Fact Check| ಮಾಧ್ಯಮಗಳ ಎಡವಟ್ಟಿಂದ ಮುಸ್ಲಿಂಗೆ ಥಳಿತ!

By Kannadaprabha News  |  First Published Apr 16, 2020, 9:37 AM IST
ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿಹಾಕಿ ಮನಸೋ ಇಚ್ಛೆ ಥಳಿಸುತ್ತಿರುವ ವಿಡಿಯೋವನ್ನು ಪೋಸ್ಟ್‌ ಮಾಡಿ, ‘ಕೊರೋನಾ ವೈರಸ್‌ ವಿಷಯದಲ್ಲಿ ಮಾಧ್ಯಮಗಳು ಜವಾಬ್ದಾರಿ ಮರೆತು ಕೋಮು ದ್ವೇಷದ ಸುದ್ದಿ ಕಕ್ಕಿದ ಪರಿಣಾಮವಿದು’ ಎಂದು ಬರೆದ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಏನಿದರ ಸತ್ಯಾಸತ್ಯತೆ? ಇಲ್ಲಿದೆ ವಿವರ

ನವದೆಹಲಿ(ಏ.16): ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿಹಾಕಿ ಮನಸೋ ಇಚ್ಛೆ ಥಳಿಸುತ್ತಿರುವ ವಿಡಿಯೋವನ್ನು ಪೋಸ್ಟ್‌ ಮಾಡಿ, ‘ಕೊರೋನಾ ವೈರಸ್‌ ವಿಷಯದಲ್ಲಿ ಮಾಧ್ಯಮಗಳು ಜವಾಬ್ದಾರಿ ಮರೆತು ಕೋಮು ದ್ವೇಷದ ಸುದ್ದಿ ಕಕ್ಕಿದ ಪರಿಣಾಮವಿದು’ ಎಂದು ಬರೆದ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಮಸೀದಿಯಲ್ಲಿ ಬಚ್ಚಿಟ್ಟುಕೊಂಡಿದ್ದ 12 ತಬ್ಲಿಘಿಗಳು ಕೊನೆಗೂ ಸಿಕ್ಕಿಬಿದ್ರು!

ದೆಹಲಿಯ ನಿಜಾಮುದ್ದೀನ್‌ ಮಸೀದಿಯಲ್ಲಿ ನಡೆದ ತಬ್ಲೀಘಿ ಮರ್ಕಜ್‌ ಧಾರ್ಮಿಕ ಸಭೆಯ ನಂತರ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲ ಮಾಧ್ಯಮಗಳು ‘ತಬ್ಲೀಘಿ ಭಯೋತ್ಪಾದನೆ’ ಎಂಬರ್ಥದಲ್ಲಿ ಸುದ್ದಿಯನ್ನು ಬಿತ್ತರಿಸಿದ್ದವು. ನಂತರ ಮುಸ್ಲಿಮರ ಬಗ್ಗೆ ದ್ವೇಷ ಹೆಚ್ಚಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ಸಂದರ್ಭದಲ್ಲಿ ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿಹೊಡೆಯುತ್ತಿರುವ ವಿಡಿಯೋ ಪೋಸ್ಟ್‌ ಮಾಡಿ, ‘ಮಾಧ್ಯಮಗಳು ಕೋಮು ದ್ವೇಷ ಬಿತ್ತಿದ ಪರಿಣಾಮ, ಜನರು ಮುಸ್ಲಿಂ ಸಮುದಾಯದ ಜನರನ್ನು ಹೀಗೆ ಸುಖಾಸುಮ್ಮನೆ ಥಳಿಸುತ್ತಿದ್ದಾರೆ’ ಎಂದು ಬರೆದು ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡಲಾಗುತ್ತಿದೆ.

Fact Check| ಹೊರಗೋದ್ರೆ ಒದೆ ಬೀಳುತ್ತೆ ಎಂದಿದ್ದ ರೇವಣ್ಣ ಮಾಂಸದಂಗಡಿಯಲ್ಲಿ ಪ್ರತ್ಯಕ್ಷ?

ಆದರೆ ವೈರಲ್‌ ವಿಡಿಯೋದ ಸತ್ಯಾಸತ್ಯ ಪರಿಶೀಲಿಸಿದಾಗ ಕೊರೋನಾ ವೈರಸ್‌ಗೆ ಸಂಬಂಧವೇ ಇಲ್ಲದ ಯಾವುದೋ ಹಳೆಯ ವಿಡಿಯೋವವನ್ನು ಪೋಸ್ಟ್‌ ಮಾಡಿ, ಕೋಮು ಬಣ್ಣ ಬಳಿದು ಮಾಧ್ಯಮಗಳ ಮೇಲೆ ಆರೋಪಿಸಲಾಗಿದೆ ಎಂದು ತಿಳಿದುಬಂದಿದೆ. ಈ ವಿಡಿಯೋ 2 ವರ್ಷ ಹಳೆಯದು. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸಾಲ ಹಿಂದಿರುಗಿಸದ ಆರೋಪದ ಮೇಲೆ ಅಹ್ಮದ್‌ ಎಂಬ ವ್ಯಕ್ತಿ ಮೇಲೆ ಹಲ್ಲೆ ಮಾಡಲಾಗಿತ್ತು. ಹಾಗಾಗಿ ಸದ್ಯ ವೈರಲ್‌ ಆಗಿರುವ ಸುದ್ದಿ ಸುಳ್ಳು.

click me!