ತಳ್ಳುಗಾಡಿಯಲ್ಲಿ ಹಣ್ಣು ಮಾರುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬರು ಹಣ್ಣಿನ ಮೇಲೆ ಮೂತ್ರ ವಿಸರ್ಜಿಸಿದ್ದಾರೆ ಎಂಬ 2 ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಏನೀ ವೀಡಿಯೋನ ಸತ್ಯಾಸತ್ಯತೆ?
ತಳ್ಳುಗಾಡಿಯಲ್ಲಿ ಹಣ್ಣು ಮಾರುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬರು ಹಣ್ಣಿನ ಮೇಲೆ ಮೂತ್ರ ವಿಸರ್ಜಿಸಿದ್ದಾರೆ ಎಂಬ 2 ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಮೊದಲ ವಿಡಿಯೋಗಳಲ್ಲಿ ಹಣ್ಣು ಮಾರುವ ವ್ಯಕ್ತಿ, ಬಸ್ಕಿ ಹೊಡೆಯುತ್ತಾ, ‘ನನ್ನಿಂದ ತಪ್ಪಾಗಿದೆ. ನಾನು ಬಡವ, ನನಗೆ ಹೃದಯ ಸಮಸ್ಯೆ ಇದೆ’ ಎಂದು ಬೇಡಿಕೊಳ್ಳುವ ಮತ್ತು ಹಿನ್ನೆಲೆಯಲ್ಲಿ ವಿಡಿಯೋ ಚಿತ್ರೀಕರಿಸಿರುವ ವ್ಯಕ್ತಿ ಬಾಟಲಿಯಲ್ಲಿ ಮೂತ್ರ ಮಾಡಿ ಹಣ್ಣಿನ ಮೇಲೆ ಚಿಮುಕಿಸಿದ್ದೀಯ ಎಂದು ಹೇಳುವ ಧ್ವನಿ ಇದೆ. ಈ ವಿಡಿಯೋವನ್ನು ಬಿಜೆಪಿ ಮಾಧ್ಯಮ ವಕ್ತಾರ ರೋಹಿತ್ ಚಾಹಲ್ ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ವೈರಲ್ ಆಗುತ್ತಿದೆ.
ये मुल्ला जी बोतल में पेशाब भर के केलो पर छिड़क रहे थे ।। pic.twitter.com/gpmUgFv26G
— ROHIT CHAHAL (@rohit_chahal)
undefined
ಆದರೆ ವಿಡಿಯೋ ಹಿಂದಿನ ಸತ್ಯಾಸತ್ಯ ಬಯಲಿಗೆಳೆದು ಇದು ಕೋಮು ದ್ವೇಷ ಹರಡುವ ಸುಳ್ಳುಸುದ್ದಿ ಎನ್ನುವುದನ್ನು ಸಾಬೀತುಪಡಿಸಿದೆ. ವಿಡಿಯೋದಲ್ಲಿರುವ ‘ಬಿಜ್ನೋರ್’ ಎಂಬ ಧ್ವನಿಯ ಜಾಡು ಹಿಡಿದು ಅಲ್ಲಿನ ಪೊಲೀಸ್ ಇಲಾಖೆ ಸಂಪರ್ಕಿಸಿದಾಗ ವಾಸ್ತವ ಬಯಲಾಗಿದೆ.
बिजनौर UP में बोलतों में पेशाब कर के फलों पर छिड़कते पकड़ा गया एक जेहादी.. पोल खुलने के बाद शुरू हो गया था विक्टिम कार्ड.
बहकावे में मत आइए.. न वामपंथी पोर्टलों के और न ही हिन्दू विरोधी फैक्ट चेकरो के..
जो भी हम दावा कर रहे, वो शत प्रतिशत सत्य है.. pic.twitter.com/mEgo0LwSna
और ज़रा इन बाबा के भी कारनामे देखो ...ये बेचारे बाबा सिर्फ़ बोतल में पेसाब कर उसे केले के ऊपर छिड़क रहें थे ..
फिर भी पुलिस बड़े अदब से पेश आ रही है..
कोई ज़रा आरती की थली लाना ..बाबा की आरती करनी है क्योंकि कुछ अन्यथा बोलो तो फिर ISLAMOPHOBIA की complaint कर देंगे Gulf में!! pic.twitter.com/SwzdfFJXm7
ಏ.20 ರಂದು ಹಣ್ಣು ವ್ಯಾಪಾರಿಯೊಬ್ಬರು ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜಿಸಿ, ಗಾಡಿಯಲ್ಲಿದ್ದ ನೀರಿನ ಬಾಟಲಿಯಿಂದ ಕೈ ತೊಳೆದುಕೊಂಡಿದ್ದಾರೆ. ಬಳಿಕ ಅದೇ ನೀರನ್ನು ಹಣ್ಣಿನ ಮೇಲೂ ಚಿಮುಕಿಸಿದ್ದಾರೆ. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡ ಸ್ಥಳೀಯರು ಬಾಟಲಿಯಲ್ಲಿ ಮೂತ್ರ ವಿಸರ್ಜಿಸಿ ಹಣ್ಣಿನ ಮೇಲೆ ಚೆಲ್ಲಿದ್ದಾರೆ ಎಂದು ಆರೋಪ ಮಾಡಿದ್ದರು.
ಇದೇ ಕಾರಣದಿಂದ ಹಣ್ಣು ವ್ಯಾಪಾರಿಯನ್ನು ಮೊದಲು ಬಂಧಿಸಲಾಗಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ವಿಡಿಯೋವನ್ನು ಹರಿಬಿಟ್ಟು ಸುಳ್ಳುಸುದ್ದಿ ಹರಡಿದವರಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.