Asianet Suvarna News Asianet Suvarna News

Fact Check: ಕೊರೋನಾ ವೈರಸ್ಸಲ್ಲ, ಬ್ಯಾಕ್ಟೀರಿಯಾ?

ಜಗತ್ತಿನಾದ್ಯಂತ ಕೊರೋನಾ ವೈರಸ್‌ ರೌದ್ರನರ್ತನ ಮುಂದುವರೆದಿದ್ದು, ಮಾರಕ ವೈರಸ್‌ ಇದುವರೆಗೆ 4 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಈ ನಡುವೆ ‘ಕೋವಿಡ್‌-19 ಅಥವಾ ಕೊರೋನಾ ಒಂದು ಬ್ಯಾಕ್ಟೀರಿಯಾ. 100 ಎಂಜಿ ಆ್ಯಸ್ಪಿರಿನ್‌ ಅಥವಾ ಅಪ್ರೊನಾಕ್ಸ್‌ ಮೂಲಕ ಈ ಬ್ಯಾಕ್ಟೀರಿಯಾವನ್ನು ಗುಣಪಡಿಸಬಹುದು. ಇಟಲಿಯ ಜನರು ಇದನ್ನೇ ಬಳಸಿ ಉತ್ತಮ ಫಲಿತಾಂಶ ಕಂಡಿದ್ದಾರೆ’ ಎಂಬ ಬಗ್ಗೆ ಸರಣಿ ಮಾಹಿತಿ ಇರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ನಿಜನಾ ಈ ಸುದ್ದಿ? 

fact check of Coronavirus a virus not bacteria can be treated with Aspirin
Author
Bengaluru, First Published Jun 9, 2020, 10:48 AM IST

ಜಗತ್ತಿನಾದ್ಯಂತ ಕೊರೋನಾ ವೈರಸ್‌ ರೌದ್ರನರ್ತನ ಮುಂದುವರೆದಿದ್ದು, ಮಾರಕ ವೈರಸ್‌ ಇದುವರೆಗೆ 4 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಈ ನಡುವೆ ‘ಕೋವಿಡ್‌-19 ಅಥವಾ ಕೊರೋನಾ ಒಂದು ಬ್ಯಾಕ್ಟೀರಿಯಾ. 100 ಎಂಜಿ ಆ್ಯಸ್ಪಿರಿನ್‌ ಅಥವಾ ಅಪ್ರೊನಾಕ್ಸ್‌ ಮೂಲಕ ಈ ಬ್ಯಾಕ್ಟೀರಿಯಾವನ್ನು ಗುಣಪಡಿಸಬಹುದು. ಇಟಲಿಯ ಜನರು ಇದನ್ನೇ ಬಳಸಿ ಉತ್ತಮ ಫಲಿತಾಂಶ ಕಂಡಿದ್ದಾರೆ’ ಎಂಬ ಬಗ್ಗೆ ಸರಣಿ ಮಾಹಿತಿ ಇರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

fact check of Coronavirus a virus not bacteria can be treated with Aspirin

ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂದು ತಿಳಿದು ಬಂದಿದೆ. ಮತ್ತು ವಿಡಿಯೋದಲ್ಲಿ ನೀಡಲಾಗಿರುವ ಮಾಹಿತಿ ತಪ್ಪು. ಕೊರೋನಾ ಒಂದು ಬ್ಯಾಕ್ಟೀರಿಯಾ ಅಲ್ಲ, ಅದು ವೈರಸ್‌.

 

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಈವರೆಗೆ ಈ ವೈರಸ್ಸಿಗೆ ಲಸಿಕೆ ಲಭ್ಯವಾಗಿಲ್ಲ. ಇಂಥ ಸುಳ್ಳು ವಿಡಿಯೋಗಳಿಗೆ ಮಹತ್ವ ನೀಡಬಾರದು ಎಂದು ಸ್ಪಷ್ಟನೆ ನೀಡಿದೆ. ಜಗತ್ತಿನಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಕೊರೋನಾ ವಿರುದ್ಧ ಲಸಿಕೆ ತಯಾರಿಕೆರಿಗೆ ಹಲವು ದೇಶಗಳು ಪ್ರಯತ್ನಿಸುತ್ತಿವೆ. ಆದರೆ ಲಸಿಕೆಯು ಎಲ್ಲಾ ಹಂತದ ಪರೀಕ್ಷೆಗಳನ್ನು ಪೂರ್ಣಗೊಳಿಸಿ ಅಂತಿಮವಾಗಿ ಮಾರುಕಟ್ಟೆಯಲ್ಲಿ ಲಭ್ಯವಾಗಲು ಕನಿಷ್ಠ 12-18 ತಿಂಗಳು ಬೇಕಾಗಬಹುದು ಎಂದು ಹೇಳಲಾಗುತ್ತಿದೆ.

- ವೈರಲ್ ಚೆಕ್ 

Follow Us:
Download App:
  • android
  • ios