Fact Check: ಮೂರು ಕಣ್ಣಿನ ಮಗು ಜನನ, ಸ್ವಾಮೀಜಿಯ ಕಾಲಜ್ಞಾನ ನಿಜವಾಯ್ತಾ?

By Suvarna NewsFirst Published Jul 18, 2020, 11:23 AM IST
Highlights

ಮೂರು ಕಣ್ಣಿರುವ ಮಗುವಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗುತ್ತಿದೆ. 15 ಸೆಕೆಂಡ್‌ಗಳಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಕಾರಿನಲ್ಲಿ ಕುಳಿತಿರುವ ಮಗುವೊಂದನ್ನು ಮಾತನಾಡಿಸುತ್ತಿದ್ದಾರೆ. ಆ ಮಗುವಿನ ಹಣೆಯ ಮೇಲೂ ಕಣ್ಣಿರುವ ದೃಶ್ಯವಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? ಇಲ್ಲಿದೆ ನೋಡಿ..!

ಮೂರು ಕಣ್ಣಿರುವ ಮಗುವಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗುತ್ತಿದೆ. 15 ಸೆಕೆಂಡ್‌ಗಳಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಕಾರಿನಲ್ಲಿ ಕುಳಿತಿರುವ ಮಗುವೊಂದನ್ನು ಮಾತನಾಡಿಸುತ್ತಿದ್ದಾರೆ. ಆ ಮಗುವಿನ ಹಣೆಯ ಮೇಲೂ ಕಣ್ಣಿರುವ ದೃಶ್ಯವಿದೆ. ಈ ವಿಡಿಯೋವನ್ನು ಪೋಸ್ಟ್‌ ಮಾಡಿ, ‘ಜರ್ಮನಿಯಲ್ಲಿ ಮೂರು ಕಣ್ಣುಗಳಿರುವ ಮಗು ಜನಿಸಿದೆ’ ಎಂಬ ಒಕ್ಕಣೆ ಬರೆಯಲಾಗಿದೆ. ಇದೀಗ ಫೇಸ್‌ಬುಕ್‌, ಟ್ವೀಟರ್‌ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

 

A child born in Germany with three eyes pic.twitter.com/nMn8YQ99Ih

— कुसुम राणा खत्री 7🚩🚩🚩🚩🚩 (@KusumRanaKhat10)

ಕೆಲವರು ತೆಲುಗು ಭಾಷೆಯಲ್ಲಿ ‘ವಿಚಿತ್ರ ಮಗು: ವಿದೇಶದಲ್ಲಿ ವಿಚಿತ್ರ ಮಗು ಜನನವಾಗಲಿದೆ ಎಂದು 19ನೇ ಶತಮಾನದಲ್ಲಿ ಆಂಧ್ರಪ್ರದೇಶದ ಸ್ವಾಮೀಜಿ ಪೋತುಲುರಿ ವೀರ ಬ್ರಹ್ಮೇಂದ್ರ ಸ್ವಾಮಿ ತಮ್ಮ ‘ಕಾಲಜ್ಞಾನ’ ಪುಸ್ತಕದಲ್ಲಿ ಊಹಿಸಿದ್ದರು. ಈ ಬಗ್ಗೆ ಮೊದಲೇ ಹೇಳಿದ್ದರು’ ಎಂಬ ಒಕ್ಕಣೆ ಬರೆದು ಮುಕ್ಕಣ್ಣ ಮಗುವಿನ ವಿಡಿಯೋವನ್ನು ಶೇರ್‌ ಮಾಡುತ್ತಿದ್ದಾರೆ.

Fact Check:ಗ್ಯಾಂಗ್‌ಸ್ಟರ್ ದುಬೆ ಜೊತೆ ಸಂಬಿತ್ ಪಾತ್ರ ಡ್ಯಾನ್ಸ್‌!

ಆದರೆ ನಿಜಕ್ಕೂ ಜರ್ಮನಿಯಲ್ಲಿ ಮುಕ್ಕಣ್ಣ ಮಗು ಜನಿಸಿದೆಯೇ ಎಂದು ಸುದ್ದಿಸಂಸ್ಥೆಯೊಂದು ಪರಿಶೀಲಿಸಿದಾಗ ವೈರಲ್‌ ವಿಡಿಯೋ ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿರುವಂಥದ್ದು ಎಂದು ತಿಳಿದುಬಂದಿದೆ. ಮಗುವಿನ ಎಡ ಕಣ್ಣನ್ನೇ ಹಣೆಯ ಮೇಲೇ ಸೂಪರ್‌ ಇಂಪೋಸ್‌ ಮಾಡಿ ಎಡಿಟ್‌ ಮಾಡಲಾಗಿದೆ. ಸೂಕ್ಷ್ಮವಾಗಿ ಗಮನಿಸಿದರೆ ಎಡಗಣ್ಣಿನ ಚಲನೆಗೂ ಹಣೆಯ ಮೇಲಿರುವ ಕಣ್ಣಿನ ಚಲನೆಗೂ ಸಾಮ್ಯತೆ ಕಂಡುಬರುತ್ತದೆ. ಹಾಗಾಗಿ ಜರ್ಮನಿಯಲ್ಲಿ ಮೂರು ಕಣ್ಣಿನ ಮಗು ಜನಿಸಿದೆ, ಜಗತ್ತಿಗೆ ಅಪಾಯ ಕಾದಿದೆ ಎಂಬ ಸುದ್ದಿ ಸುಳ್ಳು. ಇದೊಂದು ಡಿಜಿಟಲ್‌ ಕ್ರಿಯೇಷನ್‌.

click me!