ಬೀಜಿಂಗ್(ಏ. 14) ಕೊರೋನಾ ಮಹಾಮಾರಿಯ ಮೂಲ ಬೆಂಕಿ ಕಾಣಿಸಿಕೊಂಡಿದ್ದು ಚೀನಾದಲ್ಲಿ. ಚೀನಾದಲ್ಲಿ ಈ ರೋಗಕ್ಕೆ ಬಲಿಯಾದರವರ ಸಂಖ್ಯೆ ಸಾವಿರಗಳಲ್ಲಿ ಇದೆ. ಇದು ಅಲ್ಲಿನ ಸರ್ಕಾರ ಕೊಟ್ಟ ವರದಿ.
ಚೀನಾ ಸಾವಿನ ಸಂಖ್ಯೆ ಮುಚ್ಚಿಡುತ್ತಿದೆ ಎಂದು ಪದೇ ಪದೇ ಮಾತುಗಳು ಕೇಳಿಬಂದಿದ್ದವು. ಆದರೆ ಇಲ್ಲೊಂದು ಆಘಾತಕಾರಿ ಅಂಶ ಬಹಿರಂಗವಾಗಿದೆ. ಡಿಸೆಂಬರ್ 2019 ರಿಂದ ಮಾರ್ಚ್ 2020ರ ಅವಧಿಯಲ್ಲಿ ಒಟ್ಟು 21 ಮಿಲಿಯನ್ ಜನ ಚೀನಾದಲ್ಲಿ ಕೊರೋನಾಕ್ಕೆ ಬಲಿಯಾಗಿದ್ದಾರೆ!
ಇದು ಸತ್ಯ ಅಲ್ಲ.. ಆನ್ ಲೈನ್ ಆರ್ಟಿಕಲ್ ಒಂದು 21 ಮಿಲಿಯನ್ ಜನ ಸಾವನ್ನಪ್ಪಿದ್ದಾರೆ ಎಂದು ಹರಿದಾಡಿದೆ. ಏಪ್ರಿಲ್ 4 ರಂದು ಇಂಥದ್ದೊಂದು ಸುದ್ದಿ ಪ್ರಕಟವಾಗಿತ್ತು.
ಈ ಸುದ್ದಿ ಕೆಲವೇ ಕ್ಷಣಗಳಲ್ಲಿ ವೈರಲ್ ಆಯಿತು. ವೆಬ್ ತಾಣ ಇದೇ ಸುದ್ದಿಯನ್ನು ಬೇರೆ ಯುಆರ್ ಎಲ್ ಬಳಸಿ ಮತ್ತೆ ಏ. 13 ರಂದು ಪ್ರಕಟ ಮಾಡಿತು.
ಹಳೆಯ ಸುದ್ದಿಯಲ್ಲಿ ಗುಪ್ತಚರ ಇಲಾಖೆ ಮಾಹಿತಿ ಎಂದು ಹೇಳಿದರೆ ಎರಡನೇ ಸಾರಿ ಇದನ್ನು ಚೀನಾ ಆಡಳಿತ ನೀಡಿದ ಮಾಹಿತಿ ಎಂದು ಹೇಳಲಾಯಿತು. ಸೆಲ್ ಪೋನ್ ಕಾಂಟಾಕ್ಟ್ ಗಳು ಕ್ಯಾನ್ಸಲ್ ಮಾಡಿದ್ದನ್ನು ಇದಕ್ಕೆ ಆಧಾರ ನೀಡಲಾಯಿತು.
ಸೆಲ್ ಪೋನ್ ಕಂಪನಿಗಳ ಡೇಟಾ ಮತ್ತು ಹಳೆಯ ವರದಿಯನ್ನು ಆಧರಿಸಿಯೇ ಬರೆದ ಆರ್ಟಿಕಲ್ ಸತ್ಯಕ್ಕೆ ದೂರವಾದದ್ದು ಎಂದು ಫ್ಯಾಕ್ಟ್ ಚೆಕರ್ ಗಳು ದಾಖಲೆ ಮೂಲಕ ಮುಂದಿಟ್ಟರು. ಅಲ್ಲಿಗೆ ಈ ಸುದ್ದಿಗೆ ಒಂದು ಇತಿಶ್ರೀ ಸಿಕ್ಕಿತು.