ಯೆಚೂರಿ ಅವರು ಕಮ್ಯುನಿಸ್ಟ್ ಆಳ್ವಿಕೆಯ ಚೀನಾದಲ್ಲಿ ಅಧ್ಯಕ್ಷರಾಗಿರುವ ಕ್ಸಿ-ಜಿನ್‌ಪಿಂಗ್ ಅವರನ್ನು ಬಾಸ್ ಎಂದು ಕರೆದಿದ್ದರು ಎಂಬ ಟ್ವೀಟ್‌ವೊಂದು ಈಗ ವೈರಲ್ ಆಗುತ್ತಿದೆ ಇದು ನಿಜಾನಾ? ಇಲ್ಲಿದೆ ಸಂಪೂರ್ಣ ವಿವರ
ನವದೆಹಲಿ(ಜೂ.25): ಗಡಿಯಲ್ಲಿ ಚೀನಾ ಭಾರತದ 20 ಯೋಧರನ್ನು ಹತ್ಯೆ ಮಾಡಿದಾಗಿನಿಂದ ಭಾರತ-ಚೀನಾ ನಡುವೆ ತ್ವೇಷಮಯ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಜನರಲ್ ಸೆಕ್ರೆಟರಿ ಸೀತಾರಾಮ್ ಯೆಚೂರಿಯವರ ಹೆಸರಿನಲ್ಲಿ ಟ್ವೀಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
undefined
ಅದರಲ್ಲಿ 2015, ಅಕ್ಟೋಬರ್ 20ರಂದು ಯೆಚೂರಿ ಅವರು ಕಮ್ಯುನಿಸ್ಟ್ ಆಳ್ವಿಕೆಯ ಚೀನಾದಲ್ಲಿ ಅಧ್ಯಕ್ಷರಾಗಿರುವ ಕ್ಸಿ-ಜಿನ್‌ಪಿಂಗ್ ಅವರನ್ನು ಬಾಸ್ ಎಂದು ಕರೆದಿದ್ದರು ಎಂಬ ಟ್ವೀಟ್‌ವೊಂದು ಈಗ ವೈರಲ್ ಆಗುತ್ತಿದೆ. ಭಾರತ-ಚೀನಾ ನಡುವೆ ಯುದ್ಧದ ಕಾಮೋಡ ಕವಿದಿರುವ ಈ ಹೊತ್ತಲ್ಲಿ ಯೆಚೂರಿ ಮಾಡಿದ್ದಾರೆ ಎನ್ನಲಾದ ಟ್ವೀಟ್ ಭಾರೀ ಚರ್ಚೆ ಹುಟ್ಟುಹಾಕಿದೆ.
Fact ChecK: ಕ್ಸಿ ಎದುರು ತಲೆಬಾಗಿದ್ರಾ ಮೋದಿ?
ಆದರೆ ನಿಜಕ್ಕೂ ಯೆಚೂರಿ ಅವರು ಹೀಗೆ ಟ್ವೀಟ್ ಮಾಡಿದ್ದರೇ ಎಂದು ಪರಿಶೀಲಿಸಿದಾಗ ವೈರಲ್ ಟ್ವೀಟ್ ನಕಲಿ ಎಂಬುದು ಸಾಬೀತಾಗಿದೆ. ಏಕೆಂದರೆ ಯೆಚೂರಿ ಅವರು ಟ್ವೀಟರ್‌ನಲ್ಲಿ ಖಾತೆ ತೆರೆದಿದ್ದೇ 2015 ಅಕ್ಟೋಬರ್ 28ರಂದು.
ಇನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಏಷ್ಯಾದ ರಾಜಕೀಯ ಪಕ್ಷಗಳ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಚೀನಾ ಅಧ್ಯಕ್ಷ ಕ್ಸಿ ಅವರನ್ನು ಭೇಟಿಯಾಗಿದ್ದರು. ಆಗಿನ ಫೋಟೋವನ್ನು ಬಳಿಸಿಕೊಂಡು ಈಗ ಸುಳ್ಳುಸುದ್ದಿ ಹರಡಲಾಗುತ್ತಿದೆ. ಈ ನಡುವೆ ಸಿಪಿಎಂ ಕೂಡ ವೈರಲ್ ಸುದ್ದಿ ಸುಳ್ಳು ಯೆಚೂರಿ ಅವರು ಟ್ವೀಟರ್ ಖಾತೆ ತೆರೆದಿದ್ದೇ ಅಕ್ಟೋಬರ್ 27ರಂದು ಎಂದು ಟ್ವೀಟ್ ಮಾಡಿದೆ.