
ಸವೋಚ್ಚ ನ್ಯಾಯಾಲಯ ‘ಸತ್ಯಮೇವ ಜಯತೇ’ (ಸತ್ಯಕ್ಕೇ ಜಯ) ಎಂಬ ತನ್ನ ಧ್ಯೇಯವಾಕ್ಯವನ್ನು ಬದಲಿಸಿ ‘ಯಥೋ ಧರ್ಮಸ್ಥತೋ ಜಯಃ’ (ಧರ್ಮ ಇರುವೆಡೆ ಜಯ) ಎಂಬ ಹೊಸ ಧ್ಯೇಯವಾಕ್ಯವನ್ನು ಅಳವಡಿಸಿಕೊಂಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕುರಿತಂತೆ ಎರಡು ಫೋಟೋಗಳನ್ನು ಫೋಸ್ಟ್ ಮಾಡಿ ಹೀಗೆ ಹೇಳಲಾಗುತ್ತಿದೆ. ಒಂದು ಚಿತ್ರದಲ್ಲಿ ಅಶೋಕ ಚಕ್ರದ ಕೆಳಭಾಗದಲ್ಲಿ ಸತ್ಯಮೇವ ಜಯತೇ ಎಂದಿದ್ದರೆ, ಇನ್ನೊಂದು ಚಿತ್ರದಲ್ಲಿ ಅಶೋಕ ಚಕ್ರದ ಕೆಳಗೆ ಯಥೋ ಧರ್ಮಸ್ಥತೋ ಜಯಃ ಎಂದಿದೆ.
ಆದರೆ ನಿಜಕ್ಕೂ ಸುಪ್ರೀಂಕೋರ್ಟ್ ತನ್ನ ಧ್ಯೇಯವಾಕ್ಯ ಬದಲಿಸಿತೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ, ಯಥೋ ಧರ್ಮಸ್ಥತೋ ಜಯಃ ಎಂಬುದೇ ಸುಪ್ರೀಂಕೋರ್ಟ್ ಧ್ಯೇಯವಾಕ್ಯ ಎಂಬುದು ಖಚಿತವಾಗಿದೆ. ಸುಪ್ರೀಂಕೋರ್ಟಿನ ಅಧಿಕೃತ ವೆಬ್‌ಸೈಟ್ ಪರಿಶೀಲಿಸಿದಾಗ ಧ್ಯೇಯವಾಕ್ಯ ಬದಲಿಸಿದ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
Fact Check: ನೆಹರೂಗೆ ತಲೆಬಾಗಿ ನಮಿಸಿದ್ರಾ ಮೋದಿ?
ಆದರೆ ವೆಬ್‌ಸೈಟ್‌ನ ಹೋಂ ಪೇಜ್‌ನಲ್ಲಿ ಸುಪ್ರೀಂಕೋರ್ಟ್ ಆಫ್ ಇಂಡಿಯಾ ಎಂಬುದರ ಕೆಳಗೆ ಯಥೋ ಧರ್ಮಸ್ಥತೋ ಜಯಃ ಎಂದಿರುವುದು ಕಂಡುಬಂದಿದೆ. ಆದರೆ ಇದು ಇತ್ತೀಚೆಗೆ ಬದಲಾಗಿದ್ದೇ ಎಂದು ಕೂಲಂಕಷವಾಗಿ ಪರೀಕ್ಷಿಸಿದಾಗ ಸುಪ್ರೀಂಕೋರ್ಟ್ ಎಂದೂ ತನ್ನ ಧ್ಯೇಯವಾಕ್ಯ ಬದಲಿಸಿಲ್ಲ. ಅಂದೂ, ಇಂದೂ ‘ಯಥೋ ಧರ್ಮಸ್ಥತೋ ಜಯಃ’ ಎನ್ನುವುದೇ ಅದರ ಧ್ಯೇಯವಾಕ್ಯ ಎಂಬುದು ಸ್ಪಷ್ಟವಾಗಿದೆ. ಸತ್ಯಮೇವ ಜಯತೇ ಎಂಬುದು ಭಾರತ ಸರ್ಕಾರದ ಧ್ಯೇಯ ವಾಕ್ಯ.