ಪೂರ್ವ ಲಡಾಖ್ ಗಡಿ ವಿಚಾರವಾಗಿ ಭಾರತ-ಚೀನಾ ನಡುವೆ ಹಿಂಸಾತ್ಮಕ ಘರ್ಷಣೆ ಏರ್ಪಟ್ಟು ಚೀನಾ 20 ಭಾರತೀಯ ಯೋದರನ್ನು ಹತ್ಯೆಗೈದ ಬೆನ್ನಲ್ಲೇ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಉಭಯ ದೇಶಗಳು ಸೇನೆಯನ್ನು ನಿಯೋಜಿಸುತ್ತಿವೆ. ಈ ನಡುವೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸೈನಿರನ್ನು ಉದ್ದೇಶಿಸಿ ಲಡಾಖ್‌ನ ಗಲ್ವಾನ್ ಕಣಿಯಲ್ಲಿ ನಿಂತು ಭಾಷಣ ಮಾಡಿದ್ದರು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ?
ಪೂರ್ವ ಲಡಾಖ್ ಗಡಿ ವಿಚಾರವಾಗಿ ಭಾರತ-ಚೀನಾ ನಡುವೆ ಹಿಂಸಾತ್ಮಕ ಘರ್ಷಣೆ ಏರ್ಪಟ್ಟು ಚೀನಾ 20 ಭಾರತೀಯ ಯೋದರನ್ನು ಹತ್ಯೆಗೈದ ಬೆನ್ನಲ್ಲೇ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಉಭಯ ದೇಶಗಳು ಸೇನೆಯನ್ನು ನಿಯೋಜಿಸುತ್ತಿವೆ.
Fact Check: ಚೀನಾ ಆ್ಯಪ್‌ಗಳಿಗೆ ಗೇಟ್‌ಪಾಸ್?
undefined
ಈ ನಡುವೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸೈನಿರನ್ನು ಉದ್ದೇಶಿಸಿ ಲಡಾಖ್‌ನ ಗಲ್ವಾನ್ ಕಣಿಯಲ್ಲಿ ನಿಂತು ಭಾಷಣ ಮಾಡಿದ್ದರು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇಂದಿರಾ ಗಾಂಧಿ ಹಿಮಾಲಯದಲ್ಲಿ ನಿಂತು ಭಾಷಣ ಮಾಡುತ್ತಿರುವ ಕಪ್ಪು-ಬಿಳುಪು ಚಿತ್ರವನ್ನು ಪೋಸ್ಟ್ ಮಾಡಿ ಹೀಗೆ ಹೇಳಲಾಗುತ್ತಿದೆ. ಈ ಮೂಲಕ ಕಚ್ಚೆದೆಯ ಪ್ರಧಾನಿ ಇಂದಿರಾ ಗಾಂಧಿ ಚೀನಾದ ಯಾವ ಆಕ್ಷೇಪ, ಬೆದರಿಕೆಗೂ ಬಗ್ಗದೆ ಗಲ್ವಾನ್ ಕಣಿವೆಯಲ್ಲೇ ಭಾರತೀಯ ಸೇನೆಯನ್ನು ಉದ್ದೇಶಿಸಿ ಭಾಷಣ ಮಾಡಿ ಚೀನಾಗೆ ತಿರುಗೇಟು ನೀಡಿದ್ದರು ಎಂದು ಹೇಳಲಾಗುತ್ತಿದೆ. ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
Indira Gandhi addressing Army jawans at Galwan Valley, Ladakh pic.twitter.com/y7BOdlpI8M
— Indira Gandhi (@indira_gandhi1)ಆದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸಿದಾಗ, ಮಾಜಿ ಪ್ರಧಾನಿ ಇಂದಿರಾ ಗಾಂಧಿ 1971ರಲ್ಲಿ ಲಡಾಖ್‌ನ ಲೇಹ್‌ನಲ್ಲಿ ಸೈನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಲೇಹ್‌ಗೂ ಗಲ್ವಾನ್ ಕಣಿವೆಗೂ 220 ಕಿ.ಮೀ ಅಂತರವಿದೆ. ಹಾಗಾಗಿ ಇಂದಿರಾ ಗಾಂಧಿ ಗಲ್ವಾನ್ ಕಣಿವೆಯಲ್ಲಿ ನಿಂತು ಭಾಷಣ ಮಾಡಿದ್ದರು ಎಂದು ಹೇಳಲಾದ ಸಂದೇಶ ಸುಳ್ಳು ಎಂಬುದು ಸ್ಪಷ್ಟ.
- ವೈರಲ್ ಚೆಕ್