Fact Check: ರಾಷ್ಟ್ರಗೀತೆ ಹೇಳಿ ಭಾರತಕ್ಕೆ ಧನ್ಯವಾದ ಹೇಳಿದ ಅಮೆರಿಕಾ!

By Kannadaprabha NewsFirst Published Apr 28, 2020, 11:24 AM IST
Highlights

ಕೊರೋನಾ ವಿರುದ್ಧ ಸಮರ ಸಾರಿರುವ ಅಮೆರಿಕಕ್ಕೆ ಭಾರತ ಎಚ್‌ಸಿಕ್ಯು(ಹೈಡ್ರಾಕ್ಸಿಕ್ಲೋರೋಕ್ವಿನ್‌) ಮಾತ್ರೆಗಳನ್ನು ನೀಡಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ವಿದ್ಯಾರ್ಥಿಗಳು ಭಾರತದ ರಾಷ್ಟ್ರಗೀತೆಯನ್ನು ಹಾಡಿ ಧನ್ಯವಾದ ಅರ್ಪಿಸಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜವಾಗಿಯೂ ಅಮೆರಿಕಾ ರಾಷ್ಟ್ರಗೀತೆ ಹಾಡಿತಾ? ಏನಿದರ ಸತ್ಯಾಸತ್ಯತೆ? 

ಕೊರೋನಾ ವಿರುದ್ಧ ಸಮರ ಸಾರಿರುವ ಅಮೆರಿಕಕ್ಕೆ ಭಾರತ ಎಚ್‌ಸಿಕ್ಯು(ಹೈಡ್ರಾಕ್ಸಿಕ್ಲೋರೋಕ್ವಿನ್‌) ಮಾತ್ರೆಗಳನ್ನು ನೀಡಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ವಿದ್ಯಾರ್ಥಿಗಳು ಭಾರತದ ರಾಷ್ಟ್ರಗೀತೆಯನ್ನು ಹಾಡಿ ಧನ್ಯವಾದ ಅರ್ಪಿಸಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಒಂದು ನಿಮಿಷ ಇರುವ ವಿಡಿಯೋದಲ್ಲಿ ಭಾರತದ ರಾಷ್ಟ್ರಗೀತೆ ‘ಜನ ಗಣ ಮನ’ಅವನ್ನು ವಿದೇಶಿ ವಿದ್ಯಾರ್ಥಿಗಳು ಹಾಡಿರುವ ದೃಶ್ಯವಿದೆ. ಈ ವಿಡಿಯೋ ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ಗಳಲ್ಲಿ ವೈರಲ್‌ ಆಗಿದ್ದು, ‘ಭಾರತ ಎಚ್‌ಸಿಕ್ಯು ಮಾತ್ರೆ ನೀಡಿದ್ದಕ್ಕೆ ಅಅಮೆರಿಕ ವಿದ್ಯಾರ್ಥಿಗಳು ಹೀಗೆ ಧನ್ಯವಾದ ಅರ್ಪಿಸಿದ್ದಾರೆ. ಜೈ ಹಿಂದ್‌’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ.

Fact Check: ಇಮಾಮ್‌ ಪಾದ ತೊಳೆಯುವಂತೆ ಶಾಸಕನ ದರ್ಪ!

ಆದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸಿದಾಗ 2017ರ ವಿಡಿಯೋವನ್ನು ಈಗ ಪೋಸ್ಟ್‌ ಮಾಡಿ ಸುಳ್ಳುಸುದ್ದಿ ಹರಡಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. 2017ರಲ್ಲಿ ಅನಿಶಾ ದೀಕ್ಷಿತ್‌ ಎಂಬುವವರು ಭಾರತದ ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ ರಾಷ್ಟ್ರಗೀತೆಯನ್ನು ಹಾಡಿ ಯುಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡಿದ್ದರು. ಆದರೆ ಅಮೆರಿಕನ್ನರು ಹಾಡಿದ್ದಕ್ಕೂ, ಎಚ್‌ಸಿಕ್ಯು ಮಾತ್ರೆಗೂ ಯಾವುದೇ ಸಂಬಂಧ ಇಲ್ಲ.

 

 

Very very moving.
Brought tears to my eyes.
Confirms my belief, 21st Century belongs to India provided it works towards https://t.co/Fy6F3SNzm6

— MadhuPurnima Kishwar (@madhukishwar)

ಕೊರೋನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ಎಚ್‌ಸಿಕ್ಯು ಆ್ಯಂಟಿ ಮಲೇರಿಯಾ ಮಾತ್ರೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸಾಬೀತಾದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್‌ಸಿಕ್ಯೂ ಮಾತ್ರೆ ರಫ್ತು ಮಾಡುವಂತೆ ಭಾರತವನ್ನು ಕೇಳಿಕೊಂಡಿದ್ದರು. ಭಾರತದ ಪ್ರಧಾನಿ ನರೇಂದ್ರ ಮೋದಿ ತಕ್ಷಣೆವೇ ಒಪ್ಪಿ ಮಾತ್ರೆ ಕಳುಹಿಸಿಕೊಟ್ಟಿದ್ದರು. ಭಾರತ ಅಮೆರಿಕಕ್ಕೆ ಮಾತ್ರವಲ್ಲದೆ ವಿಶ್ವದ ಹಲವು ರಾಷ್ಟ್ರಗಳಿಗೆ ಎಚ್‌ಸಿಕ್ಯು ಮಾತ್ರೆಗಳನ್ನು ಒದಗಿಸಿ ಸಂಜೀವಿನಿಯಾಗುತ್ತಿದೆ.

 

- ವೈರಲ್ ಚೆಕ್ 

click me!