ಪ್ರಧಾನಿ ನರೇಂದ್ರ ಮೋದಿ ಭಾರತದ ಮೊಟ್ಟಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರಿಗೆ ತಲೆಬಾಗಿ ನಮಸ್ಕರಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದೆ. ನಿಜನಾ ಈ ಸುದ್ದಿ..?
ನವದೆಹಲಿ (ನ. 26): ಪ್ರಧಾನಿ ನರೇಂದ್ರ ಮೋದಿ (PM Modi) ಭಾರತದ ಮೊಟ್ಟಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು (Jawaharlal Neharu) ಅವರಿಗೆ ತಲೆಬಾಗಿ ನಮಸ್ಕರಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದೆ.
Fact Check: ಬಿಜೆಪಿ ಚಿಹ್ನೆಯ ಟಿ-ಶರ್ಟ್ ಧರಿಸಿದ್ದ ಬಾಲಕನ ಜೊತೆ ರಾಹುಲ್ ಗಾಂಧಿ.?
undefined
ನೆಟ್ಟಿಗರು ‘ಎಂಥಾ ಸುಂದರ ಚಿತ್ರ’ ಇದು ಎಂದು ವಿಡಂಬನಾತ್ಮಕವಾಗಿ ಒಕ್ಕಣೆ ಬರೆದು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಫೋಟೋವನ್ನು ಪೋಸ್ಟ್ ಮಾಡಿ, ‘ಧನ್ಯವಾದ ನೆಹರು ಜಿ. ನೀವೇ ನಮ್ಮ ರಕ್ಷಕ!’ ಎಂದು ಮೋದಿ ಹೇಳಿದಂತೆ ಬರೆದುಕೊಂಡಿದ್ದಾರೆ.
ಆದರೆ ನಿಜಕ್ಕೂ ಪ್ರಧಾನಿ ಮೋದಿ ನೆಹರು ಅವರಿಗೆ ತಲೆಬಾಗಿ ನಮಸ್ಕರಿಸಿದ್ದರೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪಿತ ಮಹಾತ್ಮ ಗಾಂದೀಜಿ ಅವರ ಪ್ರತಿಮೆಗೆ ತಲೆಬಾಗಿ ನಮಸ್ಕರಿಸುವ ಚಿತ್ರವಿದೆ.
Sharing some glimpses from the newly inaugurated Rashtriya Swachhata Kendra. pic.twitter.com/bhGF3saejr
— Narendra Modi (@narendramodi)ಆಗಸ್ಟ್ 8, 2020ರಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಈ ಪೋಟೋವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದರು. ಇದೇ ಫೋಟೋವನ್ನೇ ಬಳಸಿಕೊಂಡು ಗಾಂಧಿ ಜಾಗದಲ್ಲಿ ನೆಹರು ಪ್ರತಿಮೆ ಇರುವಂತೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣ ಹಂಚಿಕೊಳ್ಳಲಾಗಿದೆ. ಹೀಗಾಗಿ ವೈರಲ್ ಸುದ್ದಿ ಸುಳ್ಳು.
- ವೈರಲ್ ಚೆಕ್