ಹಳ್ಳಿ ಬಿಟ್ಟು ಸಿಟಿಗೆ ಬಂದ ಹುಡ್ಗ ಕೆರೆಯಿಂದ ಸಮುದ್ರಕ್ಕೆ ಬಿದ್ದ ಕಥೆ; ಎಕ್ಕ ಟ್ರೇಲರ್ ನೋಡಿದ್ರಾ, ಹೇಗಿದೆ...?!

Published : Jul 12, 2025, 01:58 PM IST
Yuva Rajkumar

ಸಾರಾಂಶ

ಎಕ್ಕ ಕಂಪ್ಲೀಟ್‌ ರಾ. ಈ ಚಿತ್ರದಲ್ಲಿ ಇವರು ಬೇರೆ ರೀತಿಯ ಕಥೆಯನ್ನೆ ಹೇಳುತ್ತಿದ್ದಾರೆ. ಯುವ ಚಿತ್ರದ ನಾಯಕ ನಟ ಯುವರಾಜ್‌ಕುಮಾರ್ ಅವರನ್ನ ಇಲ್ಲಿ ಬೇರೆ ರೀತಿ ತೋರಿಸುತ್ತಿದ್ದಾರೆ. ಎಕ್ಕ ಚಿತ್ರದಲ್ಲಿ ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ನಟಿಸಿದ್ದಾರೆ. ಬಾಲಿವುಡ್‌ನ ಅತುಲ್ ಕುಲಕರ್ಣಿ ಅಭಿನಯಿಸಿದ್ದಾರೆ.

ಯುವ ರಾಜ್‌ಕುಮಾರ್ (Yuva Rajkumar) ಎರಡನೇ ಆಟ ʼಎಕ್ಕʼ ಬಿಡುಗಡೆ ಹೊಸ್ತಿಲಲ್ಲಿದ್ದು, ಸದ್ಯ ಭರದ ಪ್ರಚಾರ ಸಾಗಿದೆ. ಸ್ಯಾಂಡಲ್ವುಡ್ನ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆಗಳು ನಿರ್ಮಿಸಿರೋ ಬಹುನಿರೀಕ್ಷಿತ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಎಕ್ಕ ಪಕ್ಕ ಶೋ ರೀತಿ ಇದೆ. ಹಳ್ಳಿ ಬಿಟ್ಟು ಸಿಟಿಗೆ ಬಂದ ಹುಡ್ಗ ಕೆರೆಯಿಂದ ಸಮುದ್ರಕ್ಕೆ ಬದಿದ್ದ ಕಥೆಯನ್ನು ರೋಹಿತ್‌ ಪದಕಿ ಹೇಳೋದಿಕ್ಕೆ ಹೊರಟಿದ್ದಾರೆ. ಒಬ್ಬ ಸಾಮಾನ್ಯ ಹುಡ್ಗ ಅಂಡರ್‌ ವರ್ಲ್ಡ್‌ ಆಗಿ ಬೆಳೆದ ಕಥೆ ಎಕ್ಕ ಸಿನಿಮಾದ ಹೈಲೆಟ್.‌.,ಯುವ ಮಾಸ್‌ ಆಗಿ ಅಬ್ಬರಿಸಿದ್ದು, ಸಂಜನಾ ಆನಂದ್‌ ಹಾಗೂ ಸಂಪದಾ ನಾಯಕಿಯಾಗಿ ಸಾಥ್‌ ಕೊಟ್ಟಿದ್ದಾರೆ. ‌

ಎಕ್ಕ ಕಂಪ್ಲೀಟ್‌ ರಾ. ಈ ಚಿತ್ರದಲ್ಲಿ ಇವರು ಬೇರೆ ರೀತಿಯ ಕಥೆಯನ್ನೆ ಹೇಳುತ್ತಿದ್ದಾರೆ. ಯುವ ಚಿತ್ರದ ನಾಯಕ ನಟ ಯುವರಾಜ್‌ಕುಮಾರ್ ಅವರನ್ನ ಇಲ್ಲಿ ಬೇರೆ ರೀತಿ ತೋರಿಸುತ್ತಿದ್ದಾರೆ. ಎಕ್ಕ ಚಿತ್ರದಲ್ಲಿ ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ನಟಿಸಿದ್ದಾರೆ. ಬಾಲಿವುಡ್‌ನ ಅತುಲ್ ಕುಲಕರ್ಣಿ ಕೂಡಾ ಅಭಿನಯಿಸಿದ್ದಾರೆ.

ಎಕ್ಕ ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್ ಸಂಗೀತದ ಮೋಡಿ , ಸತ್ಯಾ ಹೆಗಡೆ ಛಾಯಾಗ್ರಹಣ ಚಿತ್ರಕ್ಕಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ, ಕಾರ್ತಿಕ್ ಗೌಡ ಒಟ್ಟಿಗೆ ಸೇರಿ ಈ ಚಿತ್ರವನ್ನ ನಿರ್ಮಿಸಿದ್ದಾರೆ. ಜುಲೈ-18 ರಂದು ಎಕ್ಕ ಸಿನಿಮಾ ಬಿಡುಗಡೆಯಾಗುತ್ತಿದ್ದು, ಯುವರಾಜ್ ಕುಮಾರ್ ಎರಡನೇ ಸಿನಿಮಾ ಇದಾಗಿದೆ. ಎಕ್ಕ ಚಿತ್ರದ ವಿಚಾರಕ್ಕೆ ಬಂದರೆ ಇದು ಪಕ್ಕಾ ರಾ ಕಮರ್ಷಿಯಲ್ ಸಿನಿಮಾ. ಮಾಸ್ ಪ್ರೇಕ್ಷರಕನ್ನು ಗಮನದಲ್ಲಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.

ಯುವ ರಾಜ್‌ಕುಮಾರ್ ನಟನೆಯ 'ಯುವ' ಸಿನಿಮಾಗೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಇದೀಗ ಎಕ್ಕ ಚಿತ್ರಕ್ಕೆ ಕೂಡ ಅದೇ ನಿರೀಕ್ಷೆ ಮನೆಮಾಡಿದೆ. ಜುಲೈ 18ಕ್ಕೆ ಬಿಡುಗಡೆ ಕಾಣಲಿರುವ ಈ ಸಿನಿಮಾ ಕಣ್ತುಂಬಿಕೊಳ್ಳಲು ಯುವ ರಾಜ್‌ಕುಮಾರ್ ಅಭಿಮಾನಿಗಳು ಈಗಾಗಲೇ ರೆಡಿಯಾಗಿದ್ದಾರೆ. ಬಿಡುಗಡೆಯೊಂದೇ ಬಾಕಿ, ಆಮೇಲೆ ಫಲಿತಾಂಶದ ಮಾಹಿತಿ ಇದ್ದೆ ಇದೆಯಲ್ಲ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಇನ್‌ಫ್ಲುಯೆನ್ಸರ್‌ನ್ನು ಮಂಚಕ್ಕೆ ಕರೆದ್ನಾ ಮಾಜಿ ಬಿಗ್ ಬಾಸ್ ಸ್ಪರ್ಧಿ? ಚಾಟ್ ಸ್ಕ್ರೀನ್‌ಶಾಟ್ ಲೀಕ್
2026ರ ಆರಂಭದಲ್ಲೇ ಖ್ಯಾತ ನಟಿ ಬದುಕಲ್ಲಿ ಬಿರುಗಾಳಿ, ಮದ್ವೆಯಾದ ಎರಡೇ ವರ್ಷಕ್ಕೆ ಡಿವೋರ್ಸ್