Fact Check: ದೇಶದ ಪ್ರತಿ ನಾಗರಿಕನಿಗೂ ಲಾಕ್‌ಡೌನ್‌ ಪರಿಹಾರ ನಿಧಿಯಾಗಿ 5000 ರೂ?

By Suvarna NewsFirst Published May 26, 2020, 9:27 AM IST
Highlights

ಕೊರೋನಾ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್‌ ಹೇರಿದೆ. ಹಾಗಾಗಿ ದೇಶದ ಪ್ರತಿ ನಾಗರಿಕರಿಗೂ ಉಚಿತವಾಗಿ ಲಾಕ್‌ಡೌನ್‌ ಪರಿಹಾರ ನಿಧಿಯಾಗಿ 5000 ರು.ಗಳನ್ನು ನೀಡುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

ಕೊರೋನಾ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್‌ ಹೇರಿದೆ. ಹಾಗಾಗಿ ದೇಶದ ಪ್ರತಿ ನಾಗರಿಕರಿಗೂ ಉಚಿತವಾಗಿ ಲಾಕ್‌ಡೌನ್‌ ಪರಿಹಾರ ನಿಧಿಯಾಗಿ 5000 ರು.ಗಳನ್ನು ನೀಡುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

Fact Check: ಚೌಕಿದಾರ್‌ ಚೋರ್‌ ಎಂದು ಮೋದಿಗೆ ಸ್ವಾಗತ!

ಸಂದೇಶದ ಜೊತೆಗೆ ಲಿಂಕ್‌ವೊಂದನ್ನು ಲಗತ್ತಿಸಿ, ‘ಕೊನೆಗೂ ಕೇಂದ್ರ ಸರ್ಕಾರ ದೇಶದ ಪ್ರತಿ ಪ್ರಜೆಗೂ 5000 ರು. ಲಾಕ್‌ಡೌನ್‌ ಪರಿಹಾರ ಧನ ನೀಡುತ್ತಿದೆ. ಕೆಳಗಿನ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಹಣ ಪಡೆದುಕೊಳ್ಳಿ. ವಿ.ಸೂ: ಒಬ್ಬರು ಒಮ್ಮೆ ಮಾತ್ರ ಹಣ ಪಡೆಯಬಹುದು. ಹಾಗೆಯೇ ಕೆಲವೇ ಕೆಲವರು ಮಾತ್ರ ಈ ಸೌಲಭ್ಯ ಪಡೆಯಬಹುದು’ ಎಂದು ಹೇಳಲಾಗಿದೆ. ಈ ಸಂದೇಶ ಫೇಸ್‌ಬುಕ್‌, ಟ್ವೀಟರ್‌ನಲ್ಲಿ ವೈರಲ್‌ ಆಗುತ್ತಿದೆ.

ಆದರೆ ಈ ಸಂದೇಶದ ಸತ್ಯಾಸತ್ಯ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ. ಏಕೆಂದರೆ ಮೊದಲನೆಯದಾಗಿ ಇಲ್ಲಿ ಉಲ್ಲೇಖಿಸಿರುವ ವೆಬ್‌ಸೈಟ್‌ ನಕಲಿ. ವೆಬ್‌ಸೈಟ್‌ ತೆರೆದಾಗ 1936 ಲಾಕ್‌ಡೌನ್‌ ಪ್ಯಾಕೇಜ್‌ ಮಾತ್ರ ಬಾಕಿ ಉಳಿದಿವೆ ಎಂದು ತೋರಿಸುತ್ತದೆ. ಆದರೆ ಈ ಸಂಖ್ಯೆ ಎಷ್ಟೇ ಸಮಯವಾದರೂ ಬದಲಾಗುವುದಿಲ್ಲ. ವೆಬ್‌ಸೈಟಿನಲ್ಲಿ ಎಲ್ಲಾ ರೀತಿಯ ಸಮೀಕ್ಷೆ ನಡೆಸಿದ ಬಳಿಕ ಇದನ್ನು ಕನಿಷ್ಠ 7 ವಾಟ್ಸ್‌ಆ್ಯಪ್‌ ಗ್ರೂಪಿನಲ್ಲಿ ಶೇರ್‌ ಮಾಡುವುದು ಕಡ್ಡಾಯ ಎಂಬ ಸೂಚನೆ ಬರುತ್ತದೆ.

ಅಲ್ಲಿಗೆ ಇದೊಂದು ನಕಲಿ ವೆಬ್‌ಸೈಟ್‌, ಸರ್ಕಾರದ ಅಧಿಕೃತ ವೆಬ್‌ಸೈಟ್‌ ಅಲ್ಲ ಎಂಬುದು ಸ್ಪಷ್ಟ. ಅಲ್ಲದೆ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಇಂಥದ್ದೇ ಸಂದೇಶ ಕೀನ್ಯಾ ದೇಶದಲ್ಲೂ ವೈರಲ್‌ ಆಗಿತ್ತು ಎಂದು ತಿಳಿದುಬಂದಿದೆ.

- ವೈರಲ್ ಚೆಕ್ 

click me!