ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಜೂನ್ 1ರಿಂದ ಸಮ-ಬೆಸ ಸಂಖ್ಯೆಯಾಧರಿಸಿ ಶಾಲಾ ಕಾಲೇಜುಗಳನ್ನು ಆರಂಭಿಸಿ. ಬೆಸ ಸಂಖ್ಯೆಯ ದಿನದಂದು ಶಿಕ್ಷಕರು ಶಾಲೆಗೆ ಬರಲಿ, ಸಮ ಸಂಖ್ಯೆಯ ದಿನ ಮಕ್ಕಳು ಶಾಲೆಗೆ ಬರಲಿ’ ಎಂದು ಟ್ವೀಟ್ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಶಾಲಾ-ಕಾಲೇಜುಗಳು ಬಂದ್ ಆಗಿವೆ. ಕೊರೋನಾ ದಿನೇ ದಿನೇ ವ್ಯಾಪಕ ಸ್ವರೂಪ ಪಡೆಯುತ್ತಿರುವಾಗ ಶೈಕ್ಷಣಿಕ ಚಟುವಟಿಕೆ ಪುನಾರಂಭ ಹೇಗೆ ಎಂಬುದೇ ಎಲ್ಲಾ ಸರ್ಕಾರಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಹೀಗಿರುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಜೂನ್ 1ರಿಂದ ಸಮ-ಬೆಸ ಸಂಖ್ಯೆಯಾಧರಿಸಿ ಶಾಲಾ ಕಾಲೇಜುಗಳನ್ನು ಆರಂಭಿಸಿ. ಬೆಸ ಸಂಖ್ಯೆಯ ದಿನದಂದು ಶಿಕ್ಷಕರು ಶಾಲೆಗೆ ಬರಲಿ, ಸಮ ಸಂಖ್ಯೆಯ ದಿನ ಮಕ್ಕಳು ಶಾಲೆಗೆ ಬರಲಿ’ ಎಂದು ಟ್ವೀಟ್ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
undefined
ಈ ಟ್ವೀಟ್ ಕುರಿತ ವೈರಲ್ ಸ್ಕ್ರೀನ್‌ಶಾಟ್ ಜಾಡು ಹಿಡಿದು ಪರಿಶೀಲಿಸಿದಾಗ, ರಾಹುಲ್ ಗಾಂಧಿ ಮೇ 22ರಂದು ಇಂಥ ಟ್ವೀಟ್ ಮಾಡಿಲ್ಲ. ಟ್ವೀಟರ್‌ನಲ್ಲಿ ಕಾಮೆಂಟ್ ಮಾಡುವಾಗಲೂ ಈ ಸಲಹೆ ನೀಡಿಲ್ಲ. ಹಾಗೆಯೇ ಯಾವುದೇ ಮುಖ್ಯವಾಹಿನಿ ಮಾಧ್ಯಮಗಳೂ ಈ ಬಗ್ಗೆ ವರದಿ ಮಾಡಿಲ್ಲ ಎಂದು ತಿಳಿದುಬಂದಿದೆ.
Fact Check: ಮೋದಿ ವಿಶ್ವ ಆರೋಗ್ಯ ಸಂಸ್ಥೆ ಚೇರ್‌ಮನ್?
ಅವರ ಹೆಸರಿನಲ್ಲಿ ಯಾರೋ ನಕಲಿ ಟ್ವೀಟ್ ಮಾಡಿದ್ದಾರೆ. ಹಾಗಾಗಿ ಇದು ಸುಳ್ಳುಸುದ್ದಿ ಎಂಬುದು ಸ್ಪಷ್ಟ. ಕೊರೋನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ವಲಸಿಗರ ಕಷ್ಟಆಲಿಸುತ್ತಾ, ವಿವಿಧ ಅರ್ಥಶಾಸ್ತ್ರಜ್ಞರೊಂದಿಗೆ ಚರ್ಚೆ ನಡೆಸುವ ಜೊತೆಗೆ ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಏನು ಮಾಡಬಹುದೆಂಬ ಬಗ್ಗೆ ಸಲಹೆಯನ್ನೂ ನೀಡುತ್ತಿದ್ದಾರೆ.
- ವೈರಲ್ ಚೆಕ್