Fact Check: ಚೀನಾದಿಂದ ಮಾನವ ಮಾಂಸ ರಫ್ತು?

By Suvarna News  |  First Published Jun 12, 2020, 9:22 AM IST

ತನ್ನ ವೈಯಕ್ತಿಕ ಲಾಭಕ್ಕಾಗಿ ಎಂಥ ಕೀಳುಮಟ್ಟಕ್ಕಾದರೂ ಇಳಿಯುವ ಚೀನಾ ಇದೀಗ ಮಾನವನ ದೇಹದ ಭಾಗಗಳನ್ನೇ ಉಪಯೋಗಿಸಿ ಕಾರ್ನ್‌ಡ್‌ ಬೀಫ್‌ (ಮಾಂಸಾಹಾರಿ ಖಾದ್ಯ) ತಯಾರಿಸುತ್ತಿದೆ ಎಂಬ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ನಿಜನಾ ಈ ಸುದ್ದಿ? 


ತನ್ನ ವೈಯಕ್ತಿಕ ಲಾಭಕ್ಕಾಗಿ ಎಂಥ ಕೀಳುಮಟ್ಟಕ್ಕಾದರೂ ಇಳಿಯುವ ಚೀನಾ ಇದೀಗ ಮಾನವನ ದೇಹದ ಭಾಗಗಳನ್ನೇ ಉಪಯೋಗಿಸಿ ಕಾರ್ನ್‌ಡ್‌ ಬೀಫ್‌ (ಮಾಂಸಾಹಾರಿ ಖಾದ್ಯ) ತಯಾರಿಸುತ್ತಿದೆ ಎಂಬ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಲ್ಲದೆ, ಅದನ್ನು ಆರ್ಥಿಕವಾಗಿ ಹಿಂದುಳಿದಿರುವ ಆಫ್ರಿಕಾದ ರಾಷ್ಟ್ರಗಳಿಗೆ ರವಾನಿಸುತ್ತಿದೆ ಎಂಬ ಸಂದೇಶವೊಂದು ವಾಟ್ಸಪ್‌, ಫೇಸ್ಬುಕ್‌ ಹಾಗೂ ಟ್ವೀಟರ್‌ ಸೇರಿ ಇನ್ನಿತರ ಸಾಮಾಜಿಕ ವೇದಿಕೆಗಳಲ್ಲಿ ವೈರಲ್‌ ಆಗುತ್ತಿದೆ. ಹೀಗಾಗಿ, ಈ ಖಾದ್ಯವನ್ನು ಆಫ್ರಿಕಾ ಜನರು ಖರೀದಿಸಬಾರದು ಎಂದು ಕರೆ ನೀಡಲಾಗಿದೆ.

 

Tap to resize

Latest Videos

undefined

ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋಗಳಿಗೂ ಮತ್ತು ಚೀನಾದಿಂದ ಆಫ್ರಿಕಾದ ರಾಷ್ಟ್ರಗಳಿಗೆ ಪೂರೈಕೆಯಾಗುತ್ತಿರುವ ಮಾಂಸದ ಖಾದ್ಯಗಳಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಸಾಬೀತಾಗಿದೆ.

Fact Check: ಕೊರೋನಾ ವೈರಸ್ಸಲ್ಲ, ಬ್ಯಾಕ್ಟೀರಿಯಾ?

 ಅಲ್ಲದೆ, ಟಿಬೆಟಿಯನ್‌-ಬೌದ್ಧ ಧರ್ಮಿಯರ ಸ್ಕೈ ಬರಿಯಲ್‌ (ಪ್ರಾಣಿ-ಪಕ್ಷಗಳಿಗೆ ತಿನ್ನಲು ಅನುವಾಗುವಂತೆ ಎತ್ತರದ ಶಿಖರದ ಮೇಲೆ ಶವ ಇಡುವುದು) ವಿಡಿಯೋಗಳನ್ನು ದುರುಪಯೋಗಪಡಿಸಿಕೊಂಡು ಚೀನಾ ಮನುಷ್ಯರ ದೇಹದಿಂದ ಮಾಂಸದ ಖಾದ್ಯ ತಯಾರಿಸುತ್ತಿದೆ ಎಂಬ ವಿಚಾರಕ್ಕೆ ತಳಕು ಹಾಕಿರಬಹುದು ಎಂದು ಬೂಮ್‌ ಶಂಕಿಸಿದೆ. ವಿಚಿತ್ರವೆಂದರೆ, ಈ ವಿಡಿಯೋ ಇತ್ತೀಚಿನ ದಿನಗಳಲ್ಲಿ ಭಾರತೀಯರ ವಾಟ್ಸಪ್‌ಗಳಲ್ಲೂ ಹೆಚ್ಚು ಪ್ರಮಾಣದಲ್ಲಿ ಹರಿದಾಡುತ್ತಿದೆ.

- ವೈರಲ್ ಚೆಕ್ 

click me!