‘ಬರ್ಹೇನ್ ರಾಜ ತಮ್ಮ ರಕ್ಷಣೆಗೆ ಸೇನಾ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಬದಲಾಗಿ ರೋಬೋಟ್ ಬಾಡಿಗಾರ್ಡ್ ನೇಮಿಸಿಕೊಂಡಿದ್ದಾರೆæ. ಈ ರೋಬೋಟ್‌ನಲ್ಲಿ 360 ಡಿಗ್ರಿ ಸಾಮರ್ಥ್ಯದ ಕ್ಯಾಮೆರಾಗಳಿದ್ದು, 3 ಪಿಸ್ತೂಲ್‌ಗಳನ್ನೂ ಅಳವಡಿಸಲಾಗಿದೆ. 4ನೇ ಕೈಗಾರಿಕಾ ಕ್ರಾಂತಿ ಬಗ್ಗೆ ಈ ರೋಬೋಟ್ ಮಾತನಾಡುತ್ತದೆ. ಇದು 6 ಭಾಷೆಗಳಲ್ಲಿ ಮಾತನಾಡಬಲ್ಲದು ಮತ್ತು 1050 ಜನರೊಂದಿಗೆ ಏಕಕಾಲದಲ್ಲಿ ಹೋರಾಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗುತ್ತಿದೆ. ನಿಜನಾ ಈ ಸುದ್ದಿ?
‘ಬರ್ಹೇನ್ ರಾಜ ತಮ್ಮ ರಕ್ಷಣೆಗೆ ಸೇನಾ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಬದಲಾಗಿ ರೋಬೋಟ್ ಬಾಡಿಗಾರ್ಡ್ ನೇಮಿಸಿಕೊಂಡಿದ್ದಾರೆæ. ಈ ರೋಬೋಟ್‌ನಲ್ಲಿ 360 ಡಿಗ್ರಿ ಸಾಮರ್ಥ್ಯದ ಕ್ಯಾಮೆರಾಗಳಿದ್ದು, 3 ಪಿಸ್ತೂಲ್‌ಗಳನ್ನೂ ಅಳವಡಿಸಲಾಗಿದೆ. 4ನೇ ಕೈಗಾರಿಕಾ ಕ್ರಾಂತಿ ಬಗ್ಗೆ ಈ ರೋಬೋಟ್ ಮಾತನಾಡುತ್ತದೆ. ಇದು 6 ಭಾಷೆಗಳಲ್ಲಿ ಮಾತನಾಡಬಲ್ಲದು ಮತ್ತು 1050 ಜನರೊಂದಿಗೆ ಏಕಕಾಲದಲ್ಲಿ ಹೋರಾಡುವ ಸಾಮರ್ಥ್ಯ ಹೊಂದಿದೆ.
ನೂರಾರು ಬಾಡಿಗಾರ್ಡ್‌ಗಳನ್ನು ಇಟ್ಟುಕೊಂಡು ಓಡಾಡುವ ರಾಜಕಾರಣಿಗಳು ಇನ್ನುಮುಂದೆ ಇಂಥ ಒಂದೇ ಒಂದು ರೋಬೋಟ್ ಅನ್ನು ಬಾಡಿಗಾರ್ಡ್ ಆಗಿ ನೇಮಿಸಿಕೊಳ್ಳಬಹುದು. ಈ ರೋಬೋಟ್ ಬೆಲೆ 55 ಕೋಟಿ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
undefined
King of Bahrain arrives in Dubai with his robot bodyguard fitted 360 with cameras and in built pistols. Technology moving very fast than ever in history. Now politicians might order this too pic.twitter.com/YK8aI65z4N
— Roshan Abeysinghe (@RoshanCricket)ಅರಬ್ ದೇಶದ ಮುಸ್ಲಿಮರಂತೆ ವೇಷ ಧರಿಸಿರುವ ವ್ಯಕ್ತಿಯೊಬ್ಬರ ಹಿಂದೆ ದೈತ್ಯ ಗಾತ್ರದ ರೋಬೋಟ್ ಒಂದು ಸ್ವಯಂಚಾಲಿತವಾಗಿ ನಡೆದು ಹೋಗುತ್ತಿರುವ, ಅಕ್ಕ ಪಕ್ಕದ ಜನರು ಅಚ್ಚರಿಯಿಂದ ಅದನ್ನು ನೋಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿ ಹೀಗೆ ಹೇಳಲಾಗುತ್ತಿದೆ. ಇದೀಗ ವೈರಲ್ ಆಗುತ್ತಿದೆ.
Fact Check : ಭಗತ್ ಸಿಂಗ್‌ರನ್ನು ನಡುರಸ್ತೆಯಲ್ಲಿ ಕಟ್ಟಿ ಹೊಡೆದರಾ ಪೊಲೀಸ್ ಅಧಿಕಾರಿ?
ಆದರೆ ನಿಜಕ್ಕೂ ಬರ್ಹೇನ್ ರಾಜ ತಮ್ಮ ಭದ್ರತೆಗಾಗಿ ರೋಬೋಟ್ ಬಾಡಿಗಾರ್ಡ್ ಅನ್ನು ನೇಮಿಸಿಕೊಂಡಿದ್ದಾರೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಬೂಮ್ ಲೈವ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಹೊರಟಾಗ ‘ಗಲ್ಫ್ ನ್ಯೂಸ್’ನಲ್ಲಿ ಪ್ರಕಟಗೊಂಡ ಈ ಕುರಿತ ಲೇಖನ ಪತ್ತೆಯಾಗಿದೆ. ಅದರಲ್ಲಿ ಇದು ಬ್ರಿಟಿಷ್ ಕಂಪನಿ ಸೈಬರ್‌ಸ್ಟೈನ್ ಅಭಿವೃದ್ಧಿಪಡಿಸಿರುವ ಕಮರ್ಷಿಯಲ್ ಎಂಟರ್‌ಟೈನ್‌ಮೆಂಟ್ ರೋಬೋಟ್ ‘ಟೈಟಾನ್’ ಎಂದು ಹೇಳಲಾಗಿದೆ. ಹಾಗಾಗಿ ಬರ್ಹೇನ್ ರಾಜ ಬಾಡಿಗಾರ್ಡ್ ಆಗಿ ರೋಬೋಟ್ ನೇಮಿಸಿಕೊಂಡಿದ್ದಾರೆ ಎಂಬ ಸುದ್ದಿ ಸುಳ್ಳು. ಇದು ಬಾಡಿಗಾರ್ಡ್ ರೋಬೋಟ್ ಅಲ್ಲ, ಮನರಂಜನಾ ರೋಬೋಟ್.
- ವೈರಲ್ ಚೆಕ್