Fact Check: ವರ್ಕ್ ಫ್ರಂ ಹೋಂ ಮಾಡುವವರ ಸ್ಮಾರ್ಟ್‌ ‌ಫೋನ್‌ಗಳಿಗೆ ಫ್ರೀ ಇಂಟರ್‌ನೆಟ್‌?

By Suvarna NewsFirst Published May 11, 2020, 9:28 AM IST
Highlights

ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಬಹುತೇಕ ಕಂಪನಿಗಳು ವರ್ಕ್ ಫ್ರಂ ಹೋಂ ಮೊರೆಹೋಗಿವೆ. ಹಾಗಾಗಿ ದೇಶಾದ್ಯಂತ ಇಂಟರ್‌ನೆಟ್‌ ಬಳಕೆ ಹೆಚ್ಚಿದೆ. ಈ ಸಂದರ್ಭದಲ್ಲಿ ಅನುಕೂಲವಾಗಲೆಂದು ಮೊಬೈಲ್‌ ಬಳಕೆದಾರರಿಗೆ ದೂರ ಸಂಪರ್ಕ ಸೇವಾ ಕಂಪನಿಗಳು ಉಚಿತ ಇಂಟರ್‌ನೆಟ್‌ ಸೌಲಭ್ಯ ಒದಗಿಸಲಿವೆ ಎಂಬ ಸಂದೇಶ ವಾಟ್ಸ್‌ಆ್ಯಪ್‌ನಲ್ಲಿ ವೈರಲ್‌ ಆಗುತ್ತಿದೆ. 

‘ಕೊರೋನಾ ಲಾಕ್‌ಡೌನ್‌ ವೇಳೆ ಬಳಕೆದಾರರಿಗೆ ನೆರವಾಗಲೆಂದು ಉಚಿತ ಇಂಟರ್‌ನೆಟ್‌ ನೀಡಲಾಗುತ್ತಿದೆ. ಅದಕ್ಕಾಗಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಲು ಲಿಂಕ್‌ ನೀಡಲಾಗಿದೆ. ಜೊತೆಗೆ ಜಿಯೋ ಕಂಪನಿಯು ಫೇಸ್‌ಬುಕ್‌ ಜೊತೆಗೂಡಿ ಆರು ತಿಂಗಳು ಉಚಿತ ಇಂಟರ್‌ನೆಟ್‌ ನೀಡಲಿದೆ’ ಎಂದು ಹೇಳಲಾಗಿದೆ. ಈ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Fact Check: ಲಾಕ್‌ಡೌನ್ ಸಂಕಷ್ಟದಲ್ಲಿರುವ ಬಡವರಿಗೆ ಕೇಂದ್ರದಿಂದ 50 ಸಾವಿರ ರೂ?

ಆದರೆ ಉಚಿತ ಇಂಟರ್‌ನೆಟ್‌ ನೀಡುವುದು ನಿಜವೇ ಎಂದು ಪರಿಶೀಲಿಸಿದಾಗ, ‘ಈ ಸುದ್ದಿ ಸುಳ್ಳು, ವೈರಲ್‌ ಸಂದೇಶದಲ್ಲಿ ಲಗತ್ತಿಸಲಾದ ವೆಬ್‌ಸೈಟ್‌ ಕೂಡ ನಕಲಿ’ ಎಂದು ತಿಳಿದು ಬಂದಿದೆ. 

दावा: एक व्हाट्सऐप मैसेज का दावा है कि कोरोना महामारी के कारण 17 मई 2020 तक लॉकडाउन की वजह से मोबाइल कंपनियों नें सभी मोबाइल यूजर्स को फ्री इन्टरनेट देने का ऐलान किया है|:यह दावा बिलकुल झूठा है और दिया गया लिंक फर्जी है| दूरसंचार विभाग ने ऐसा कोई ऐलान नहीं किया है| pic.twitter.com/gVEiIIqCgx

— PIB Fact Check (@PIBFactCheck)

ಯಾವುದೇ ದೂರಸಂಪರ್ಕ ಕಂಪನಿಗಳ ಅಧಿಕೃತ ವೈಬ್‌ಸೈಟ್‌ನಲ್ಲೂ ಇಂತಹ ಆಫರ್‌ಗಳನ್ನು ಘೋಷಿಸಿಲ್ಲ ಎಂದು ಅದು ಹೇಳಿದೆ. ಜೊತೆಗೆ ‘ಫೇಸ್‌ಬುಕ್‌ ಜೊತೆ ಇಂತಹ ಯಾವುದೇ ಒಪ್ಪಂದ ಆಗಿಲ್ಲ. ನಾವು ಈ ಯೋಜನೆ ಘೋಷಿಸಿಲ್ಲ’ ಎಂದು ಜಿಯೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- ವೈರಲ್ ಚೆಕ್ 

click me!