪಾನೀಯಗಳಿಂದ ದೂರ ಇರಿ’ ಎಂದು ಹೇಳಲಾಗಿದೆ. ಸಾವಿರಾರು ಜನರು ಈ ಪ್ರಕಟಣೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಆದರೆ ನಿಜಕ್ಕೂ ಯುನಿಸೆಫ್ ಈ ರೀತಿಯ ಸಲಹೆಗಳನ್ನು ನೀಡಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ, ಯುನಿಸೆಫ್ ಹೆಸರಲ್ಲಿ ಸುಳ್ಳು ಹರಡಲಾಗುತ್ತಿದೆ ಎಂಬುದು ಖಚಿತವಾಗಿದೆ. ಬೂಮ್ ಯುನಿಸೆಫ್ ಸೋಷಿಯಲ್ ಮೀಡಿಯಾ ಚಾನೆಲ್ಗಳನ್ನು ಪರಿಶೀಲಿಸಿದಾಗ ಈ ರೀತಿಯ ಯಾವುದೇ ಪ್ರಕಟಣೆ ಲಭ್ಯವಾಗಿಲ್ಲ. ಅದರ ವೆಬ್ಸೈಟಿನಲ್ಲೂ ಈ ಪ್ರಕಟಣೆ ಇಲ್ಲ.
ಯುನೆಸೆಫ್ ವಕ್ತಾರರೊಬ್ಬರು ಈ ಬಗ್ಗೆ ಸ್ಪಷ್ಟೀಕರಣವನ್ನೂ ನೀಡಿ ಇದನ್ನು ಯುನಿಸೆಫ್ ಬಿಡುಗಡೆ ಮಾಡಿಲ್ಲ ಎಂದಿದ್ದಾರೆ. ಅಲ್ಲದೆ ಈ ಪ್ರಕಟಣೆಯಲ್ಲಿ ಹೇಳಲಾದ ಬಹುತೇಕ ಅಂಶಗಳಿಗೆ ವೈಜ್ಞಾನಿಕ ಆಧಾರವೇ ಇಲಲ. ಹಾಗಾಗಿ ಇದು ಸುಳ್ಳು ಸುದ್ದಿ ಎಂಬುದು ಸ್ಪಷ್ಟ.