ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಬೇಕೆಂಬ ಆಕಾಂಕ್ಷಿಗಳಿಗೆ ಉದ್ಯೋಗ ನೇಮಕಾತಿ ಪತ್ರ ಬಂದಿದೆ. ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ‘ಗುಮಾಸ್ತ’ ಹುದ್ದೆಯನ್ನು ನೀಡಲಾಗಿದೆ. ನಿಜನಾ ಈ ಸುದ್ದಿ..?
ಬೆಂಗಳೂರು (ಅ. 29): ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಬೇಕೆಂಬ ಆಕಾಂಕ್ಷಿಗಳಿಗೆ ಉದ್ಯೋಗ ನೇಮಕಾತಿ ಪತ್ರ ಬಂದಿದೆ. ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ‘ಗುಮಾಸ್ತ’ ಹುದ್ದೆಯನ್ನು ನೀಡಲಾಗಿದೆ. ಈ ಕುರಿತು ಆದೇಶಪತ್ರವನ್ನೂ ನೀಡಲಾಗಿದೆ. ನಿಮ್ಮ ಕೌಶಲ ಮತ್ತು ಹಿನ್ನೆಲೆ ನಮ್ಮ ತಂಡಕ್ಕೆ ಆಸ್ತಿಯಾಗಬಲ್ಲದು ಎಂಬ ನಂಬಿಕೆ ನಮಗಿದೆ ಎಂದು ಪತ್ರದ ಆರಂಭದಲ್ಲಿ ಹೇಳಲಾಗಿದೆ. ಪತ್ರದ ಒಂದು ಬದಿಗೆ ರೈಲ್ವೆ ಸಚಿವಾಲಯ, ಭಾರತ ಸರ್ಕಾರ ಬೆಂಗಳೂರು ಎಂದು ಅಚ್ಚು ಮಾಡಲಾಗಿದೆ.
Fact Check: ಪಶ್ಚಿಮ ಬಂಗಾಳ: ದುರ್ಗಾಪೂಜೆ ಪೆಂಡಾಲ್‌ನಲ್ಲಿ ನಮಾಜ್ ಮಾಡಲಾಯ್ತಾ.?
undefined
ಈ ಪತ್ರ ವೈರಲ್ ಆದ ಬೆನ್ನಲ್ಲೇ ಕೇಂದ್ರ ಸರ್ಕಾರದ ನೋಡಲ್ ಸಂಸ್ಥೆ ಪಿಐಬಿ ಇದು ನಕಲಿ ಪತ್ರ ಎಂದು ಸ್ಪಷ್ಟನೆ ನೀಡಿದೆ.
An offer letter issued in the name of the Ministry of Railways claims that the applicant has been appointed for the post of clerk
▶️This letter is .
▶️Jobs in railways are offered only on passing examinations conducted by through its 21 RRBs. pic.twitter.com/laOlR1knzX
ರೈಲ್ವೆ ಇಲಾಖೆಗೆ ನೇಮಕಾತಿಗಾಗಿ ರೈಲ್ವೆಎಂಇಂಡಿಯಾ ವಿವಿಧ ಹಂತದಲ್ಲಿ ಪರೀಕ್ಷೆ ನಡೆಸುತ್ತದೆ. ಪರೀಕ್ಷೆಯ ಫಲಿತಾಂಶಕ್ಕೆ ಅನುಗುಣವಾಗಿ ನೇಮಕಾತಿ ನಡೆಯುತ್ತದೆ. ಈ ನೇಮಕಾತಿ ಕುರಿತ ಸೂಚನೆಗಳನ್ನು ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೈಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದೆ.
- ವೈರಲ್ ಚೆಕ್