Asianet Suvarna News Asianet Suvarna News

Fact Check: ಕೌಶಲ್ಯಾಭಿವೃದ್ಧಿ ಹೆಸರಿನಲ್ಲಿ ಸೃಷ್ಟಿಸಿರುವ ಈ ನಕಲಿ ಉದ್ಯೋಗಗಳ ಬಲೆಗೆ ಬೀಳದಿರಿ!

ಕೌಶಲಾಭಿವೃದ್ಧಿ ಸಚಿವಾಲಯದ ಯೋಜನೆ  ಎಂದು ಹೇಳಿಕೊಳ್ಳುವ ವೆಬ್‌ಸೈಟ್  ಅರ್ಜಿ ಶುಲ್ಕವಾಗಿ ₹1,645 ಕೇಳುತ್ತಿದೆ. ಈ ವೆಬಸೈಟ್‌ ನಕಲಿ ಎಂದು ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆ ಪಿಐಬಿ (PIB) ಫ್ಯಾಕ್ಟ್ ಚೆಕ್ ಮೂಲಕ ಸಾಬೀತಾಗಿದೆ.

Fake jobs offered in name of Skill Development Ministry Govt PIB Fact Check  mnj
Author
Bengaluru, First Published Dec 21, 2021, 12:56 PM IST
  • Facebook
  • Twitter
  • Whatsapp

Fact Check: ಉದ್ಯೋಗಾಕ್ಷಿಂಗಳು ನೌಕರಿ ಅವಕಾಶಗಳನ್ನು ಹಡುಕಲು ಅಂತರ್ಜಾಜಾಲದ (Internet) ಮೊರೆ ಹೋಗುವುದು ಸಹಜ. ಒಂದೇ ಕ್ಲಿಕ್‌ನಲ್ಲಿ ಉದ್ಯೋಗ ಹುಡುಕುವವರಿಗೆ ಗೂಗಲ್‌ (Google) ಲಕ್ಷಾಂತರ ರಿಸಲ್ಟ್‌ಗಳನ್ನು ನೀಡುತ್ತದೆ. ಕೆಲವೊಮ್ಮೆ ಈ ವೆಬ್‌ಸೈಟ್‌ಗಳಲ್ಲಿ ನಂಬಲಾರ್ಹವಾದ ಮತ್ತು ಫೇಕ್‌ ಜಾಲ (Original & Fake) ಯಾವುದು ಎಂಬುದನ್ನು ನಿರ್ಧಾರ ಮಾಡಲು ಕೆಲ ಸಮಯ ಬೇಕಾಗುತ್ತದೆ. ಇನ್ನು ಆಕಾಂಕ್ಷಿಗಳನ್ನು ಮೋಸದ ಜಾಲಕ್ಕೆ ಸಿಲುಕಿಸಲೆಂದೇ ಹಲವು ವೆಬ್‌ಸೈಟ್‌ಗಳು, ವಂಚಕರು ಗಾಳ ಹಾಕಿ ಕುಳಿತುಕೊಂಡಿರುತ್ತಾರೆ. ಇಂಥಹ ಜಾಲತಾಣ ವೆಬ್‌ಸೈಟ್‌ಗೆ ಭೇಟಿ ಕೊಟ್ಟರೆ ನಿಮ್ಮ ಸಮಯವೂ ವ್ಯರ್ಥ ಜತೆಗೆ ನಿಮ್ಮ ವೈಯಕ್ತಿಕ ಮಾಹಿತಿಯೂ ಲಿಕ್‌ ಆಗುವ ಸಾಧ್ಯತೆ ಹೆಚ್ಚು.

ಇಂಥಹದ್ದೇ ಒಂದು ಫೇಕ್‌ ವೆಬ್‌ಸೈಟ್ ಈಗ ಜನರಿಗೆ ಮೋಸ ಮಾಡುತ್ತಿದೆ. ಕೌಶಲಾಭಿವೃದ್ಧಿ ಸಚಿವಾಲಯದ ಯೋಜನೆ  ಎಂದು ಹೇಳಿಕೊಳ್ಳುವ ವೆಬ್‌ಸೈಟ್  ಅರ್ಜಿ ಶುಲ್ಕವಾಗಿ ₹1,645 ಕೇಳುತ್ತಿದೆ. ಈ ವೆಬ್ಸೈಟ್‌ ನಕಲಿ ಎಂದು ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆ ಪಿಐಬಿ (PIB) ಫ್ಯಾಕ್ಟ್ ಚೆಕ್ ಮೂಲಕ ಸಾಬೀತಾಗಿದೆ. ಸರ್ಕಾರಿ ಯೋಜನೆಗಳಲ್ಲಿ ನೇಮಕಾತಿಗಾಗಿ ಅರ್ಜಿ ಶುಲ್ಕವಾಗಿ ₹1,645 ಕೇಳುತ್ತಿರುವ ವಂಚನೆಯ ವೆಬ್‌ಸೈಟ್‌ನ ವಿರುದ್ಧ ಸಂಸ್ಥೆ ಶನಿವಾರ ಉದ್ಯೋಗಾಕಾಂಕ್ಷಿಗಳಿಗೆ ಎಚ್ಚರಿಕೆ ನೀಡಿದೆ. 

"A #Fake website 'http://rashtriyaunnatikendra.org' is claiming to be associated with the 'Ministry of Skill Development' and is asking for ₹1645 as an application fee for recruitment in govt. projects:"ಎಂದು PIB  ತಿಳಿಸಿದೆ.

 

 

ರಾಷ್ಟ್ರಿಯ ಉನ್ನತಿ ಕೇಂದ್ರ ಡಾಟ್‌ ಕಾಮ್‌ ( -rashtriyaunnatikendra.org) ಹೆಸರಿನ ವೆಬ್‌ಸೈಟ್‌ ಇದಾಗಿದ್ದು ನಕಲಿ ವೆಬ್‌ಸೈಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿರುವ ಪಿಐಬಿ ಇದನ್ನು ಫೇಕ್‌ ಎಂದು ಹೇಳಿದೆ. ಈ ವೆಬ್‌ಸೈಟ್‌ನ ಸಂಪರ್ಕ ವಿಳಾಸದಲ್ಲಿ ರಾಷ್ಟ್ರೀಯ ಉನ್ನತಿ ಕೇಂದ್ರ, ರಾಜೀವ್ ಗಾಂಧಿ ಟೆಕ್ನಾಲಜಿ ಪಾರ್ಕ್, ಚಂಡೀಗಢ - 160101 ಎಂದ ನಮೂದಿಸಲಾಗಿದೆ. ಅಲ್ಲದೇ ಇದರಲ್ಲಿ ಸ್ಟಾಂಡಪ್‌ ಇಂಡಿಯಾ (Stand Up India), ಮೀಷನ್‌ ಸಾಗರ್‌ (Mission Sagar) ಎಂಬ ಹೆಸರಿನಲ್ಲಿ ಹಲವು ಮಾಹಿತಿಗಳನ್ನು ಹಂಚಿಕೊಳ್ಳಲಾಗಿದೆ. ಜತೆಗೆ ಡಿಜಿಟಲ್‌ ಇಂಡಿಯಾ (Digital India) ಬಗೆಗಿನ ಹಲವು ಮಾಹಿತಿ ನೀಡಲಾಗಿದೆ. ಆದರೆ ಈ ವೆಬ್‌ಸೈಟ್ ಫೇಕ್‌ ಎಂಬುದು ಫ್ಯಾಕ್ಟ್‌ ಚೆಕ್‌ನಲ್ಲಿ ಸಾಬೀತಾಗಿದೆ.

ಸರ್ಕಾರಿ ನೇಮಕಾತಿ ಪ್ರಕಟಣೆಗಳನ್ನು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಷ್ಟ್ರೀಯ ಮಾಹಿತಿ ಕೇಂದ್ರ (NIC)ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಅಧಿಕೃತ ವೆಬ್‌ಸೈಟ್‌ಗಳ (Official Website) ಮೂಲಕ ಮಾತ್ರ ಸೂಚಿಸಲಾಗುತ್ತದೆ. ಸಂಸ್ಥೆಯ ಅಧಿಕೃತ ಟ್ವಿಟರ್ ಹ್ಯಾಂಡಲ್‌ಗಳ ಮೂಲಕ ಉದ್ಯೋಗ ಸೂಚನೆಗಳನ್ನು ಸಹ ಟ್ವೀಟ್ ಮಾಡಲಾಗುತ್ತದೆ. ಉದ್ಯೋಗ ಪತ್ರಿಕೆಯ ಸಾಪ್ತಾಹಿಕ ಆವೃತ್ತಿಗಳಲ್ಲಿ ಉದ್ಯೋಗ ಜಾಹೀರಾತುಗಳನ್ನು ಸಹ ಮುದ್ರಿಸಲಾಗುತ್ತದೆ. ಹಾಗಾಗಿ ಅಂತರ್ಜಾಲದಲ್ಲಿ ಉದ್ಯೋಗ ಪಡೆಯಲು ಯಾವುದೇ ವೆಬ್‌ಸೈಟ್‌ನಲ್ಲಿ ಹಣ ಪಾವತಿಸಿ ಅಪ್ಲಿಕೇಶನ್‌ ಹಾಕುವ ಮುನ್ನ ಅದರ ನೈಜತೆಯನ್ನು ಪರೀಕ್ಷಿಸುವುದು ಒಳಿತು.

Follow Us:
Download App:
  • android
  • ios