ಚೀನಾ ಭಾರತದ 20 ಯೋಧರನ್ನು ಹತ್ಯೆಗೈದ ಬೆನ್ನಲ್ಲೇ ಭಾರತ-ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಉಭಯ ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಹೀಗಿರುವಾಗಲೇ ಚೀನಾ ಅಧ್ಯಕ್ಷ ಕ್ಸಿ-ಜಿನ್‌ಪಿಂಗ್ ಎದುರು ಭಾರತದ ಪ್ರಧಾನಿ ನರೇಂದ್ರ ಮೋದಿ ಬಾಗಿ ಕೈಜೋಡಿಸಿ ನಮಸ್ಕರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ?
ನವದೆಹಲಿ (ಜೂ. 24): ಚೀನಾ ಭಾರತದ 20 ಯೋಧರನ್ನು ಹತ್ಯೆಗೈದ ಬೆನ್ನಲ್ಲೇ ಭಾರತ-ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಉಭಯ ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಹೀಗಿರುವಾಗಲೇ ಚೀನಾ ಅಧ್ಯಕ್ಷ ಕ್ಸಿ-ಜಿನ್‌ಪಿಂಗ್ ಎದುರು ಭಾರತದ ಪ್ರಧಾನಿ ನರೇಂದ್ರ ಮೋದಿ ಬಾಗಿ ಕೈಜೋಡಿಸಿ ನಮಸ್ಕರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಚೀನಾ ನಮ್ಮ 20 ಯೋಧರನ್ನು ಹತ್ಯೆಗೈದರೂ ಪ್ರಧಾನಿ ನರೇಂದ್ರ ಮೋದಿ ಚೀನಾದ ಎದುರು ಕೈಕಟ್ಟಿಕುಳಿತಿದ್ದಾರೆ ಎಂಬರ್ಥದಲ್ಲಿ ನೆಟ್ಟಿಗರು ಈ ಫೋಟೋವನ್ನು ಶೇರ್ ಮಾಡುತ್ತಿದ್ದಾರೆ. ಇದೀಗ ವೈರಲ್ ಆಗಿದೆ.
undefined
इस तस्वीर को मोदी जी ने यथार्थ कर दिया है। pic.twitter.com/ISDZW80SnF
— Devashish Jarariya (@jarariya91)
ಆದರೆ ನಿಜಕ್ಕೂ ಪ್ರಧಾನಿ ಮೋದಿ ಚೀನಾ ಅಧ್ಯಕ್ಷರ ಎದುರು ಬಾಗಿ ಕೈಜೋಡಿಸಿ ನಮಸ್ಕರಿಸಿದ್ದರೇ ಎಂದು ಬೂಮ್ ಲೈವ್ ಸುದ್ದಿಸಂಸ್ಥೆ ಪರಿಶೀಲಿಸಿದಾಗ ವೈರಲ್ ಫೋಟೋ ಫೋಟೋಶಾಪ್ ಮೂಲಕ ಎಡಿಟ್ ಮಾಡಿರುವ ಚಿತ್ರ ಎಂದು ತಿಳಿದುಬಂದಿದೆ.
fact Check: ಸೈನಿರನ್ನು ಉದ್ದೇಶಿಸಿ ಗಲ್ವಾನ್‌ನಲ್ಲಿ ಇಂದಿರಾ ಭಾಷಣ ಮಾಡಿದ್ರಾ?
ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಹೊರಟಾಗ ಚೀನಾ ಅಧ್ಯಕ್ಷ ಜಿನ್‌ಪಿಂಗ್ 2019ರಲ್ಲಿ ಕೇರಳಕ್ಕೆ ಭೇಟಿ ನೀಡಿದಾಗಿನ ಫೋಟೋ ಮತ್ತು 2014ರಲ್ಲಿ ಮೋದಿ ಕರ್ನಾಟಕದ ತುಮಕೂರಿಗೆ ಭೇಟಿ ನೀಡಿದ್ದ ವೇಳೆ ಇಲ್ಲಿನ ಮೇಯರ್ ಗೀತಾ ರುದ್ರೇಶ್ ಅವರಿಗೆ ನಮಸ್ಕರಿಸಿದ್ದ ಫೋಟೋವನ್ನು ಸಂಕಲಿಸಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಡಲಾಗಿದೆ ಎಂದು ತಿಳಿದುಬಂದಿದೆ. ಮೂಲ ಫೋಟೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಂಚೆ ಶಲ್ಯ ತೊಟ್ಟು ಚೀನಾ ಅಧ್ಯಕ್ಷ ಕ್ಸಿ ಅವರೊಂದಿಗೆ ಸಂವಾದ ಮಾಡುತ್ತಿರುವ ದೃಶ್ಯವಿದೆಯೇ ಹೊರತು ಬಾಗಿ ನಮಸ್ಕರಿಸುತ್ತಿಲ್ಲ.
-ವೈರಲ್ ಚೆಕ್