Fact Check: ಕ್ರಿಕೆಟ್‌ ಆಡಿದ ಪ್ರಧಾನಿ ಮೋದಿ, ನಿಜನಾ ಇದು.?

By Suvarna News  |  First Published May 6, 2022, 5:29 PM IST

ಪ್ರಧಾನ ಮಂತ್ರಿ ನರೇಂದ್ರ ಮೋದಿ PM Modi) ಅವರು ಕ್ರಿಕೆಟ್‌ (Cricket) ಆಡಿದರು ಎನ್ನಲಾದ 33 ಸೆಕೆಂಡ್‌ಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ನಿಜನಾ ಇದು..?


ಪ್ರಧಾನ ಮಂತ್ರಿ ನರೇಂದ್ರ ಮೋದಿ PM Modi) ಅವರು ಕ್ರಿಕೆಟ್‌ (Cricket) ಆಡಿದರು ಎನ್ನಲಾದ 33 ಸೆಕೆಂಡ್‌ಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ನಿಜನಾ ಇದು..? 

ಈ ವಿಡಿಯೋ ನೋಡಿದ ನೆಟ್ಟಿಗರು (Netizens) ದೇಶದ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಪ್ರಧಾನಿಗಳು ಕ್ರಿಕೆಟ್‌ ಆಡುತ್ತಾ ಕಾಲ ಹರಣ ಮಾಡುತ್ತಿದ್ದಾರೆ ಎಂದು ಮೂದಲಿಸಲು ಆರಂಭಿಸಿದ್ದರು. ಅಲ್ಲದೆ ಹಲವು ಬಗೆಯ ಕಮೆಂಟ್‌ಗಳನ್ನು ಹರಿಯಬಿಟ್ಟಿದ್ದರು. ಈ ಕಮೆಂಟ್‌ಗಳಿಗೆ ಜನರು ಹಲವು ಬಗೆಯಲ್ಲಿ ಪ್ರತಿಕ್ರಿಯಿಸುತ್ತಾ ಪರ ವಿರೋಧ ಚರ್ಚೆಗಳಿಗೆ ನಾಂದಿ ಹಾಡಲಾಗಿತ್ತು. ವಿಡಿಯೋದ ಮೇಲ್ಭಾಗದಲ್ಲಿ ಕ್ರಿಕೆಟ್‌ ಆಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಎಂದು ಬರಹ ಹಾಕಲಾಗಿದೆ. ಕ್ರಿಕೆಟ್‌ ಆಡುತ್ತಿರುವ ವ್ಯಕ್ತಿಯ ಚಹರೆ ವಿಡಿಯೋದಲ್ಲಿ ಕಾಣಿಸುವುದಿಲ್ಲ. ವ್ಯಕ್ತಿಯ ಹಿಂಬದಿಯಿಂದ ವಿಡಿಯೋ ರೆಕಾರ್ಡ್‌ ಮಾಡಲಾಗಿದೆ. ಅಲ್ಲದೆ ವಿಡಿಯೋ ಬ್ಲರ್‌ ಆಗಿದೆ. ಹೀಗಾಗಿ ವಿಡಿಯೋದಲ್ಲಿ ಕ್ರಿಕೆಟ್‌ ಆಡುತ್ತಿರುವ ವ್ಯಕ್ತಿ ಪ್ರಧಾನಿಯೇ ಎನ್ನುವ ಅನುಮಾನ ಸೃಷ್ಟಿಯಾಗುತ್ತದೆ.

Latest Videos

undefined

Fact Check: ಪ್ರಧಾನಮಂತ್ರಿ ಕಲ್ಯಾಣ ನಿಧಿಗೆ ಕಾಶ್ಮೀರ ಫೈಲ್ಸ್ ತಂಡ 200 ಕೋಟಿ ದೇಣಿಗೆ ನೀಡಿದ್ದು ಸುಳ್ಳು

 

ಈ ಸಂಬಂಧ ವೈರಲ್‌ ಚೆಕ್‌ ಮಾಡಿದಾಗ ಬಹಿರಂಗವಾದ ವಿಚಾರವೇ ಬೇರೆ.

ಪ್ರಧಾನಿಗಳ ತದ್ರೂಪದಂತೆಯೇ ಇರುವ ವ್ಯಕ್ತಿಯೊಬ್ಬರು ಕ್ರಿಕೆಟ್‌ ಆಡುತ್ತಿದ್ದಾರೆ. ಈ ವಿಡಿಯೋವನ್ನು ಖ್ಯಾತ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಅವರ ತಂದೆ, ನಟ ಯೋಗರಾಜ್‌ ಸಿಂಗ್‌ ಅವರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಕ್ರಿಕೆಟ್‌ ನನ್ನ ಫ್ಯಾಷನ್‌. ನಿಮ್ಮ ಫ್ಯಾಷನ್‌ ಏನು? ಎಂದು ಕೇಳಿದ್ದಾರೆ. ಈ ಮೂಲಕ ಪ್ರಧಾನಿ ಕ್ರಿಕೆಟ್‌ ಆಡುತ್ತಿರುವ ವ್ಯಕ್ತಿಯ ವಿಡಿಯೋ ಸುಳ್ಳು ಎಂಬುದು ಸಾಬೀತಾಗಿದೆ.

- ವೈರಲ್ ಚೆಕ್ 

click me!