ಉಭಯ ದೇಶಗಳ ನಡುವೆ ದ್ವೇಷಮಯ ಪರಿಸ್ಥಿತಿ ಇದ್ದರೂ ಬ್ಯಾಂಕ್ ಆಫ್ ಚೀನಾ ಭಾರತದಲ್ಲಿ ಶಾಖೆಯನ್ನು ತೆರೆಯಲು ಆರ್‌ಬಿಐ ಅನುಮತಿ ನೀಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಚೀನಾಗೆ ಅನುಮತಿ ಕೊಟ್ಟಿತಾ ಆರ್‌ಬಿಐ? ಏನಿದರ ಸತ್ಯಾಸತ್ಯತೆ?
ನವದೆಹಲಿ (ಜೂ. 27): ಪೂರ್ವ ಲಡಾಖ್ ಗಡಿ ವಿಚಾರವಾಗಿ ಚೀನಾ-ಭಾರತ ಸೈನಿಕರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದು ಚೀನಾ ಭಾರತದ 20 ಯೋಧರನ್ನು ಇತ್ತೀಚೆಗಷ್ಟೆಹತ್ಯೆಗೈದಿದೆ. ಇದರ ಬೆನ್ನಲ್ಲೇ ಭಾರತ-ಚೀನಾ ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಉಭಯ ದೇಶಗಳ ನಡುವೆ ತ್ವೇಷಮಯ ಪರಿಸ್ಥಿತಿ ಇದ್ದರೂ ಬ್ಯಾಂಕ್ ಆಫ್ ಚೀನಾ ಭಾರತದಲ್ಲಿ ಶಾಖೆಯನ್ನು ತೆರೆಯಲು ಆರ್‌ಬಿಐ ಅನುಮತಿ ನೀಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
undefined
‘ಬ್ಯಾಂಕ್ ಆಫ್ ಚೀನಾ ಭಾರತದಲ್ಲಿ ಕಾರ‍್ಯನಿರ್ವಹಿಸಲು ರಿಸವ್‌ರ್ ಬ್ಯಾಂಕ್ ಆಫ್ ಇಂಡಿಯಾ ಪರವಾನಗಿ ನೀಡಿದೆ. ಚೀನಾ ನಾಯಕತ್ವಕ್ಕೆ ನಮ್ಮ ಪ್ರಧಾನಿ ಮೋದಿ ಕೊಟ್ಟಿರುವ ಆಶ್ವಾಸನೆ ಇದಾಗಿದೆ’ ಎಂದು ಎಎನ್‌ಐ ಸುದ್ದಿಸಂಸ್ಥೆ ಹೆಸರಿನಲ್ಲಿ ಟ್ವೀಟ್ ವೈರಲ್ ಆಗುತ್ತಿದೆ.
Fact Check: ಚೀನಾ ಆ್ಯಪ್‌ಗಳಿಗೆ ಗೇಟ್‌ಪಾಸ್?
ಆದರೆ ನಿಜಕ್ಕೂ ಬ್ಯಾಂಕ್ ಆಫ್ ಚೀನಾ ಭಾರತದಲ್ಲಿ ಈಗ ಶಾಖೆ ತೆರೆದಿದೆಯೇ ಎಂದು ಪರಿಶೀಲಿಸಿದಾಗ ವೈರಲ್ ಸುದ್ದಿ ಸುಳ್ಳು ಎಂಬುದು ಸಾಬೀತಾಗಿದೆ. ಏಕೆಂದರೆ ಬ್ಯಾಂಕ್ ಆಫ್ ಚೀನಾ ಭಾರತದಲ್ಲಿ ತನ್ನ ಶಾಖೆ ತೆರೆಯಲು 2018ರಲ್ಲಿಯೇ ಆರ್‌ಬಿಐ ಅನುಮತಿ ನೀಡಿತ್ತು. ಅದರನುಸಾರ ಬ್ಯಾಂಕ್ ಆಫ್ ಚೀನಾ ಕಳೆದ ವರ್ಷ ಜೂನ್‌ನಲ್ಲಿ ಭಾರತದಲ್ಲಿ ತನ್ನ ಮೊದಲ ಶಾಖೆ ತೆರೆದಿದೆ. ಎಎನ್‌ಐ ಸುದ್ದಿಸಂಸ್ಥೆ 2018ರ ಜುಲೈ ನಾಲ್ಕರಂದು ಮಾಡಿದ್ದ ಟ್ವೀಟಿನ ದಿನಾಂಕವನ್ನು ಕತ್ತರಿಸಿ ಈಗ ಸುಳ್ಳುಸುದ್ದಿ ಹರಡಲಾಗುತ್ತಿದೆ.
- ವೈರಲ್ ಚೆಕ್