Fact Check| ಪಾಕ್‌ಗೆ ರಷ್ಯಾ ಕೋವಿಡ್‌ ಲಸಿಕೆ ಗಿಫ್ಟ್‌!

By Suvarna News  |  First Published Aug 23, 2020, 9:35 AM IST

ರಷ್ಯಾ ಪಾಕಿಸ್ತಾನಕ್ಕೆ 10 ಲಕ್ಷ ಡೋಸ್‌ ಲಸಿಕೆಯನ್ನು ಕೊಡುಗೆಯಾಗಿ ನೀಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇದು ನಿಜಾಣಾ? ಇಲ್ಲಿದೆ ವಿವರ


ನವದೆಹಲಿ(ಆ.23): ಕೊರೋನಾ ವೈರಸ್‌ ವ್ಯಾಪಕವಾಗಿ ಜಗತ್ತಿನಾದ್ಯಂತ ಹರಡುತ್ತಿರುವ ನಡುವೆಯೇ ರಷ್ಯಾ ಕೊರೋನಾ ವಿರುದ್ಧದ ಜಗತ್ತಿನ ಮೊಟ್ಟಮೊದಲ ಲಸಿಕೆಯನ್ನು ಅಭಿವೃದ್ಧಿಪಡಿಸಿರುವುದಾಗಿ ಇತ್ತೀಚೆಗಷ್ಟೆಘೋಷಿಸಿತ್ತು. ಅದರ ಬೆನ್ನಲ್ಲೇ ಪಾಕಿಸ್ತಾನಕ್ಕೆ 10 ಲಕ್ಷ ಡೋಸ್‌ ಲಸಿಕೆಯನ್ನು ಕೊಡುಗೆಯಾಗಿ ನೀಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

Fact Check| 27 ವರ್ಷ ಬಳಿಕ ಶಿಕ್ಷಕಿ ಭೇಟಿ ಆದ ಪಿಚೈ!

Tap to resize

Latest Videos

undefined

ರಷ್ಯಾ ಅಧ್ಯಕ್ಷ ಮತ್ತು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಇರುವ ಫೋಟೋವನ್ನು ಪೋಸ್ಟ್‌ ಮಾಡಿ, ‘ಚೀನಾ ಬಳಿಕ ರಷ್ಯಾ ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ 10 ಲಕ್ಷ ಡೋಸ್‌ ಲಸಿಕೆಯನ್ನು ಕೊಡುಗೆ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಲಸಿಕೆಯ ಮೂರನೇ ಹಂತದ ಪರೀಕ್ಷೆಗೆಂದು ಪಾಕಿಸ್ತಾನಕ್ಕೆ ಕಳಿಸಿಕೊಡಲಾಗುತ್ತಿದೆ. ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಇದನ್ನು ರಾಜತಾಂತ್ರಿಕ ವಿಜಯ ಎಂದು ಹೇಳಿಕೊಂಡಿದ್ದಾರೆ’ ಎನ್ನಲಾಗಿದೆ.

ಆದರೆ ಈ ಸುದ್ದಿ ನಿಜವೇ ಎಂದು ಆಲ್ಟ್‌ ನ್ಯೂಸ್‌ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ, ವಿಡಂಬನಾತ್ಮಕ ವೆಬ್‌ಸೈಟ್‌ವೊಂದು ಪ್ರಕಟಿಸಿದ್ದ ಸುಳ್ಳು ವರದಿಯನ್ನೇ ನಿಜ ಎಂದು ನಂಬಿ ಅದನ್ನೇ ಯಥಾವತ್ತಾಗಿ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿಬಿಡಲಾಗಿದೆ ಎಂದು ತಿಳಿದುಬಂದಿದೆ.

ಅಲ್ಲದೆ ರಷ್ಯಾ ಲಸಿಕೆಯ ಮೂರನೇ ಹಂತದ ಪರೀಕ್ಷೆ ಆಗಸ್ಟ್‌ 12ರಲ್ಲೇ ಮುಗಿದಿದೆ. ಜೊತೆಗೆ ಲಸಿಕೆ ಅಭಿವೃದ್ಧಿಪಡಿಸಿರುವ ರಷ್ಯಾ ಇನ್ನೂ ಬೃಹತ್‌ ಪ್ರಮಾಣದಲ್ಲಿ ಉತ್ಪಾದನೆಯನ್ನೇ ಆರಂಭಿಸಿಲ್ಲ. ರಷ್ಯಾದ ವೆಬ್‌ಸೈಟ್‌ಗಳ ಪ್ರಕಾರ, ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್‌ ಲಸಿಕೆಯ ಬೃಹತ್‌ ಉತ್ಪಾದನೆ ಸೆಪ್ಟೆಂಬರ್‌ ತಿಂಗಳಿನಿಂದ ಆರಂಭವಾಗಲಿದೆ. ಹಾಗಾಗಿ ವೈರಲ್‌ ಸುದ್ದಿ ಸುಳ್ಳು.

click me!