Fact Check: 1999 ರಲ್ಲೇ 'ಒಮಿಕ್ರೋನ್' ವಿಡಿಯೋ ಗೇಮ್ ರಚಿಸಿದ್ರಾ ಬಿಲ್ ಗೇಟ್ಸ್?

By Suvarna News  |  First Published Dec 24, 2021, 3:28 PM IST

ಬಿಲ್ ಗೇಟ್ಸ್ ನೇತೃತ್ವದ ಮೈಕ್ರೋಸಾಫ್ಟ್ ಅಭಿವೃದ್ಧಿಪಡಿಸಿದ 1999 ರ ವಿಡಿಯೋ ಗೇಮ್‌ನ ಹೆಸರು ಓಮಿಕ್ರಾನ್ ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ಆದರೆ  ಇದು ಆಧಾರರಹಿತವಾಗಿದ್ದು ಫ್ರೆಂಚ್ ವಿಡಿಯೋ ಗೇಮ್ಸ್ ಡೆವಲಪರ್ ಈ ಗೇಮ್‌ ಅಭಿವೃದ್ಧಿಪಡಿಸಿದೆ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ತಿಳಿದುಬಂದಿದೆ.


Fact Check: ಪ್ರಪಂಚದಾದ್ಯಂತ ಒಮಿಕ್ರೋನ್‌ ಪ್ರಕರಣಗಳು (Covid 19 Variant Omicron) ದಿನದಿಂದ ದಿನಕ್ಕೆ ಏರುತ್ತಿವೆ. ಭಾರತದಲ್ಲೂ ಒಮಿಕ್ರೋನ್‌ ಪ್ರಕರಣಗಳು 300ರ ಗಡಿ ದಾಟಿವೆ. ಕೋವಿಡ್‌ 19 ಓಮಿಕ್ರೋನ್ ರೂಪಾಂತರಿ ಬಗ್ಗೆ ವಿಜ್ಞಾನಿಗಳನ್ನು ಗೊಂದಲದಲ್ಲಿದ್ದಾರೆ. ಆದರೂ ಈ ರೂಪಾತಂತರಿ ವೇಗವಾಗಿ ಹರಡುತ್ತೆ ಆದರೆ ಡೆಲ್ಟಾನಷ್ಟು ಅಪಾಯಕಾರಿ ಅಲ್ಲ ಎಂದು ಹಲವು ಅಧ್ಯಯನಗಳು ಸಾಬೀತುಪಡಿಸಿವೆ. ಈ ಮಧ್ಯೆ ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಬಿಲ್ ಗೇಟ್ಸ್‌ನಂತಹ (Bill Gates) ದೊಡ್ಡ ಕೈಗಾರಿಕೋದ್ಯಮಿಗಳು ಜನಸಂಖ್ಯೆಯನ್ನು ನಿಯಂತ್ರಿಸಲು ಮತ್ತು ತಮ್ಮದೇ ಆದ ಲಸಿಕೆಗಳಿಂದ (Vaccine) ಲಾಭ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಕೊರೋನಾ ಹೆಸರಿನಲ್ಲಿ ಈ ರೀತಿ ಹೊಂಚು ಹಾಕಿದ್ದಾರೆ ಎಂದು ಪೋಸ್ಟ್‌ ಮಾಡುತ್ತಿದ್ದಾರೆ. ಈ ಪೋಸ್ಟ್‌ ಈಗ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ.  

ಆದರೆ  ಫ್ಯಾಕ್ಟ್‌ ಚೆಕ್‌ನಲ್ಲಿ ಈ ಆಟವನ್ನು ಬಿಲ್ ಗೇಟ್ಸ್ ಅಥವಾ ಮೈಕ್ರೋಸಾಫ್ಟ್ ರಚಿಸಿಲ್ಲ ಬದಲಾಗಿ ಫ್ರೆಂಚ್ ಕಂಪನಿಯು ರಚಿಸಿದೆ ಎಂದು ತಿಳಿದುಬಂದಿದೆ.

Tap to resize

Latest Videos

undefined

Claim

ಇತ್ತೀಚೆಗೆ, ಬಿಲ್ ಗೇಟ್ಸ್ ನೇತೃತ್ವದ ಮೈಕ್ರೋಸಾಫ್ಟ್ ಅಭಿವೃದ್ಧಿಪಡಿಸಿದ 1999 ರ ವಿಡಿಯೋ ಗೇಮ್‌ನ ಹೆಸರು ಓಮಿಕ್ರಾನ್ ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ಈ ಆಟವು "ರಾಕ್ಷಸರು ಮನುಷ್ಯರಂತೆ ನಟಿಸುವುದು ಮತ್ತು ಅವರ ಆತ್ಮಗಳನ್ನು ಸಂಗ್ರಹ ಮಾಡುವುದು" ಎಂದು ಹಲವರು ಹೇಳಿದ್ದಾರೆ.

Fact Check

ನೆಟ್ಟಿಗರು ಮಾತನಾಡುತ್ತಿರುವ ವೀಡಿಯೊ ಗೇಮ್‌ನ ನಿಜವಾದ ಹೆಸರು “ಓಮಿಕ್ರಾನ್: ದಿ ನೋಮಾಡ್ ಸೋಲ್” (Omikron: The Nomad Soul) ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ತಿಳಿದುಬಂದಿದೆ. ಈ ಹೆಸರಿನಲ್ಲಿ "ಓಮಿಕ್ರಾನ್" "ಕೆ" ಯೊಂದಿಗೆ ಇರುತ್ತದೆ ಮತ್ತು "ಸಿ" ಅಲ್ಲ ಎಂದು ಗಮನಿಸಬಹುದು. ಈ ವಿಡಿಯೋ ಗೇಮ್‌ ನೀವು IMDB ಯಲ್ಲಿ ಪರೀಕ್ಷೀಸಬಹುದು.


ಈ ವಿಡಿಯೋ ಗೇಮ್ ಅನ್ನು 1999 ರಲ್ಲಿ ಕ್ವಾಂಟಿಕ್ ಡ್ರೀಮ್‌ನಿಂದ (Quantic Dream ) ರಚಿಸಲಾಗಿದೆ ಮತ್ತು ಈಡೋಸ್ ಇಂಟರಾಕ್ಟಿವ್ ಇದನ್ನು ಪ್ರಕಟಿಸಿದೆ. ಕ್ವಾಂಟಿಕ್ ಡ್ರೀಮ್ 1997 ರಲ್ಲಿ ಡೇವಿಡ್ ಕೇಜ್ ಸ್ಥಾಪಿಸಿದ ಪ್ಯಾರಿಸ್ ಮತ್ತು ಮಾಂಟ್ರಿಯಲ್ ಮೂಲದ ಫ್ರೆಂಚ್ ವಿಡಿಯೋ ಗೇಮ್ಸ್ ಡೆವಲಪರ್ ಆಗಿದೆ. ಈ ಗೇಮ್‌ನ ವಿಡಿಯೋ ಕೂಡ ನೀವು ಇಲ್ಲಿ ನೋಡಬಹುದು.

1999 ರಲ್ಲಿ ಮೈಕ್ರೋಸಾಫ್ಟ್ ವಿಂಡೋಸ್ ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೊ ಗೇಮ್ ಅನ್ನು ಬಿಡುಗಡೆ ಮಾಡಲಾಯಿತು ಮತ್ತು ನಂತರ 2000 ರಲ್ಲಿ ಇದನ್ನು ಡ್ರೀಮ್‌ಕಾಸ್ಟ್ ಗೇಮ್ ಕನ್ಸೋಲ್‌ನಲ್ಲಿ (Dreamcast game) ಬಿಡುಗಡೆ ಮಾಡಲಾಯಿತು. ಮೈಕ್ರೋಸಾಫ್ಟ್ ಅಥವಾ ಬಿಲ್ ಗೇಟ್ಸ್ "ಓಮಿಕ್ರಾನ್: ದಿ ನೋಮಾಡ್ ಸೋಲ್" ಅನ್ನು ರಚಿಸಲಿಲ್ಲ ಅಥವಾ ಪ್ರಕಟಿಸಿಲ್ಲ.

ವಿಡಿಯೋ ಗೇಮ್‌ನಲ್ಲೇನಿದೆ?

ವೀಡಿಯೊ ಗೇಮ್ ಅನ್ನು "ಒಮಿಕ್ರಾನ್" ಎಂಬ ಫ್ಯೂಚರಿಸ್ಟಿಕ್ ನಗರದಲ್ಲಿರುವಂತೆ (futuristic city) ತೋರಿಸಲಾಗಿದೆ. ಇದರಲ್ಲಿ ಜನರು ಪ್ರಾಚೀನ ಸೂಪರ್-ಕಂಪ್ಯೂಟರ್ ಮತ್ತು ಕಂಪ್ಯೂಟರ್‌ನ ಆದೇಶಗಳನ್ನು ನಿರ್ವಹಿಸುವ ಕಮ್ಯುನಿಸ್ಟ್ ಸರ್ವಾಧಿಕಾರಿಯಿಂದ ಆಳಲ್ಪಡುತ್ತಾರೆ. ನೊಮಾಡ್ ಸೋಲ್ ತನ್ನ ಕಂಪ್ಯೂಟರ್ ಮೂಲಕ ಓಮಿಕ್ರಾನ್ ಅನ್ನು ಪ್ರವೇಶಿಸುತ್ತಾನೆ ಮತ್ತು ಈ ಫ್ಯೂಚರಿಸ್ಟಿಕ್ ನಗರದಲ್ಲಿ  ಸಿಕ್ಕಿಹಾಕಿಕೊಳ್ಳುತ್ತಾನೆ. ಆಟದಲ್ಲಿನ ಪಾತ್ರಗಳು ತಮ್ಮ ಆತ್ಮಗಳನ್ನು ರಾಕ್ಷಸರಿಂದ ಸಿಕ್ಕಿಬೀಳದಂತೆ ರಕ್ಷಿಸಲು ಹೋರಾಡುತ್ತವೆ. ಈ ಗೇಮ್‌ಗೆ  ಪ್ರಸಿದ್ಧ ಸಂಗೀತಗಾರ ಡೇವಿಡ್ ಬೋವೀ (David Bowie) ಧ್ವನಿ ಒದಗಿಸಿದ್ದಾರೆ.

ಓಮಿಕ್ರೋನ್‌ ಹೆಸರು ಬಂದಿದ್ದು ಹೇಗೆ?

ಮೇ 2021 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು (WHO) ಗ್ರೀಕ್ ವರ್ಣಮಾಲೆಗಳನ್ನು ಬಳಸಿಕೊಂಡು ಕೊರೋನವೈರಸ್‌ನ ಪ್ರಮುಖ ರೂಪಾಂತರಗಳನ್ನು ಹೆಸರಿಸಲು ನಿರ್ಧರಿಸಿದೆ. ಓಮಿಕ್ರಾನ್ ಗ್ರೀಕ್ ವರ್ಣಮಾಲೆಯ ಕ್ರಮದಲ್ಲಿ 15 ನೇ ಅಕ್ಷರವಾಗಿದೆ. ಆದ್ದರಿಂದ, ಓಮಿಕ್ರಾನ್ ಅನ್ನು 1999 ರ ವಿಡಿಯೋ ಗೇಮ್ ಮತ್ತು ಬಿಲ್ ಗೇಟ್ಸ್‌ಗೆ ಲಿಂಕ್ ಮಾಡುವ ವೈರಲ್ ಪಿತೂರಿ ಸಿದ್ಧಾಂತವು ಆಧಾರರಹಿತವಾಗಿದೆ ಎಂದು ಫ್ಯಾಕ್ಟ ಚೆಕ್‌ನಲ್ಲಿ ಸಾಬೀತಾಗಿದೆ.

ಇದನ್ನೂ ಓದಿ:

1) Fact Check: ಕೌಶಲ್ಯಾಭಿವೃದ್ಧಿ ಹೆಸರಿನಲ್ಲಿ ಸೃಷ್ಟಿಸಿರುವ ಈ ನಕಲಿ ಉದ್ಯೋಗಗಳ ಬಲೆಗೆ ಬೀಳದಿರಿ!

2) Rs100 Notes Fact Check: ಹಳೇ ₹100 ಅಮಾನ್ಯ? ಸೋಷಿಯಲ್‌ ಮೀಡಿಯಾ ಪೋಸ್ಟ್:‌ ಎಷ್ಟು ಸತ್ಯ?ಎಷ್ಟು ಸುಳ್ಳು?

3) Narendra Modi Fact Chek: ಪ್ರಧಾನಿ ನಿಜವಾಗ್ಲೂ IAS ಅಧಿಕಾರಿ ಆರತಿ ಡೋಗ್ರಾ ಕಾಲು ಮುಟ್ಟಿ ನಮಸ್ಕರಿಸಿದ್ರಾ

click me!