
ಕೊರೋನಾ ವೈರಸ್ ಲಾಕ್‌ಡೌನ್‌ನಿಂದಾಗಿ ದಿನಪತ್ರಿಕೆಗಳ ಸರಬರಾಜಿಗೆ ತೊಡಕುಂಟಾಗಿದೆ. ಹಾಗಾಗಿ ಜನರು ದೇಶದ ಆಗುಹೋಗುಗಳ ಬಗ್ಗೆ ತಿಳಿಯಲು ಇ-ಪೇಪರ್ ಮೊರೆ ಹೋಗಿದ್ದಾರೆ. ಪತ್ರಿಕೆಗಳ ಇ-ಪೇಪರ್ ತುಣುಕುಗಳನ್ನು ವಾಟ್ಸ್‌ಆ್ಯಪ್‌ಗಳಲ್ಲಿ ಹಂಚಿಕೊಳ್ಳುವವರ ಪ್ರಮಾಣವೂ ಅಧಿಕವಾಗಿದೆ.
ಆದರೆ ದೈನಿಕ್ ಭಾಸ್ಕರ್ ಪತ್ರಿಕೆಯು ‘ಇ-ಪೇಪರ್ ಪಿಡಿಎಫ್‌ಗಳನ್ನು ಡೌನ್‌ಲೋಡ್ ಮಾಡಿ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಹಂಚಿಕೊಳ್ಳುವುದು ಅಪರಾಧ. ಹಾಗೆ ಮಾಡಿದರೆ ಗುಂಪಿನ ಅಡ್ಮಿನ್‌ಗಳ ಮೇಲೆ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬಹುದು’ ಎಂದು ವರದಿ ಮಾಡಿದೆ. ಈ ವರದಿ ಕಂಡು ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ.
ಪತ್ರಿಕೆಯ ತುಣುಕೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ಫ್ರೀ ಪ್ರೆಸ್ ಜರ್ನಲ್, ‘ಪಿಡಿಎಫ್ ಫೈಲ್‌ಗಳನ್ನು ವಾಟ್ಸ್‌ಆ್ಯಪ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಯಾವುದೇ ನಿಷೇಧ ಇಲ್ಲ’ ಎಂದಿರುವುದು ಗೊಂದಲಕ್ಕೆ ಕಾರಣವಾಗಿದೆ.
Fact Check| ತಬ್ಲೀಘಿ ಕಾಟದಿಂದ ನರ್ಸ್‌ಗಳ ರಾಜೀನಾಮೆ!
ಆದರೆ ಇಂಡಿಯಾ ಟುಡೆ ಈ ಸುದ್ದಿ ಸತ್ಯಾಸತ್ಯ ಪರಿಶೀಲಿಸಿದಾಗ, ಸುದ್ದಿಸಂಸ್ಥೆಯೇ ಉಚಿತವಾಗಿ ನೀಡಿರುವ ಪಿಡಿಎಫ್ ಫೈಲ್‌ಗಳನ್ನು ಡೌನ್‌ಲೋಡ್ ಅಥವಾ ಫಾರ್ವರ್ಡ್ ಮಾಡುವುದು ಅಪರಾಧವಲ್ಲ. ಆದರೆ ಶುಲ್ಕ ಪಾವತಿಸುವ ಇ-ಪೇಪರ್ ಪಿಡಿಎಫ್‌ಗಳನ್ನು ಫಾರ್ವರ್ಡ್ ಮಾಡುವುದು ಅಪರಾಧ ಎಂದು ತಿಳಿದುಬಂದಿದೆ. ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿ(ಐಎನ್‌ಎಸ್) ಕೂಡ ಇದನ್ನೇ ಹೇಳಿ, ವೈರಲ್ ಸುದ್ದಿ ಸುಳ್ಳು ಎಂದು ಸ್ಪಷ್ಟೀಕರಣ ನೀಡಿದೆ.
- ವೈರಲ್ ಚೆಕ್